ಕೊಡಗಿನ ವಿವಿಧೆಡೆ ಭರ್ಜರಿ ಮಳೆ

KannadaprabhaNewsNetwork |  
Published : May 06, 2026, 02:45 AM IST
ಚಿತ್ರ : 5ಎಂಡಿಕೆ5 : ಮಡಿಕೇರಿಯಲ್ಲಿ ಸುರಿದ ಮಳೆ.  | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ವಾತಾವರಣ ಕೂಡಿದ್ದ ಜಿಲ್ಲೆಯಲ್ಲಿ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ವಾತಾವರಣ ಕೂಡಿದ್ದ ಜಿಲ್ಲೆಯಲ್ಲಿ ಮಳೆಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಮಳೆಯಿಂದಾಗಿ ಇಳೆ ತಂಪಾಗಿದ್ದು, ಉತ್ತಮ ವಾತಾವರಣ ಕಂಡುಬಂದಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಾತ್ರಿ ಕೆಲ ಕಾಲ ಭರ್ಜರಿಯಾಗಿ ಮಳೆ ಸುರಿಯಿತು. ಉಳಿದಂತೆ ಸಿದ್ದಾಪುರ, ಸುಂಟಿಕೊಪ್ಪ, ಎಡಪಾಲ, ಕುಂದಚೇರಿ, ಕುಟ್ಟಂದಿ, ಬಿಟ್ಟಂಗಾಲ, ಪಾಲಿಬೆಟ್ಟ, ವಿ. ಬಾಡಗ, ಬಾವಲಿ, ಹಾತೂರು, ತಿತಿಮತಿ, ಕೈಕೇರಿ, ಸುಳುಗೋಡು, ನೋಕ್ಯಾ, ನಲ್ಲೂರು, ಕುಟ್ಟ, ಬಿರುನಾಣಿ, ಜೋಡುಬೀಟಿ, ಕುಗ್ಗಾಲು, ಕಡಗದಾಳು, ಶ್ರೀಮಂಗಲ, ಕುಂದ, ಕೊಳತೋಡು, ಮೈತಾಡಿ ಸೇರಿದಂತೆ ಹಲವು ಕಡೆಯಲ್ಲಿ ಮಳೆಯ ಸಿಂಚನವಾಗಿದೆ.

----------------------------------------------------

ಕರ್ತವ್ಯದ ವೇಳೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್‌ ಯೋಧ ಆತ್ಮಹತ್ಯೆ

ಸೋಮವಾರಪೇಟೆ: ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ಸಿಆರ್‌ಪಿಎಫ್ ಯೋಧ ಕೆ.ಜೆ. ನವೀನ್ ಕುಮಾರ್ ಸೋಮವಾರ ಮಧ್ಯಾಹ್ನದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಮ್ಮು ಕಾಶ್ಮೀರದ ೧೮೦ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು ತಾಲೂಕಿನ ಯಡವಾರೆ ಗ್ರಾಮದ ಕಾಫಿ ಬೆಳೆಗಾರರಾದ ಕಾಜೂರು ಕೀಜನ ಜೋಯಪ್ಪ ಅವರ ಪುತ್ರರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೃತದೇಹ ಮಂಗಳವಾರ ರಾತ್ರಿ ಸ್ವ ಗ್ರಾಮಕ್ಕೆ ಬರಲಿದ್ದು, ಬುಧವಾರ ಮಧ್ಯಾಹ್ನ ೧೨ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಟ್ವಾಳದಲ್ಲಿ ಬಿಜೆಪಿ ಸಂಭ್ರಮಾಚರಣೆ
ಪುತ್ತೂರು : ಅಕ್ಷಯ ಪದವಿ ಕಾಲೇಜ್‌ ತಸ್ತ್ರೀಯ ಫುಡ್ ಫೆಸ್ಟ್