ಸ್ವ ಸಹಾಯ ಗುಂಪುಗಳಿಗೆ ಸಾಲ ಮಾಹಿತಿ ಮೇಳ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಕಮಲನಗರ ಪಟ್ಟಣದ ಡಾ.ಚನ್ನಬಸವೇಶ್ವರ ಮಠದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಲಕಪತಿ ದಿದಿ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ನೀಡುವ ಕುರಿತು ಸಾಲ ಮೇಳ ಜರುಗಿತು. ತಾಲೂಕು ಪಂಚಾಯಿತಿ ಅಧಿಕಾರಿ ಮಾಣಿಕರಾವ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಸ್ವ ಸಹಾಯ ಸಂಘದ ಮಹಿಳೆಯರು ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡುವುದು, ದಾಖಲೆಗಳನ್ನು ಬರೆಯುವುದು, ಪ್ರತಿ ತಿಂಗಳು ಸಭೆ ಮಾಡುವುದು, ಚಟುವಟಿಕೆಗಳನ್ನು ಮಾಡುವುದರ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು

ಕನ್ನಡಪ್ರಭ ವಾರ್ತೆ ಕಮಲನಗರ

ಕಮಲನಗರ ಪಟ್ಟಣದ ಡಾ.ಚನ್ನಬಸವೇಶ್ವರ ಮಠದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಲಕಪತಿ ದಿದಿ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ನೀಡುವ ಕುರಿತು ಸಾಲ ಮೇಳ ಜರುಗಿತು.

ತಾಲೂಕು ಪಂಚಾಯಿತಿ ಅಧಿಕಾರಿ ಮಾಣಿಕರಾವ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಸ್ವ ಸಹಾಯ ಸಂಘದ ಮಹಿಳೆಯರು ಪ್ರತಿ ತಿಂಗಳು ಸಾಲ ಮರು ಪಾವತಿ ಮಾಡುವುದು, ದಾಖಲೆಗಳನ್ನು ಬರೆಯುವುದು, ಪ್ರತಿ ತಿಂಗಳು ಸಭೆ ಮಾಡುವುದು, ಚಟುವಟಿಕೆಗಳನ್ನು ಮಾಡುವುದರ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ವಿಶ್ವಕರ್ಮ ಯೋಜನೆಯಡಿ ಕಸಬು ಮಾಡಲು ಒಂದು ಕುಟುಂಬಕ್ಕೆ ಒಂದೇ ಅರ್ಜಿಯನ್ನು ಹಾಕಲು ತಿಳಿಸಿದರು. ಜೊತೆಗೆ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ಕುರಿ ಶೆಡ್, ಕೋಳಿ ಶೆಡ್ ಮಾಡಿಕೊಳ್ಳಲು ಆಸಕ್ತಿ ಇರುವ ಫಲಾನುಭವಿಗಳು ನರೇಗಾ ಕ್ರಿಯಾ ಯೋಜನೆಯ ಕಾಮಗಾರಿಗಾಗಿ ಹೆಸರು ನಮೂದಿಸಿ ಎಂದರು.

ಸಹಾಯಕ ನಿರ್ದೇಶಕರಾದ (ಪಂರಾ) ಶಿವಕುಮಾರ ಘಾಟೆ ಮಾತನಾಡಿ, ಪ್ರತಿಯೊಬ್ಬರು ಉಳಿತಾಯದ ಆಧಾರದ ಮೇಲೆ ಹಾಗೂ ಸಾಲ ಮರುಪಾವತಿ ಮಾಡುವುದರಿಂದ ಎಲ್ಲಾ ಬ್ಯಾಂಕ್ ನವರು ಸಾಲ ಕೊಡಲು ಮುಂದೆ ಬರುತ್ತಾರೆ. ಸಾಲ ಪಡೆದುಕೊಂಡು ರೊಟ್ಟಿ, ಹಪ್ಪಳ, ಹೈನುಗಾರಿಕೆ, ಕೃಷಿ ಚಟುವಟಿಕೆ, ಮಾಡಲು ತಿಳಿಸಿದರು.

ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕರಾದ ಸುಮೀತ ಮಾತನಾಡಿ, ನಮ್ಮ ಬ್ಯಾಂಕ್‌ಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಉಳಿತಾಯದ ಆಧಾರದ ಮೇಲೆ ಸಾಲ ಕೊಡುತ್ತೆವೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಎಡಿಓ ಸಂತೋಷ ಅವರು ಸಾಲ ಕೊಡಬೇಕಾದರೆ ತಮ್ಮಲ್ಲಿ ಸ್ವ ಸಹಾಯ ಸಂಘದಿಂದ ಯೋಜನೆಯನ್ನು ಸಿದ್ದಪಡಿಸಿ, ಬ್ಯಾಂಕ್ ಗೆ ಸಲ್ಲಿಸಬೇಕು ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡಲು ತಿಳಿಸಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಅಶೋಕ ಪಾಟೀಲ ಸ್ವ ಸಹಾಯ ಸಂಘದ ಮಹಿಳೆಯರ ಜೊತೆ ಸಾಲ ಮತ್ತು ಮರುಪಾವತಿ ಬಗ್ಗೆ ಚರ್ಚಿಸಿದರು.

ಕವಿತಾ ಬಿರಾದಾರ, ಪಿಕೆಜಿಬಿ ವ್ಯವಸ್ಥಾಪಕರಾದ ಉದಯಕುಮಾರ, ತಾಲೂಕು ವ್ಯವಸ್ಥಾಪಕ ನಾಗಪ್ಪ, ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಎಂಐಎಸ್ ಸಂಯೋಜಕರಾದ ಯಶವಂತ, ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಇತರರು ಇದ್ದರು.

Share this article