ಕಲಿಕೆಯಲ್ಲಿ ಹಿಂದುಳಿದವರಿಗೆ ಪೂರಕ ವಾತಾವರಣ ನಿರ್ಮಿಸಿದರೆ ಯಶಸ್ಸು

KannadaprabhaNewsNetwork | Published : Feb 6, 2025 11:46 PM

ಸಾರಾಂಶ

ಕಲಿಕೆಯಲ್ಲಿ ನಿಧಾನ ಮತ್ತು ಹಿಂದುಳಿದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಕಲಿಕೆಗೆ ಪೂರಕ, ಕ್ರಿಯಾಶೀಲತೆ, ಚಟುವಟಿಕೆ ವಾತಾವರಣ ನಿರ್ಮಾಣ ಮಾಡಿದರೆ ಅಂತಹ ಮಕ್ಕಳು ಸಹ ಸಂಪೂರ್ಣ ಕಲಿಕೆಗೆ ಒಳಪಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.

ರಾಣಿಬೆನ್ನೂರು:ಕಲಿಕೆಯಲ್ಲಿ ನಿಧಾನ ಮತ್ತು ಹಿಂದುಳಿದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಅವರಿಗೆ ಕಲಿಕೆಗೆ ಪೂರಕ, ಕ್ರಿಯಾಶೀಲತೆ, ಚಟುವಟಿಕೆ ವಾತಾವರಣ ನಿರ್ಮಾಣ ಮಾಡಿದರೆ ಅಂತಹ ಮಕ್ಕಳು ಸಹ ಸಂಪೂರ್ಣ ಕಲಿಕೆಗೆ ಒಳಪಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು. ನಗರದ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ರಾಣಿಬೆನ್ನೂರು ಕ್ಲಸ್ಟರ್-3 ವ್ಯಾಪ್ತಿಯ ಶಾಲೆಗಳ 1ರಿಂದ 5ನೇ ತರಗತಿಯ ಎಫ್‌ಎಲ್‌ಎನ್ ಚಟುವಟಿಕೆಗಳ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕಾ ಹಬ್ಬದ ವಿಶೇಷತೆ ಕುರಿತು ಕ್ಷೇತ್ರ ಸಮನ್ವಯ ಅಧಿಕಾರಿ ಎಲ್. ಮಂಜನಾಯ್ಕ ಹಾಗೂ ಕಲಿಕಾ ನಿರ್ವಹಣೆಯಲ್ಲಿ ಶಿಕ್ಷಕರು ಮತ್ತು ಮಕ್ಕಳ ಜವಾಬ್ದಾರಿ ಕುರಿತು ಮುಖ್ಯ ಶಿಕ್ಷಕ ಬಿ.ಪಿ. ಶಿಡೇನೂರ ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಶಿರಿನ್‌ಬಾನು ದಾವಣಗೆರೆ ಅಧ್ಯಕ್ಷತೆ ವಹಿಸಿದ್ದರು. ಬಿಆರ್‌ಪಿ ಎನ್. ನಾಗರಾಜ, ಸಿಆರ್‌ಪಿಗಳಾದ ಬಿ.ಎಸ್. ಮೂಕನಗೌಡ್ರ, ರಾಜು ಉಕ್ಕುಂದ, ತುಳಜಾಭವಾನಿ, ಮುಖ್ಯೋಪಾಧ್ಯಾಯ ಎಂ.ಎಫ್. ಈಳಿಗೇರ, ಎಚ್.ಆರ್.ಯಲಿವಾಳ, ಎಂ.ಎಚ್. ಸಾವಂತಲವರ, ಎನ್.ಎಚ್. ಕರೆಗೌಡ್ರು, ಎಚ್.ಎಂ. ಸುತಾರ, ಬಿ.ಎಸ್. ಕರಿಮಲ್ಲಣ್ಣನವರ, ಬಿ.ಕೆ. ಬಿಷ್ಟಣ್ಣನವರ, ಜಿ.ಟಿ. ಬಾಲಣ್ಣನವರ, ಎಸ್.ಎಸ್. ಅಳಲಗೇರಿ, ಎಸ್,ಆರ್. ಉದಗಟ್ಟಿ, ಭಕ್ತವತ್ಸಲ, ಆನಂದ ಹಾವನೂರ, ಎಸ್‌ಡಿಎಂಸಿ ಸರ್ವ ಸದಸ್ಯರು, ಕ್ಲಸ್ಟರ್‌ನ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ನಂತರ ಎಫ್‌ಎಲ್‌ಎನ್ ಚಟುವಟಿಕೆಗಳು, ಗಟ್ಟಿ ಓದು, ಜ್ಞಾಪಕ ಶಕ್ತಿ, ಕೈಬರಹ. ರಸ ಪ್ರಶ್ನೆ, ಕಥೆ ಹೇಳುವುದು, ಸಂತೋಷದಾಯಕ ಗಣಿತ ಮುಂತಾದ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜರುಗಿದವು.ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಹಾವೇರಿ ಡಯಟ್ ಉಪನ್ಯಾಸಕರುಗಳಾದ ಎಂ. ಶಶಿಕಲಾ, ವಿಜಯಾ ಪಾಟೀಲ , ಬಿಆರ್‌ಪಿ ರಾಜೇಶ ಮುದ್ದಿ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು.

Share this article