ಹಸಿರು ವಿಜಯಪುರಕ್ಕೆ ಕೋಟಿ ವೃಕ್ಷ ಅಭಿಯಾನ

KannadaprabhaNewsNetwork |  
Published : Jul 02, 2025, 11:48 PM ISTUpdated : Jul 03, 2025, 01:24 PM IST
ನಗರದ ಹೊರವಲಯದ ತೊರವಿ ಬಳಿ ಪೊಲೀಸ್ ವಸತಿ ಗೃಹದ ಆವರಣದಲ್ಲಿ 1800 ಗಿಡಗಳನ್ನು ನೆಡುವ ಕಾರ್ಯಕ್ಕೆ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದರು. | Kannada Prabha

ಸಾರಾಂಶ

  ಪರಿಸರ ದಿನ ಎಂಬುದು ವರ್ಷಕ್ಕೊಮ್ಮೆ ಬರುವ ವೃತಾಚರಣೆಯಲ್ಲ. ಅದು ನಿತ್ಯಾರಾಧನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

 ವಿಜಯಪುರ :  ಪರಿಸರ ದಿನ ಎಂಬುದು ವರ್ಷಕ್ಕೊಮ್ಮೆ ಬರುವ ವೃತಾಚರಣೆಯಲ್ಲ. ಅದು ನಿತ್ಯಾರಾಧನೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಹೊರವಲಯದ ತೊರವಿ ಬಳಿಯ ಪೊಲೀಸ್ ವಸತಿ ಗೃಹದ ಆವರಣದಲ್ಲಿ 1800 ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಸಿರೀಕರಣ ಕೆಲಸ ಮುಂದುವರೆದಿದೆ. ಹಸಿರು ವಿಜಯಪುರ ರೂಪಿಸಬೇಕೆಂಬ ಸಂಕಲ್ಪಕ್ಕೆ ಕೋಟಿ ವೃಕ್ಷ ಅಭಿಯಾನ ಒಳಗೊಂಡಂತೆ ಜಿಲ್ಲಾದ್ಯಂತ ದೊರಕುತ್ತಿರುವ ಸ್ಪಂದನೆ ಹೃದಯ ತುಂಬುವ ಸಂತಸ ನೀಡಿದೆ. ಈ ಹಸಿರು ಅಭಿಯಾನ ಮುಂದುವರೆಯಲಿದ್ದು, ನಮ್ಮ ಬಸವ ನಾಡು ಇನ್ನಷ್ಟು ಸುಂದರವಾಗಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಕುಶನಾಳ, ಸಹಾಯಕ ಸಂರಕ್ಷಣಾಧಿಕಾರಿ ಭಾಗ್ಯವಂತ ಮಸೂದಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ವಿಜಯಪುರ ಅಲ್ ಅಮೀನ್ ಮೆಡಿಕಲ್ ಇನ್‌ಸ್ಟಿಟ್ಯೂಷನ್ಸ್ ಡೈರೆಕ್ಟರ್ ಡಾ.ಬಿ.ಎಸ್.ಪಾಟೀಲ, ತಿಕೋಟಾ ತಿಕೋಟಾ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗುರು ದಾಶ್ಯಾಳ, ತೊರವಿ ಗ್ರಾಮದ ಮುಖಂಡರಾದ ಸುರೇಶಗೌಡ ಪಾಟೀಲ, ಕೆ. ಕೆ.(ಸುರೇಶಗೌಡ) ಪಾಟೀಲ, ಮಂಜುನಾಥ ನಡಗಡ್ಡಿ, ಅಡಿವೆಪ್ಪ ಸಾಲಗಲ, ಸಿದ್ದು ರಾಯಣ್ಣವರ, ಗುರು ದಾಶ್ಯಾಳ, ಸುರೇಶ ಗಚ್ಚಿನಮನಿ, ವಿಜು ರಾಠೋಡ, ನಾನು ರಾಠೋಡ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ