ಹಳಿ ದಾಟುವಾಗ ರೈಲಿಗೆ ಸಿಲುಕಿ ಮೊಸಳೆ ಸಾವು

KannadaprabhaNewsNetwork | Updated : Oct 07 2023, 11:14 AM IST

ಸಾರಾಂಶ

ಗದಗದಲ್ಲಿ ಹಳಿ ದಾಟುವ ವೇಳೆ ರೈಲು ಹರಿದು ಸುಮಾರು 8 ಅಡಿ ಉದ್ದದ ಮೊಸಳೆಯೊಂದರ ದೇಹ ತುಂಡರಿಸಿ ಮೃತಪಟ್ಟಿದೆ. ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಬಳಿ ಈ ಘಟನೆ ಜರುಗಿದೆ.
ಗದಗ: ಹಳಿ ದಾಟುವ ವೇಳೆ ರೈಲು ಹರಿದು ಸುಮಾರು ಎಂಟು ಅಡಿ ಉದ್ದದ ಮೊಸಳೆಯೊಂದರ ದೇಹ ತುಂಡರಿಸಿ ಸಾವನ್ನಪ್ಪಿರುವ ಘಟನೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಬಳಿ ಜರುಗಿದೆ. ಹಳಿ ದಾಟುವ ವೇಳೆ ಹೀಗೆ ರೈಲಿಗೆ ಸಿಲುಕಿರುವ ಮೊಸಳೆಯು ಹತ್ತಿರದ ಮಲಪ್ರಭಾ ನದಿಯಿಂದ ಹೊರಬಂದಿರುವ ಶಂಕೆ ವ್ಯಕ್ತವಾಗಿದೆ. ರೈಲು ಹರಿದ ರಭಸಕ್ಕೆ ಮೊಸಳೆಯ ತಲೆ ಹಾಗೂ ಬಾಲ ಕತ್ತರಿಸಿ ಬಿದ್ದಿದ್ದು, ಮೊಸಳೆಯನ್ನು ಸ್ಥಳೀಯರು ತೆರವುಗೊಳಿಸಿದರು. ಘಟನೆ ಹಿನ್ನೆಲೆಯಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸ್ಟೇಟ್‌) ಫೊಟೋ: ಮೊಸಳೆ

Share this article