ಜನಪದ ಆಸಕ್ತಿ ಬೆಳೆಸಿಕೊಳ್ಳಿ : ಇಮಾಮ್‌ ಸಾಬ್

KannadaprabhaNewsNetwork |  
Published : Nov 16, 2024, 12:36 AM IST
ಸುರಪುರ ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನಡೆದ ಜಾನಪದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸುರಪುರ: ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿ ಸಮುದಾಯ ಹಾಗೂ ಯುವ ಪೀಳಿಗೆ ಯಾವುದೇ ಲಿಪಿ, ಪುಸ್ತಕವಿಲ್ಲದ ಬಾಯಿಯಿಂದ ಬಾಯಿಗೆ ಹರಡುವ ಜನಪದದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಇಮಾಮಸಾಬ್ ವಲ್ಲೆಪ್ಪನವರ ಕರೆ ನೀಡಿದರು.

ಸುರಪುರ: ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿ ಸಮುದಾಯ ಹಾಗೂ ಯುವ ಪೀಳಿಗೆ ಯಾವುದೇ ಲಿಪಿ, ಪುಸ್ತಕವಿಲ್ಲದ ಬಾಯಿಯಿಂದ ಬಾಯಿಗೆ ಹರಡುವ ಜನಪದದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಇಮಾಮಸಾಬ್ ವಲ್ಲೆಪ್ಪನವರ ಕರೆ ನೀಡಿದರು.

ನಗರದ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಮಂಗಳವಾರ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾನಪದ ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕ ಶರಣಗೌಡ ಪಾಟೀಲ್ ಮಾತನಾಡಿ, ಇಂದಿನ ಯುವಜನರು ಮತ್ತು ವಿದ್ಯಾರ್ಥಿ ಸಮುದಾಯ ನಮ್ಮ ಸ್ಥಳೀಯ ಕಲೆಗಳು ಮತ್ತು ಕಲಾವಿದರು, ಜಾನಪದ ಕಲೆ, ಪರಂಪರೆ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಜಾನಪದ ಸಾಹಿತ್ಯ ಅಧ್ಯಯನದಲ್ಲಿ ಹೆಚ್ಚು-ಹೆಚ್ಚು ತೊಡಗಿಸಿಕೊಂಡು ಮೂಲ ಸಂಸ್ಕೃತಿಯಾದ ಜಾನಪದವನ್ನು ಉಳಿಸಿ, ಬೆಳೆಸಬೇಕು ಎಂದರು.

ಜಾನಪದವನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ. ಇಲ್ಲವಾದಲ್ಲಿ ನಗರೀಕರಣ, ಪಾಶ್ಚಾತೀಕರಣ, ವಿದೇಶೀಕರಣ ಈ ಸಂದರ್ಭದಲ್ಲಿ ಬೇರೆ ಸಂಸ್ಕೃತಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಇದೇ ವೇಳೆ ಜಾನಪದ ಕಲಾವಿದರಾದ ಬಸಣ್ಣ ಗೂಡಿಕಾರ ಕಕ್ಕೇರಾ, ಮಹಾದೇವಪ್ಪ ವಜ್ಜಲ್ ಕೆಂಭಾವಿ, ಭೀಮಣ್ಣ ಮಸರಕಲ್, ಶಿವಣ್ಣಗೌಡ ಚಡಚಣ, ರಾಮಚಂದ್ರ ರಾವುತ್, ನಿಂಗಪ್ಪ ನಾವಿ, ಈರಯ್ಯ ಹಿರೇಮಠ, ದೇವಪ್ಪ ಕಟಬಿ, ಸುಖದೇವ ಮೊರೆ ಸೇರಿದಂತೆ ವಿವಿಧ ಕಲಾವಿದರನ್ನು ಸನ್ಮಾನಿಸಲಾಯಿತು.ಕೆಂಭಾವಿ ಸಂಸ್ಥಾನ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಕಾಶ ಸಜ್ಜನ್, ಡಾ.ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಶಿವು ಬಳಿಚಕ್ರ, ಹಿರಿಯ ಮುಖಂಡರಾದ ಶಿವಶರಣಪ್ಪ ಹೆಡಿಗಿನಾಳ, ಕಾಲೇಜಿನ ಪ್ರಾಚಾರ್ಯ ವೀರೇಶ ಹಳಿಮನಿ, ಜನಪದ ಸಂಘಟಕ ಶ್ರೀಕಾಂತ ರತ್ತಾಳ, ಉಪನ್ಯಾಸಕ ಬಲಭೀಮ ಪಾಟೀಲ್ ವೇದಿಕೆ ಮೇಲಿದ್ದರು.

ಮಾನಯ್ಯ ರುಕ್ಮಾಪೂರ ಸ್ವಾಗತಿಸಿದರು. ದೇವಿಂದ್ರಪ್ಪ ಧೋತ್ರೆ ನಿರೂಪಿಸಿದರು. ಶ್ರೀಕಾಂತ ನಸಲವಾಯಿ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ