ಸರ್ಕಾರಕ್ಕೆ ಮಹಿಳೆಯರು, ವೃದ್ಧರ ಶಾಪ: ನಾಗೇಶ್ ಕುಂದಲ್ಪಾಡಿ

KannadaprabhaNewsNetwork |  
Published : Aug 15, 2026, 03:45 AM IST
ಪೆರಾಜೆ ಯ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಬಿಜೆಪಿಯಿಂದ ಆಯೋಜಿಸಿದ ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ..  | Kannada Prabha

ಸಾರಾಂಶ

ಮಹಿಳೆಯರ ವೃದ್ಧರ ನೋವಿನ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದರು ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.

ನಾಪೋಕ್ಲು: ಮಹಿಳೆಯರ ವೃದ್ಧರ ನೋವಿನ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದರು ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹೇಳಿದರು.

ಕೊಡಗು ದಕ್ಷಿಣದ ಗಡಿ ಭಾಗದ ಪೆರಾಜೆ ಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ ಅವರು ವಿಕಲಚೇತನರ ವೇತನ ಹಾಗೂ ವೃದ್ಧಾಪ್ಯ ವೇತನಗಳನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ತಡೆಹಿಡಿದಿದೆ. ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.

ವಿಕಲಚೇತನರಿಗೆ ಹಾಗೂ ವೃದ್ಧರಿಗೆ ವೇತನ ನೀಡಲು 32,000 ಆದಾಯ ನಿಗದಿಪಡಿಸಿದೆ ಆದಾಯ ಪ್ರಮಾಣ ಪತ್ರ ನೀಡಿದರೆ ಮಾತ್ರ ವಿಕಲಚೇತನರ ವೇತನ ಹಾಗೂ ವೃದ್ಧಾಪ್ಯ ವೇತನಗಳನ್ನು ನೀಡುವುದಾಗಿ ತಿಳಿಸಿದ್ದು ಇದು ಖಂಡನೀಯ. ಇದರಿಂದಾಗಿ ವಿಕಲಚೇತನರು ಮಹಿಳೆಯರು ಹಾಗೂ ವೃದ್ಧರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ವೇತನಗಳನ್ನು ನಂಬಿ ಬದುಕುತಿದ್ದ ಮಹಿಳೆಯರ ವೃದ್ಧರ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದರು. ಮಂಡಲ ಬಿಜೆಪಿ ವತಿಯಿಂದ ಹಾಗೂ ಶಕ್ತಿ ಕೇಂದ್ರದ ವತಿಯಿಂದ ಇದನ್ನು ಸಂಪೂರ್ಣವಾಗಿ ಖಂಡಿಸುವುದಾಗಿ ಅವರು ತಿಳಿಸಿದರು.

ಶಕ್ತಿ ಕೇಂದ್ರದ ಪ್ರಮುಖ್ ಸುಭಾಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಹ ಪ್ರಮುಖ ಉದಯ ಕುಂಬಳಚೇರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ಮತ್ತು ಬೂತ್ ಮಟ್ಟದ ಅಧ್ಯಕ್ಷರು, ಶಕ್ತಿ ಕೇಂದ್ರದ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ನಾಗೇಂದ್ರ ರಾಜೀನಾಮೆಗೆ ಉಡುಪಿ ಬಿಜೆಪಿ ಆಗ್ರಹ
ಕರಾವಳಿಗೆ ಪ್ರತ್ಯೇಕ ನಿಯಮ ರೂಪಿಸಿ: ಗಂಟಿಹೊಳೆ