ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಂತರ ಮಹಾವಿದ್ಯಾಲಯಗಳ 14ನೇ ಯುವಜನೋತ್ಸವ ವಿಜಯ ಕಲಾ ಸಂಗಮವನ್ನು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಗೊಂದಲಿ ಸಾಹಿತ್ಯ ಅದರ ಮಹತ್ವವನ್ನು ವಿವರಿಸಿದ ಅವರು, ರಾಗಬದ್ಧವಾಗಿ ಹಾಡಿ ಆ ಸಾಹಿತ್ಯದ ಪರಿಚಯ ನೀಡಿದರು.
ತೋಟಗಾರಿಕೆ ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯ ತಿಮ್ಮಣ್ಣ ಅರಳಿಮಟ್ಟಿ ಮಾತನಾಡಿ, ಇಂದಿನ ಯುವಜನಾಂಗ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಅವಘಡಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಮನೋನಿಗ್ರಹ ಅವಶ್ಯ. ಅಂದಾಗ ಮಾತ್ರ ಉತ್ತಮ ನಾಗರಿಕನಾಗಲು ಸಾಧ್ಯ ಎಂದರು.ಸಮಾಜ ಗುರುತಿಸುವಂತೆ ವಿದ್ಯಾರ್ಥಿ ಮೌಲ್ಯಯುಕ್ತ ಜೀವನ ನಡೆಸಬೇಕು. ಯುವಜನೋತ್ಸವ ಬೇರೆ ಬೇರೆ ಸಂಸ್ಕೃತಿಗಳನ್ನು ಒಟ್ಟುಗೂಡಿಸುತ್ತದೆ. ಭವಿಷ್ಯತ್ತಿನಲ್ಲಿ ಮಧುರ ನೆನಪುಗಳನ್ನು ಕೊಡುತ್ತದೆ ಎಂದು ವಿವರಿಸಿದರು.
ಬೆಳಗ್ಗೆ ವಿಶ್ವವಿದ್ಯಾಲಯದ ಒಂಭತ್ತು ಮಹಾವಿದ್ಯಾಲಯಗಳ ತಂಡಗಳಿಂದ ಬಾಗಲಕೋಟೆ ನವನಗರದ ಕಾಳಿದಾಸ ಸರ್ಕಲ್ ದಿಂದ ಎಂಬಿಎ ಮಹಾವಿದ್ಯಾಲಯದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಶಿರಸಿ ತೋಟಗಾರಿಕೆ ಮಹಾವಿದ್ಯಾಲಯ ಪ್ರಥಮ, ಕೋಲಾರ ದ್ವಿತೀಯ, ಅರಭಾವಿ ತೃತೀಯ ಮತ್ತು ಬೀದರ ಮಹಾವಿದ್ಯಾಲಯ 4ನೇ ಸ್ಥಾನ ಪಡೆದವು. ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು, ಒಂಭತ್ತು ತೋಟಗಾರಿಕೆ ಮಹಾವಿದ್ಯಾಲಯಗಳ ಡೀನ್, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರಪ್ಪ ಎಚ್. ವಿಸ್ತರಣಾ ನಿರ್ದೇಶಕಿ ಡಾ. ಲಕ್ಷ್ಮೀನಾರಾಯಣ ಹೆಗಡೆ, ಸಹಸಂಶೋಧನಾ ನಿರ್ದೇಶಕ ಡಾ.ಎಂ.ಎಸ್. ಲೋಕೇಶ್, ಬೀಜ ಘಟಕದ ಡಾ.ಶಾಂತಪ್ಪ, ಹಣಕಾಸು ಅಧಿಕಾರಿ, ಶಾಂತಾ ಕಡಿ, ಪಿ.ಬಿ. ಹಳೇಮನಿ, ವಿಜಯಕುಮಾರ ಭಜಂತ್ರಿ, ಸೇರಿದಂತೆ ಮಹಾವಿದ್ಯಾಲಯಗಳ ಡೀನ್, ತಂಡದ ಮ್ಯಾನೇಜರ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿದ್ಯಾರ್ಥಿ ಕಲ್ಯಾಣ ಮತ್ತು ಯುವಜನೋತ್ಸವದ ಅಧ್ಯಕ್ಷ ಡಾ. ರಾಮಚಂದ್ರ ನಾಯಕ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶಶಿಕುಮಾರ್ ಪರಿಚಯಿಸಿದರು. ಡಾ.ಬಾಲಾಜಿ ಕುಲಕರ್ಣಿ ವಂದಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯಾಸೀನ್ ಬಾಗವಾನ್ ನಿರೂಪಿಸಿದರು.