ಕನ್ನಡಪ್ರಭ ವಾರ್ತೆ ಬೀಳಗಿ
ಭಾರತ ದೇಶವು ಸನಾತನ ಸಂಸ್ಕೃತಿ ತವರೂರು, ಶ್ರೇಷ್ಠ ಸಂತ ಮಹಾಂತರು ಜನಿಸಿದ ನೆಲೆಬೀಡು. ಇಂತಹ ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಜೀವಂತವಾಗಿ ಉಳಿಸಿರುವುದು ಸರ್ವಶ್ರೇಷ್ಠ ರಾಮಾಯಣ ಗ್ರಂಥ, ಇಂತಹ ಗ್ರಂಥ ರಚಿಸಿದ ಮಹಾನ ಋಷಿ ವಾಲ್ಮೀಕಿ ಆದರ್ಶಗಳು ನಮಗೆಲ್ಲ ದಾರಿದೀಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಹೇಳಿದರು.ತಾಲೂಕು ಆಡಳಿತ, ತಾಪಂ, ಪಪಂ, ಸಮಾಜ ಕಲ್ಯಾಣ ಇಲಾಖೆ ಬೀಳಗಿ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕಾರ, ರೀತಿ, ನ್ಯಾಯಯುತ ಹೋರಾಟಕ್ಕೆ ಬೇಕಿರುವ ಎಲ್ಲವನ್ನು ರಾಮಾಯಣದಲ್ಲಿ ತಿಳಿಸಲಾಗಿದೆ. ೨೪ ಸಾವಿರ ಪದ್ಯಗಳಿಂದ ಹಾಗೂ ೭ ಖಂಡಗಳಿಂದ ರಚಿತವಾದ ರಾಮಾಯಣ ಮಹಾನ ಮಾನವತವಾದಿಗಳ ಜೀವನ ಚರಿತ್ರೆಗಳನ್ನು ಭವಿಷ್ಯದ ಕುಡಿಗಳಿಗೆ ತಿಳಿಸಬೇಕೆನ್ನುವ ಎಲ್ಲ ಸಾರವನ್ನು ಹೊಂದಿದೆ. ಮನುಕುಲಕ್ಕೆ ಬದುಕು ಕಟ್ಟಿಕೊಳ್ಳಲಿಕ್ಕೆ ಜೀವನದ ಶ್ರೇಷ್ಠತೆ ಅರಿತು ಸನ್ಮಾರ್ಗದಲ್ಲಿ ನಡಿಯಲು ಅನುಕೂಲಕವಾಗುವಂತಹ ಗ್ರಂಥ ರಾಮಾಯಣವಾಗಿದೆ. ದೇಶದ ಜನತೆಗೆ ರಾಮರಾಜ್ಯದ ಕಲ್ಪನೆ ರಾಮಾಯಣದ ಮೂಲಕ ನೀಡಿದ ಮಹಾನ್ ಕೀರ್ತಿ ಮಹರ್ಷಿಗೆ ಸಲ್ಲುತ್ತದೆ ಎಂದರು.
ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಕಲಿಸುವ ಮೂಲಕ ರಾಷ್ಟ್ರಾಭಿಮಾನ ಬೆಳಿಸಿ. ದೇಶ ಮತ್ತು ರಾಜ್ಯದ ಅಭಿವೃದ್ಧಿ ಕೆಲಸದಲ್ಲಿ ಮಹತ್ತರ ಸಾಧನೆ ಮಾಡುವ ಪ್ರಜೆಗಳನ್ನಾಗಿ ಮಾಡುವ ಕೆಲಸ ನಮ್ಮೆಲ್ಲರ ಮೇಲಿದೆ. ವಾಲ್ಮಿಕಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪ್ರಸನ್ನನಾಂದಪುರಿ ಶ್ರೀಗಳು ಮಾಡಿದ ಸಾಧನೆ ಮತ್ತು ಕೆಲಸ ಮಹತ್ತರವಾಗಿದ್ದು ಶೇ.೩ ರಿಂದ ಶೇ.೭ರವರಿಗೆ ಮೀಸಲಾತಿ ಹೆಚ್ಚಳ ಹೋರಾಟದಲ್ಲಿ ಯಶಸ್ಸು ಖಂಡಿದ್ದು ಸಮಾಜದ ಪ್ರೀತಿ ಅಭಿಮಾನ ಹೆಚ್ಚಿಸುವ ಕೆಲಸ ಎಂದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ವಿಭಾಗೀಯ ಅಧ್ಯಕ್ಷ ಮಾಹಾದೇವ ಹಾದಿಮನಿ ವಿಶೇಷ ಉಪನ್ಯಾಸ ನೀಡಿದರು.
ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ವೀರ ಸಿಂಧೂರ ಲಕ್ಷ್ಮಣ ಸರ್ಕಲ್‌ದಿಂದ ಪ್ರಾರಂಭವಾಗಿ ಶಿವಾಜಿ, ಬಸವೇಶ್ವರ, ಅಂಬೇಡ್ಕರ್, ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಾರ್ಯಾಲಯ ತಲುಪಿತು. ಮೆರವಣಿಗೆಯಲ್ಲಿ ಡೊಳ್ಳುಮೇಳ, ವಾದ್ಯ ಕುಣಿತ ಮತ್ತು ಬೈಕ್ ರ್‍ಯಾಲಿ ಪ್ರಮುಖ ಆಕಷರ್ಣೆಯಾಗಿದ್ದವು.ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪುರ, ಸಮಾಜ ಕಲ್ಯಾಣಾಧಿಕಾರಿ ಸಿ.ಎಸ್.ಗಡ್ಡದೇವರಮಠ, ಸಿಪಿಐ ಬಸವರಾಜ ಹಳಬಣ್ಣವರ, ಪುನರ್ವತಿ ಕೇಂದ್ರ ಅಧಿಕಾರಿ ಉದಯ ಕುಂಬಾರ, ಇಒ ಅಭಯ ಕುಮಾರ ಮೊರಬ, ಸಿಡಿಪಿಒ ಬಿ.ಜಿ.ಕವಟೇಕರ, ಪಪಂ ಮುಖ್ಯಾಧಿಕಾರಿ ದೇವಿಂದ್ರ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಟಿ.ವೈ.ಜಾನಮಟ್ಟಿ, ಸಿಂಧೂರು ಲಕ್ಷ್ಮಣ ಟ್ರಸ್ಟ್ ಕಮಿಟಿ ಅಧ್ಯಕ್ಷ ಲಕ್ಷ್ಮಣ ತಳವಾರ, ಸುರೇಂದ್ರ ನಾಯ್ಕ, ಶ್ರೀಶೈಲ ಅಂಟಿನ ಇದ್ದರು. ವಿ.ಆರ್.ಹಿರೇನಿಂಗಪ್ಪನವರ ನಿರೂಪಿಸಿದರು. ಮುಖಂಡರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.