ಗ್ರಾಹಕ ಸ್ನೇಹಿ ಹಜಾರೆ ಬಜಾರ ಲೋಕಾರ್ಪಣೆ ನಾಳೆ

KannadaprabhaNewsNetwork | Published : Oct 6, 2024 1:20 AM

ಸಾರಾಂಶ

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯ ರಬಕವಿಯ ಹಜಾರೆ ಟೆಕ್ಸ್‌ಟೈಲ್ಸ್‌ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜನತೆಯ ವಿಶ್ವಾಸಕ್ಕೆ ಪಾತ್ರವಾಗಿ ಯಶಸ್ಸಿನತ್ತ ಸಾಗುತ್ತಲಿದೆ. ಇದೀಗ ಇದೇ ಪರಿವಾರ ಹಜಾರೆ ಬಜಾರ ನಿರ್ಮಾಣ ಮಾಡುವ ಮೂಲಕ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿರುವುದು ರಬಕವಿಯ ವಿಶೇಷ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯ ರಬಕವಿಯ ಹಜಾರೆ ಟೆಕ್ಸ್‌ಟೈಲ್ಸ್‌ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜನತೆಯ ವಿಶ್ವಾಸಕ್ಕೆ ಪಾತ್ರವಾಗಿ ಯಶಸ್ಸಿನತ್ತ ಸಾಗುತ್ತಲಿದೆ. ಇದೀಗ ಇದೇ ಪರಿವಾರ ಹಜಾರೆ ಬಜಾರ ನಿರ್ಮಾಣ ಮಾಡುವ ಮೂಲಕ ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿರುವುದು ರಬಕವಿಯ ವಿಶೇಷ.ಕರ್ನಾಟಕ ಸಾಧಕ ಪ್ರಶಸ್ತಿ ಪುರಸ್ಕೃತ ಸತೀಶ ವಿಜಯಕುಮಾರ ಹಜಾರೆಯವರು ತಮ್ಮ ಮಾವ ಚಡಚಣದ ಬಾಹುಬಲಿ ಎನ್.ಮುತ್ತಿನ ಸಹೋದರರ ಸಹಕಾರದಿಂದ ಐಶ್ವರ್ಯ ಕಾಟನ್ಸ್ ಸಾರೀಜ್‌ನೊಂದಿಗೆ ದೇಶವಷ್ಟೆ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸೀರೆಗಳನ್ನು ರಫ್ತು ಮಾಡುವ ಮೂಲಕ ದಾಖಲೆ ನಿರ್ಮಿಸಿದ ಸಾಧನೆಯಲ್ಲದೇ ನೂರಾರು ನೇಕಾರರ ಕೈಗಳಿಗೆ ಉದ್ಯೋಗವಕಾಶ ನೀಡಿದ ಕೀರ್ತಿ ಇವರದು.೨ ಲಕ್ಷ ಚದರ ಅಡಿ ಪ್ರದೇಶದಲ್ಲಿ ಬಜಾರ:

ಶುಭ-ಸಮಾರಂಭಗಳಿಗೆ ವಿವಿಧ ರೀತಿಯ ಖರೀದಿಗಾಗಿ ದೂರದ ಬೆಂಗಳೂರು, ಮೈಸುರು, ಬೆಳಗಾವಿ ಇತ್ಯಾದಿ ಹೀಗೆ ಹಲವಾರು ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಕರ್ನಾಟಕ & ಮಹಾರಾಷ್ಟ್ರದಿಂದ ಜವಳಿ ಖರೀದಿಗೆ ಬರುವ ಜನಕ್ಕೆ ಇನ್ನುಳಿದ ವಸ್ತುಗಳನ್ನು ಕೈಗೆಟಕುವ ಬೆಲೆಯಲ್ಲಿಯೇ ಕೊಡಬೇಕೆಂಬ ಮಹಾದಾಸೆಯಿಂದ ಪ್ರಾರಂಭ ಮಾಡಲು ಉದ್ದೇಶಿಸಿಯೇ ಹಜಾರೆ ಬಜಾರ ಸುಮಾರು ೨ ಲಕ್ಷ ಚದರ ಅಡಿಯಲ್ಲಿ ಬೃಹತಾಕಾರದಲ್ಲಿ ರಬಕವಿ ಹೊಸ ಬಸ್‌ ನಿಲ್ದಾಣದ ಹತ್ತಿರ ಅಕ್ಟೋಬರ್‌ ೭ ರಂದು ಉದ್ಘಾಟನೆಗೆ ಹಜಾರೆ ಬಜಾರ ಸಜ್ಜಾಗಿ ನಿಂತಿದೆ.ಅಗ್ಗದ ಬೆಲೆಗೆ ಸಾಮಗ್ರಿ:

ಗ್ರಾಹಕರ ಶ್ರೇಯೋಭಿವೃದ್ಧಿಯೊಂದಿಗೆ ಗ್ರಾಮಿಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಿವಿಧ ವಿಶ್ವಮಾನ್ಯ ಗುಣಮಟ್ಟದ ಕಂಪನಿಗಳ ವಸ್ತುಗಳನ್ನು ಒಂದೇ ಸೂರಿನಲ್ಲಿ ನೂರಾರು ಮಳಿಗೆ ನಿರ್ಮಿಸಿ ಕರ್ನಾಟಕ & ಮಹಾಷ್ಟ್ರದಿಂದ ಅಷ್ಟೇ ಅಲ್ಲದೆ ದೇಶದಲ್ಲಿ ಯಾವ ಭಾಗದಲ್ಲಿಯೂ ಬೆಲೆಯನ್ನು ಹೋಲಿಕೆ ಮಾಡಿದರೂ ಅತೀ ಕಡಿಮೆ ಅನಿಸುವಷ್ಟು ಬೆಲೆಯಲ್ಲಿ ನೀಡುವ ಏಕ ಮಾತ್ರ ಉದ್ದೇಶದಿಂದ ಅದ್ಧೂರಿಯಾಗಿ ಪ್ರಾರಂಭಗೊಳ್ಳಲಿರುವ ಹಜಾರೆ ಬಜಾರಿನಲ್ಲಿ ಅತ್ಯಾಕರ್ಷವೆನಿಸುವ ಪ್ರತಿ ಕುಟುಂಬಕ್ಕೂ ಅವಶ್ಯವಿರುವ ಸಾವಿರಾರು ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಬೃಹತ್ ಮಳಿಗೆ ಜನರ ಸೇವೆಗೆ ಅತ್ಯುತ್ಸಾಹದಿಂದ ಸಜ್ಜಾಗಿ ನಿಂತಿದೆ.ವಸ್ತುಗಳು:

ಬೆಳ್ಳಿ-ಬಂಗಾರ, ಆಭರಣಗಳ ಭವ್ಯ ಮಳಿಗೆ, ಅಲಂಕಾರಿಕ ಪೀಠೋಪಕಣಗಳು, ಗೃಹಬಳಕೆಯ ದಿನಸಿ ಮಳಿಗೆ, ವಿವಿಧ ಕಂಪನಿಗಳ ವಿನೂತನ ಎಲೆಕ್ಟ್ರಾನಿಕ್ ಸಾಮಗ್ರಿ, ಪುಡ್ ಕೋರ್ಟ್ ಸೌಲಭ್ಯ, ಮದುವೆ ಇನ್ನಿತರ ಶುಭ-ಸಮಾರಂಭಗಳಿಗೆ ಮತ್ತು ಗೃಹ ಉಪಯೋಗಕ್ಕಾಗಿ ಪಾತ್ರೆಗಳ ಮಳಿಗೆ, ಟಾಯ್ಸ್ & ಗಿಪ್ಟ್ ಸೆಂಟರ್, ಸ್ಟೇಶನರಿ ಸಾಮಗ್ರಿಗಳು, ಕ್ರೀಡಾ ಸಾಮಗ್ರಿಗಳು ಭವ್ಯ ಮಳಿಗೆ, ಚಿಕ್ಕಮಕ್ಕಳಿಂದ ಎಲ್ಲಾ ವಯೋಮಾನದವರಿಗೆ. ಗೇಮ್ ಜೂಮ್ ಹೀಗೆ ಹಲವಾರು ಮಳಿಗೆಗಳು ಹಜಾರೆ ಬಜಾರ ಒಂದೇ ಸೂರಿನಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಮದುವೆ, ಇನ್ನಿತರ ಶುಭ ಸಮಾರಂಭ ಹಾಗೂ ಗೃಹ ಪ್ರವೇಶಕ್ಕಾಗಿ ವಸ್ತುಗಳನ್ನು ಖರೀದಿಸಲು ನೂರಾರು ಕಿ.ಮೀ ಕ್ರಮಿಸಿ ಹರಸಾಹಸ ಪಡುವ ನಮ್ಮ ಭಾಗದ ಜನರಿಗೆ ಇದೊಂದು ವರದಾನವಾಗಲಿದೆ. ಸಮಾಜ ನಮಗೇನು ಕೊಟ್ಟಿದೆ ಎನ್ನುವದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಬದುಕು ಮತ್ತು ಬದುಕಲು ಬಿಡು ಸೂಕ್ತಿಯಂತೆ ನಾವು ಬದುಕಿ ಇನ್ನೊಬ್ಬರನ್ನು ಗೌರವದಿಂದ ಬದುಕಲು ಬಿಡು ಎನ್ನುವ ಜನವಾಣಿಯನ್ನು ಅಚ್ಚುಕಟ್ಟಾಗಿ ಪಾಲಿಸುತ್ತ ಬಂದಿರುವ ಇವರು ಅದರಂತೆ ಸದಾ ಸಮಾಜಮುಖಿಯಾಗಿ ಕಾರ್ಯ ಪ್ರವೃರ್ತರಾಗಿದ್ದಾರೆ.ಶೈಕ್ಷಣಿಕ ಕ್ರಾಂತಿ:

೨೦೧೫ ರಲ್ಲಿ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉತ್ಕೃಷ್ಟ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ದೊರೆಯಬೇಕೆಂಬ ಭಾವನೆಯಿಂದ ಮಾತೋಶ್ರೀ ಪದ್ಮಾವತಿ ಅಮ್ಮನವರ ಹೆಸರಲ್ಲಿ ಪದ್ಮಾವತಿ ಅಂತಾರಾಷ್ಟ್ರೀಯ ಶಾಲೆಯನ್ನು ಪ್ರಾರಂಭಿಸಿದರು. ೨೦೧೬ರಲ್ಲಿ ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ೨೦೨೩ರಲ್ಲಿ ಪದ್ಮಾವತಿ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ಹಜಾರೆ ಟೆಕ್ಸಟೈಲ್ಸ್:

೨೦೧೬ ರಲ್ಲಿ ಗಣಪತರಾವ್ ಹಜಾರೆಯವರು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿಯೇ ಪ್ರಸಿದ್ಧಿಯಾದ ಹಜಾರೆ ಟೆಕ್ಸಟೈಲ್ಸ್ ಪ್ರಾರಂಭಿಸಿ, ನೂರಾರು ಜನರಿಗೆ ಉದ್ಯೋಗ ಅವಕಾಶ ನೀಡಿದರು.ಜನ ಸೇವೆ:

೨೦೧೮ ರಲ್ಲಿ ಅನಾವೃಷ್ಟಿ ಸಂದರ್ಭ ಆಹಾರ ಕಿಟ್‌ಗಳ ಜೊತೆಗೆ ಅಭಯಹಸ್ತ ಚಾಚುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ ಕೋವಿಡ್ ಸಂದರ್ಭದಲ್ಲಿಯೂ ದಿನಗೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಬದುಕು ಸಾಗಿಸಲು ಸೇವೆ ಒದಗಿಸಿದ್ದರು. ಈಗಲೂ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಖರ್ಚನ್ನು ಸ್ವತಃ ತಾವೇ ಭರಿಸಿ ಅವರಿಗೆ ಬದುಕು ಕಟ್ಟಿಕೊಡುವಲ್ಲಿ ಯಶ್ವಿಯಾಗಿದ್ದಾರೆ. ಉನ್ನತ ಶಿಕ್ಷಣ ತರಬೇತಿ ಕೋರ್ಸ್‌ಗಳಿಗೆ ಸಹಾಯ ಧನ ಕೊಡುಗೈ ದಾನಿ ಸತೀಶ ಹಜಾರೆಯವರದ್ದು.

Share this article