ಕನ್ನಡಪ್ರಭ ವಾರ್ತೆ ಸುರಪುರ
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ 2023-24ನೇ ಸಾಲಿನ ಎನ್‌ಎಸ್‌ಎಸ್, ಕ್ರೀಡೆ, ಸಾಂಸ್ಕೃತಿಕ, ರಿಬ್ಬನ್ ಕ್ಲಬ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ಅಭ್ಯಾಸ ಅಂಕ ಪಡೆದು ಉದ್ಯೋಗ ಪಡೆಯಬೇಕು. ತಂದೆ-ತಾಯಂದಿರಿಗೆ ಹೆಸರು ತರಬೇಕು ಎಂದರು.ವಿಶ್ರಾಂತ ಪ್ರಾಂಶುಪಾಲ ಡಾ. ರಾಘವೇಂದ್ರ ಗುಡಗುಂಟಿ ಮಾತನಾಡಿ, ಶಿಕ್ಷಕರೇ ಶಕ್ತಿಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉಪನ್ಯಾಸಕರನ್ನು ವಿದ್ಯಾಭ್ಯಾಸಕ್ಕೆ ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಂಕ ಪಡೆಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಈಗಿನಿಂದಲೇ ಅಭ್ಯಾಸ ಮಾಡಬೇಕು. ಅಮೂಲ್ಯವಾದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಸರಕಾರಿ ಉದ್ಯೋಗ ಪಡೆಯಲು ಮುಂದಾಗಬೇಕು ಎಂದರು.
ವಿದ್ಯಾರ್ಥಿಗಳಾದ ರತ್ನಾ, ಪ್ರಜಾ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಂಶುಪಾಲರಾದ ಆನಂದಕುಮಾರ ಜೋಶಿ, ಶಹಾಪುರದ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸಿದ್ಧಪ್ಪ ದಿಗ್ಗಿ, ಶೋಭಾ ಎಂ. ಶೆಟ್ಟಿ ಪ್ರಾಧ್ಯಾಪಕರು, ವಿಶ್ವನಾಥರೆಡ್ಡಿ, ಎನ್ನೆಸ್ಸೆಸ್ ಅಧಿಕಾರಿ ಬಲಭೀಮರಾಯ ದೇಸಾಯಿ, ವೆಂಕೋಬ ಬಿರಾದಾರ, ಹಣಮಂತ ವಗ್ಗರ್, ಡಾ. ರಮೇಶ ಬಿ. ಶಹಾಪುರಕರ್, ರೂಪಲಕ್ಷ್ಮಿ ಕುಲಕರ್ಣಿ, ಪ್ರೊ. ದೇವಿಂದ್ರಪ್ಪ ಪಾಟೀಲ, ಡಾ. ಗುರುರಾಜ ನಾಗಲೀಕರ, ಡಾ. ಪ್ರಮೋದ ಕುಲಕರ್ಣಿ, ಶಶಿಕಲಾ ಎಸ್. ಪಾಟೀಲ, ಡಾ. ದೇವು ಹೆಬ್ಬಾಳ, ಡಾ. ರವಿ ಇತರರಿದ್ದರು.