ಜ್ಯುವೆಲ್ಲರಿ ಪಾರ್ಕ್‌ ಸ್ಥಾಪಿಸಿ ಉದ್ಯೋಗ ಅವಕಾಶ ಕಲ್ಪಿಸಿ: ರವಿ ಶ್ರೀಕಾಂತ್ ಗಾವಂಕರ್‌

KannadaprabhaNewsNetwork |  
Published : Mar 24, 2026, 01:45 AM IST
ಸ | Kannada Prabha

ಸಾರಾಂಶ

ಚಿಕ್ಕಮಗಳೂರುಚಿನ್ನದ ಬೆಲೆ ಹೆಚ್ಚಳದಿಂದ ಶೇ.80 ರಷ್ಟು ಗೋಲ್ಡ್‌ ಸ್ಮಿತ್‌ ಕೆಲಸಗಾರರು ಕೆಲಸವಿಲ್ಲದೆ ಪೇಚಾಡುವಂತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಶ್ರೀಕಾಂತ್ ಗಾವಂಕರ್‌ ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿನ್ನದ ಬೆಲೆ ಹೆಚ್ಚಳದಿಂದ ಶೇ.80 ರಷ್ಟು ಗೋಲ್ಡ್‌ ಸ್ಮಿತ್‌ ಕೆಲಸಗಾರರು ಕೆಲಸವಿಲ್ಲದೆ ಪೇಚಾಡುವಂತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಶ್ರೀಕಾಂತ್ ಗಾವಂಕರ್‌ ಒತ್ತಾಯಿಸಿದ್ದಾರೆ.ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ದೈವಜ್ಞ ಸಂಘ ವಿವಿಧ ಸಂಘಟನೆಗಳೊಂದಿಗೆ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ದೈವಜ್ಞ ಬ್ರಾಹ್ಮಣ ಸಮಾಜ ಸಣ್ಣ ಸಮಾಜವಾಗಿರುವುದರಿಂದ ಹಾವನೂರು ವರದಿಯಲ್ಲಿ 2ಎ ವರ್ಗಕ್ಕೆ ಸೇರ್ಪಡೆಗೊಂಡಿದೆ. ಅದನ್ನೇ ಮುಂದುವರಿಸಿ ಕೊಂಡು ಹೋಗಬೇಕು.

ದೈವಜ್ಞ ಬ್ರಾಹ್ಮಣ ಸಮಾಜ ಸಂಘಟಿತರಾಗಿ ಎಲ್ಲರಿಗೂ ಮಾದರಿಗಿ ನಡೆದುಕೊಳ್ಳಬೇಕಿದೆ. ಚಿನ್ನದ ಬೆಲೆ ಹೆಚ್ಚಾಗಿರುವುದರಿಂದ ಸರ್ಕಾರದಿಂದ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿದರೆ ಕುಲಕಸುಬು ನಡೆಸುವವರಿಗೆ ಉದ್ಯೋಗಾವಕಾಶ ಲಭಿಸುತ್ತದೆ. ಉತ್ತರ ಕನ್ನಡ ಭಾಗ ಅಥವಾ ರಾಜ್ಯದ ಎಲ್ಲಿಯಾದರೂ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿದರೂ ಅನುಕೂಲ ಎಂದು ಹೇಳಿದರು.

ಮುಂಬೈನ ಚಾರಿಟೇಬಲ್ ಟ್ರಸ್ಟ್ಅಧ್ಯಕ್ಷೆ ಶ್ರೀದೇವಿ ಚಂದ್ರಶೇಖರ ರಾವ್ ಮಾತನಾಡಿ, ದೈವಜ್ಞ ಸಮಾಜದ ಮಹಿಳೆಯರು ಸಹಾನುಭೂತಿಯಿಂದ ಸಬಲೆಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.ನಮ್ಮಲ್ಲಿ ಚಿನ್ನದ ಕೆಲಸ ಮಾಡುವ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಇದು ಸರಿಯಲ್ಲ. ಎಷ್ಟೋ ಯುವಕರು ಎಂಜಿನಿಯರ್‌ ಆಗಿದ್ದರೂ ಅವರ ವಿವಾಹ ವಿಚ್ಛೇದನ ಆಗುತ್ತಿದೆ. ಚಿನ್ನದ ಕೆಲಸ ಮಾಡುವ ಯುವಕರನ್ನು ವಿವಾಹವಾದವರು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಇದನ್ನು ಸಮಾಜ ಗಮನಿಸಿ ಚಿನ್ನದ ಕೆಲಸ ಮಾಡುವ ಯುವಕರ ವಿವಾಹ ಸಂಬಂಧ ಹೋರಾಟವನ್ನೇ ನಡೆಸಬೇಕಿದೆ ಎಂದರು.

ಈ ವೇಳೆ ಬೆಂಗಳೂರಿನ ರೈಲ್ವೇ ಇಲಾಖೆ ಸ್ಮಿತಾ ಎಂ.ರೇವಣ್ಣಕರ್, ಸಿದ್ದಾಪುರ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಸಾವಿತ್ರಮ್ಮ ಕಾನಾಸೂರ್, ದೈವಜ್ಞ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಕೀರ್ತಿ ಶೇಟ್, ಮಹಿಳಾ ಸಂಘದ ಅಧ್ಯಕ್ಷೆ ಲತಾ ಸುಧೀರ್, ದೈವ ಜ್ಞಸೌಹಾರ್ಧ ಸಹಕಾರಸಂಘದ ಅಧ್ಯಕ್ಷೆ ಶಾಲಿನಿ ಅಶೋಕ್‌ ರಾಯ್ಕರ್, ಉಪಾಧ್ಯಕ್ಷ ಸುಧಾಕರ ಶೇಟ್, ಸತ್ಯನಾರಾಯಣ ರಾಯ್ಕರ್, ಮಂಗಳೂರು ವಲಯ ಅಧ್ಯಕ್ಷ ಗಜೇಂದ್ರ ಶೇಟ್, ಶಿವಮೊಗ್ಗ ಅಧ್ಯಕ್ಷ ಮಂಜುನಾಥ ಶೇಟ್ ಅಖಿಲ ಕರ್ನಾಟಕದೈವಜ್ಞ ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಸಿಂಗಟಾಲೂರು ವೀರಭದ್ರೇಶ್ವರ ರಥೋತ್ಸವ
ಕಾಡಾನೆ ಹಾವಳಿ ತಡೆಗೆ ಹೆಚ್ಚುವರಿ ಕಂದಕ ನಿರ್ಮಾಣಕ್ಕೆ ಕ್ರಮ:ಖಂಡ್ರೆ