ಬೀದಿನಾಯಿಗಳಿಗೆ ಕ್ರೌರ್ಯ: ನಾಲ್ವರ ವಿರುದ್ಧ ಎಫ್ಐಆರ್

KannadaprabhaNewsNetwork |  
Published : Sep 22, 2026, 02:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಪ್ರಾಣಿ ಹಕ್ಕುಗಳ ಹೋರಾಟಗಾರ ಯೋಗರಾಜ ಶಿವಾಜಿ ಕರಾಂಡೆ ಅವರು ನೀಡಿದ ದೂರಿನ ಅನ್ವಯ, ಹಳಿಯಾಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಳಿಯಾಳ: ಬೀದಿನಾಯಿಗಳಿಗೆ ಹಿಂಸೆ ನೀಡಿದ ಆರೋಪದ ಮೇಲೆ ತಾಲೂಕಿನ ಪ್ರತಿಷ್ಠಿತ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ನಾಲ್ವರು ಅಧಿಕಾರಿಗಳ ವಿರುದ್ಧ ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಾಣಿ ಹಕ್ಕುಗಳ ಹೋರಾಟಗಾರ ಯೋಗರಾಜ ಶಿವಾಜಿ ಕರಾಂಡೆ ಅವರು ನೀಡಿದ ದೂರಿನ ಅನ್ವಯ, ಹಳಿಯಾಳ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದೂರಿನ ಆಧಾರದ ಮೇಲೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಪ್ರಮುಖ ಅಧಿಕಾರಿಗಳಾಗಿರುವ ರಾಜೇಂದ್ರ ಆಚಾರಿ, ರಮೇಶ ರೆಡ್ಡಿ, ಶಂಕರ ಅಗಡಿ ಹಾಗೂ ನೀತಾ ಎಲ್ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸೆ. 19 ಮತ್ತು ಸೆ. 20ರಂದು ಕಾರ್ಖಾನೆಯ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬೀದಿನಾಯಿಗಳನ್ನು 20ರಿಂದ 30 ಜನರು ತಂಡವು ಹಿಂಸಾತ್ಮಕವಾಗಿ ಹಿಡಿದು ಅಕ್ರಮವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ. ಅಲ್ಲದೇ, ಸುಮಾರು 6 ನಾಯಿಗಳನ್ನು ಹಿಡಿದು ಮಹೀಂದ್ರಾ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾಗ ಕಾರ್ಖಾನೆಯ ಆವರಣದಲ್ಲಿಯೇ ಸಿಕ್ಕಿಬಿದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಧಿಕಾರಿಗಳ ತಂಡದ ಭೇಟಿ: ಸೋಮವಾರ ಹಳಿಯಾಳ ಪಶು ವೈದ್ಯಕೀಯ ಇಲಾಖೆಯ ವೈದ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯರು ವಾಹನದಲ್ಲಿ ಬಂಧಿಸಿಟ್ಟಿದ್ದ ನಾಯಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಾಯಿಗಳ ಮೇಲೆ ಹಲ್ಲೆ ನಡೆದಿರುವುದು ಸ್ಪಷ್ಟವಾಗಿರುವುದು ಕಂಡುಬಂದಿದೆ. 90 ಸಾವಿರ ರು. ಮೌಲ್ಯದ ಅಡಕೆ ಕಳ್ಳತನ

ಅಂಕೋಲಾ: ತಾಲೂಕಿನ ಹಳವಳ್ಳಿ ಪುನರ್ವಸತಿ ಕೇಂದ್ರದ ಮನೆಯೊಂದಕ್ಕೆ ಕಳ್ಳರು ನುಗ್ಗಿ ಅಡಕೆ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ರಾಮಕೃಷ್ಣ ನರಸಿಂಹ ಹರಿಮನೆ ಅವರ ಮನೆ ಕಳ್ಳತನಕ್ಕೆ ಒಳಗಾಗಿದೆ. ತಾವು ಬೆಳೆದ ಅಡಕೆಯನ್ನು ಅವರು ಸಂಸ್ಕರಿಸಿ ತಲಾ 71 ಕೆಜಿಯಂತೆ ಚೀಲ ತುಂಬಿಸಿ ಅದನ್ನು ತಮ್ಮ ಮನೆ ಹಿಂದಿನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದರು.ಸೆ. 14ರ ಬೆಳಗ್ಗೆ 10 ಗಂಟೆಯವರೆಗೂ ಅವರ ಗೋದಾಮಿನಲ್ಲಿದ್ದ ಎಲ್ಲ ಅಡಕೆ ಸರಿಯಾಗಿಯೇ ಇದ್ದವು. ಸೆ. 18ರ ಬೆಳಗ್ಗೆ 10 ಗಂಟೆಗೆ ಗಮನಿಸಿದಾಗ ಮೂರು ಅಡಕೆ ಚೀಲ ಕಡಿಮೆ ಕಾಣಿಸಿದೆ.

ಗೋದಾಮಿನ ಬಾಗಿಲ ಲಾಕ್ ಮುರಿದ ಕಳ್ಳರು ಒಳಗೆ ನುಗ್ಗಿ ಅಡಕೆ ಚೀಲ ಅಪಹರಿಸಿದ್ದಾರೆ. ಅದರಿಂದ 90 ಸಾವಿರ ರು. ನಷ್ಟವಾಗಿದೆ. ಈ ಕುರಿತು ರಾಮಕೃಷ್ಣ ಹರಿಮನೆ ಸೋಮವಾರ ದೂರು ನೀಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ