ಸಂಸ್ಕೃತಿಯ ಶ್ರೀಮಂತಿಕೆಯ ಕೃತಿಗಳ ಓದುವ ಹವ್ಯಾಸಿ ಬೆಳೆಸಿಕೊಳ್ಳಿ

KannadaprabhaNewsNetwork |  
Published : Oct 03, 2026, 03:15 AM IST
ಹವ್ಯಾಸ | Kannada Prabha

ಸಾರಾಂಶ

ಇಂದಿನ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ದೇಶದ ಮತ್ತು ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅಥಣಿ

ಇಂದಿನ ಪೀಳಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ನಮ್ಮ ದೇಶದ ಮತ್ತು ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ, ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಮಹಾವಿದ್ಯಾಲಯದ ಕನ್ನಡ ವಿಭಾಗ, ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಉಪನ್ಯಾಸಕ ಸಾಹಿತಿ ಡಾ.ವಿಜಯ ಕಾಂಬಳೆಯವರ 7ನೇ ಕೃತಿ ಕೆಂದಾವರೆ ಗ್ರಂಥದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಬೆಳೆಸಬೇಕಾಗಿದೆ. ಓದುವ ಸಂಸ್ಕೃತಿ ಇಂದಿನ ಕಾಲಕ್ಕೆ ಅಗತ್ಯ ಎಂದರು.ಅನುವಾದ ಸಾಹಿತಿ ಡಾ.ಜೆ.ಪಿ. ದೊಡಮನಿ ‘ಕೆಂದಾವರೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ನಮ್ಮ ಮಧ್ಯದಲ್ಲಿರುವ ಡಾ. ವಿಜಯ ವಿಶಿಷ್ಟ ವ್ಯಕ್ತಿತ್ವದವರು. ದಲಿತ ಸಂವೇದನೆಗಳ ಅರಿವು ವಿಜಯ ಕಾಂಬಳೆ ಅವರಿಗೆ ಪರಿಪೂರ್ಣವಾಗಿ ಇದೆ. ದಲಿತರ ಬದುಕಿನ ಪ್ರತಿಯೊಂದು ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಕೃತಿಯಲ್ಲಿ ಅಳವಡಿಸಿದ್ದಾರೆ. ವಿಜಯ ಅವರು ಸಂವೇದನಾಶೀಲ ಸಾಹಿತಿಯಾಗಿದ್ದು, ಇಂದಿನ ಪೀಳಿಗೆಯಲ್ಲಿ ಸಂವೇದನೆ ಕಡಿಮೆಯಾಗುತ್ತಿದ್ದು, ಸಾಹಿತ್ಯ ಅಧ್ಯಯನದ ಜೊತೆ ವಿಜಯ ಕಾಂಬಳೆ ಅವರಂತೆ ಹೆಮ್ಮೆ ಪಡುವ ಸಾಹಿತಿ ಮತ್ತು ಲೇಖಕರಾಗಿ ಹೊರಹೊಮ್ಮಬೇಕು. ಅದಕ್ಕಾಗಿ ಸದಾ ಅಧ್ಯಯನಶೀಲರಾಗಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ವಿಲಾಸ ಕಾಂಬಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿಯು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಾಲೇಜಿನಲ್ಲಿ ಇಂತಹ ಸೃಜನಶೀಲ ಹಾಗೂ ಬೌದ್ಧಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ವಿಜಯ ಕಾಂಬಳೆ ಅವರು ಸಾಹಿತ್ಯ ಲೋಕಕ್ಕೆ ನೀಡುತ್ತಿರುವ ಕೊಡುಗೆಯು ಶ್ಲಾಘನೀಯವಾಗಿದ್ದು, ಯುವ ಪೀಳಿಗೆಯು ಇವರ ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.ಕಾಗವಾಡದ ಸಾಹಿತಿ ಡಾ.ದೇವಿಕಾ ನಗರಕರ ಅವರು ಕೃತಿ ಪರಿಚಯಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಸಂತೋಷ ಉಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನೀಲೇಶ ಝರೆ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ರಾಮಣ್ಣ ದೊಡ್ಡನಿಂಗಪ್ಪಗೋಳ ಮಾತನಾಡಿದರು.

ಈ ವೇಳೆ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು, ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆರ್.ಎಸ್.ದೊಡ್ಡನಿಂಗಪ್ಪಗೋಳ ಸ್ವಾಗತಿಸಿದರು. ರಾವಸಾಬ ಬಡಿಗೇರ ನಿರೂಪಿಸಿದರು. ರಾಜೇಂದ್ರ ಗೊಂಧಳೆ ವಂದಿಸಿದರು. ಇಂದು ಅಸಮಾನತೆ ಅತೃಪ್ತಿ ತಾಂಡವ ಆಡುವ ಸಮಯದಲ್ಲಿ ಡಾ.ವಿಜಯ ಕಾಂಬಳೆಯವರು ತೆರೆಮರೆಯಲ್ಲಿ ಅಪಾರ ಶ್ರಮ ವಹಿಸಿ ಅಂಬುಜ ಮರಾಠಿ ಕೃತಿಯನ್ನು ಕೆಂದಾವರೆ ಎನ್ನುವ ಹೆಸರಿನಲ್ಲಿ ಕನ್ನಡದಲ್ಲಿ ಅನುವಾದ ರಚನೆ ಮಾಡುವ ಮೂಲಕ ಅನುವಾದದಲ್ಲಿ ತೊಡಗಿಸಿಕೊಂಡು ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ. ಅವರಿಂದ ಇನ್ನೂ ಉತ್ತಮ ಕೃತಿಗಳು ಬರಲಿ.

-ಡಾ.ಬಾಳಾಸಾಹೇಬ ಲೋಕಾಪುರ,

ಕಾದಂಬರಿಕಾರರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಸಕ್ತ ವರ್ಷವೂ ಎಫ್‌ಆರ್‌ಪಿ ಹೆಚ್ಚಳ
ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಕೊರತೆ: ಶಾಸಕ ಗುಡಗುಂಟಿ