ಸಂಸ್ಕೃತಿ ಆಸ್ತಿಗಿಂತಲೂ ಮೌಲ್ಯಯುತ: ಚೇತನ್ ನೈಲಾಡಿ

KannadaprabhaNewsNetwork |  
Published : Aug 20, 2026, 02:30 AM IST
19ಆಸಾಡಿ | Kannada Prabha

ಸಾರಾಂಶ

ಕುಂದಾಪ್ರ ಕನ್ನಡದ ಅಸ್ಮಿತೆಯ ಉಳಿವು ಅದರ ಬಳಕೆಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ನಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭಾಷೆ ಅತ್ಯಂತ ಸಂಪದ್ಭರಿತ ಆಸ್ತಿ. ಹಣ ಸಂಪತ್ತನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕೃತಿಯು ಯಾವುದೇ ಬೆಲೆಬಾಳುವ ಆಸ್ತಿಗಿಂತಲೂ ಮೌಲ್ಯಯುತವಾದುದು ಎಂದು ಕಿರುತೆರೆ ನಿರ್ದೇಶಕ - ನಟ ಚೇತನ್ ನೈಲಾಡಿ ಹೇಳಿದರು.

ಕುಂದಾಪುರ: ಕುಂದಾಪ್ರ ಕನ್ನಡದ ಅಸ್ಮಿತೆಯ ಉಳಿವು ಅದರ ಬಳಕೆಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ನಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭಾಷೆ ಅತ್ಯಂತ ಸಂಪದ್ಭರಿತ ಆಸ್ತಿ. ಹಣ ಸಂಪತ್ತನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕೃತಿಯು ಯಾವುದೇ ಬೆಲೆಬಾಳುವ ಆಸ್ತಿಗಿಂತಲೂ ಮೌಲ್ಯಯುತವಾದುದು ಎಂದು ಕಿರುತೆರೆ ನಿರ್ದೇಶಕ - ನಟ ಚೇತನ್ ನೈಲಾಡಿ ಹೇಳಿದರು.

ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಶನಿವಾರ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಆಸಾಡಿ ಗಮ್ಮತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕಿ ಪ್ರೊ. ರೇವತಿ, ವಿದ್ಯಾರ್ಥಿ ಸಂಯೋಜಕರಾದ ಅಕ್ಷಯ್ ಶೆಟ್ಟಿ ಮತ್ತು ಶ್ರೀರಕ್ಷಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕುಂದಾಪ್ರ ಕನ್ನಡದಲ್ಲಿ ಕವನ ವಾಚನ ಮಾಡಿದರು. ಆಸಾಡಿ ಹಬ್ಬದ ಕುರಿತಂತೆ ಕುಂದಾಪುರ ಕನ್ನಡದ ಕಿರು ನಾಟಕವನ್ನು ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆ ಗಳಿಸಿದರು. ವಿದ್ಯಾರ್ಥಿನಿಯರಾದ ಶಮಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ರಾಧಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕುಂದಾಪುರದ ಅಸ್ಮಿತೆಯನ್ನು ಬಿಂಬಿಸುವ ಆಸಾಡಿ ಗಮ್ಮತ್ ಎಂಬ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಸೇರಿದಂತೆ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಂದಾಪುರ ಸಮಾಜದ ಜನಜೀವನ, ರೂಢಿ, ಸಂಪ್ರದಾಯ, ಆಚಾರ ವಿಚಾರ ಹಾಗೂ ಭಾಷೆಯ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಈ ಕಾರ್ಯಕ್ರಮ ಪ್ರಭಾವಶಾಲಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕ: ಬಿ.ಪುಂಡಲೀಕ ಮರಾಠೆ
ಎಸ್‌ಡಿಎಂಎ ಕಾಲೇಜಿನಿಂದ ಸ್ತನ್ಯಪಾನ ಜಾಗೃತಿ ಬೀದಿನಾಟಕ