ಮಾಂಜಾದಾರ ಬಳಕೆಗೆ ಕಡಿವಾಣ ಹಾಕಿ

KannadaprabhaNewsNetwork |  
Published : Oct 24, 2026, 02:15 AM IST
ಮಾಂಜಾದಾರ | Kannada Prabha

ಸಾರಾಂಶ

ಗಾಳಿಪಟ ಹಾರಿಸುವ ಮಾಂಜಾದಾರಕ್ಕೆ ಮಹಿಳೆ ಬಲಿಯಾಗುತ್ತಿದ್ದಂತೆ ಈ ಸಂಬಂಧ ಜನಪ್ರತಿನಿಧಿಗಳು ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಹುಬ್ಬಳ್ಳಿ:

ಗಾಳಿಪಟ ಹಾರಿಸುವ ಮಾಂಜಾದಾರಕ್ಕೆ ಮಹಿಳೆ ಬಲಿಯಾಗುತ್ತಿದ್ದಂತೆ ಈ ಸಂಬಂಧ ಜನಪ್ರತಿನಿಧಿಗಳು ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದೆ ಇಂಥ ಘಟನೆ ಮರುಕಳುಹಿಸದಂತೆ ಮುಂಜಾಗ್ರತೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಾಂಜಾದಾರಕ್ಕೆ ಜೀವಗಳು ಬಲಿಯಾಗುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮಾಂಜಾದಾರ ಬಳಕೆ, ವ್ಯಾಪಾರ ಎಲ್ಲವನ್ನೂ ನಿಗ್ರಹಿಸಲು ಒಂದು ಪ್ರತ್ಯೇಕ ಪೋರ್ಟಲ್ ತೆರೆಯಲಿ. ಆ ಮೂಲಕ ಪೊಲೀಸ್ ಇಲಾಖೆ ಮಾಂಜಾದಾರ ಮೇಲೆ ಹದ್ದಿನ ಕಣ್ಣಿಡಲಿ. ಅದನ್ನು ಯಾರು ತರುತ್ತಿದ್ದಾರೆ. ಬಳಕೆ ಮಾಡುತ್ತಿದ್ದಾರೆ ಎಲ್ಲವನ್ನೂ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ಹೊರಟ್ಟಿ ಪತ್ರ:

ಈ ನಡುವೆ ಮಾಂಜಾದಾರವನ್ನು ಸಂಪೂರ್ಣ ನಿಷೇಧಿಸಬೇಕು. ಕಾಯ್ದೆ ಸಮರ್ಪಕ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿ ಮಾಜಿ ಸಭಾಪತಿಯೂ ಆಗಿರುವ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಪತ್ರದ ಬರೆದಿರುವ ಅವರು, ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರು ಮಾಂಜಾದಾರ ಕುತ್ತಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈಚೆಗೆ ಗಾಜು ಲೇಪಿತ ಅಷ್ಟೇ ಅಲ್ಲ. ಸಂಪೂರ್ಣ ಮಾನವ ನಿರ್ಮಿತ ನೈಲಾನ್ ಮಾಂಜಾದಾರಗಳ ಬಳಸಲಾಗುತ್ತಿದೆ. ಗಾಳಿಪಟ ಹಾರಿಸುವ ಪೈಪೋಟಿ ನಡೆಸುವ ಸಲುವಾಗಿ ಇದನ್ನು ಬಳಸಲಾಗುತ್ತಿದೆ. ವಾಹನ ಸವಾರರು ಅಲೆದಾಡುವಾಗ ಕುತ್ತಿಗೆ ಹಾಗೂ ದೇಹದ ಭಾಗಕ್ಕೆ ತಗುಲಿದರೆ ಗಂಭೀರವಾಗಿ ಪ್ರಾಣ ಹೋಗಿರುವ ಉದಾಹರಣೆಗಳಿವೆ. ಅಮೂಲ್ಯವಾದ ಜೀವಗಳು ಹಾನಿಯ ಜತೆಗೆ ಪ್ರಾಣಿ, ಪಕ್ಷಿಗಳು ಸಾವಿಗೀಡಾಗುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮಾಂಜಾದಾರವನ್ನು ನಿಷೇಧಿಸಿ, ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಡಿವಾಣ ಹಾಕಿ: ಅಬ್ಬಯ್ಯಶಾಸಕ ಪ್ರಸಾದ ಅಬ್ಬಯ್ಯ ಅವರು ಪತ್ರಿಕಾ ಪ್ರಕಟಣೆ ನೀಡಿ, ಮಾಂಜಾದಾರದಿಂದಾಗಿ ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುತ್ತಿರುವ ಹಾಗೂ ಗಂಭೀರವಾಗಿ ಗಾಯಗೊಳ್ಳುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ. ಗಾಳಿಪಟ ಹಾರಿಸುವ ಸಂಭ್ರಮದಿಂದ ಯಾರೊಬ್ಬರ ಜೀವಕ್ಕೂ ಅಪಾಯವಾಗಬಾರದು. ಆದ್ದರಿಂದ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸುವಾಗ ಸುರಕ್ಷಿತ, ಪರಿಸರ ಸ್ನೇಹಿ ದಾರಗಳನ್ನು ಮಾತ್ರ ಬಳಸಬೇಕು. ರಸ್ತೆ, ವಿದ್ಯುತ್ ತಂತಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಗಾಳಿಪಟ ಹಾರಿಸುವುದನ್ನು ತಪ್ಪಿಸಬೇಕು. ಪೋಷಕರು ಕೂಡ ಮಕ್ಕಳಿಗೆ ಸುರಕ್ಷತೆಯ ಮಹತ್ವ ತಿಳಿಸಬೇಕು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ