-ಸುರಪುರದಲ್ಲಿ ಗೊಬ್ಬರದಂಗಡಿ ಪರವಾನಗಿ ರದ್ದತಿಗೆ ಆಗ್ರಹ
ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪಟ್ಟಣದ ಆಗ್ರೋ ಏಜೆನ್ಸಿಯವರು ಎಂ.ಬೊಮ್ಮನಹಳ್ಳಿ ಗ್ರಾಮದ ರೈತನಾದ ರಾಮನಗೌಡರಿಗೆ ನಕಲಿ ಕ್ರಿಮಿನಾಶಕ ನೀಡಿ ವಂಚಿಸಿದ್ದಾರೆ. ಇದರಿಂದ ತನ್ನ ಜಮೀನಿನಲ್ಲಿದ್ದ ಹತ್ತಿ ಬೆಳೆಗೆ ಸಿಂಪಡಿಸಿದಾಗ ಬೆಳೆ ಸುಟ್ಟು ಹೋಗಿ ನಾಶವಾಗಿದೆ. ಸುಮಾರು 5 ರಿಂದ 6 ಲಕ್ಷ ರು.ಗಳ ಬೆಳೆ ನಷ್ಟವಾಗಿದೆ. ಹಲವಾರು ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಗೊಬ್ಬರ ವಿತರಿಸಿ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಪರಶುರಾಮ ಬೋನ್ಹಾಳ, ಉಪಾಧ್ಯಕ್ಷ ರವಿ ಮಾಳಳ್ಳಿಕರ್, ರಾಮು ಯಾಳಗಿ, ಸಾಯಬಣ್ಣ ಚೆನ್ನೂರು, ಶ್ರೀಕಾಂತ ಮೋಪಗಾರ, ಪರಶುರಾಮ ಕಟ್ಟಿಮನಿ ಇದ್ದರು.-----
31ವೈಡಿಆರ್4: ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಕಲಿ ಕ್ರಿಮಿನಾಶಕ ನೀಡಿದ ಅಂಗಡಿ ಪರವಾನಗಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.