ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಭಾನುವಾರ ಶಿವಮೊಗ್ಗ ಹಾಲು ಒಕ್ಕೂಟದ ಕೊರಿಯನ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಾಲು ಉತ್ಪಾಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರೈತರು, ಮಾರುಕಟ್ಟೆ ವಿಭಾಗದ ಅಧಿಕಾರಿಗಳಿಗೆ ಶುಭಾಶಯ ತಿಳಿಸಿದ ಅವರು, ಚಳ್ಳಕೆರೆ ತಾಲೂಕಿನಲ್ಲಿ ಹಾಲು ಉತ್ಪಾಕರ ಸಹಕಾರ ಸಂಘಗಳು ಗಣಿನೀಯವಾಗಿ ಏರಿಕೆಯಾಗುತ್ತಿದೆಯಲ್ಲದೆ, ಹೊಸದಾಗಿ ಎಚ್‌ಪಿಪಿಸಿ ಕಾಲೇಜು ಮುಂಭಾಗ ಮತ್ತು ನಾಯಕನಹಟ್ಟಿ ರಸ್ತೆ ನೂತನ ನಂದಿನಿ ಪಾರ್ಲರ್‌ಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಇತ್ತೀಚೆಗೆ ತಾನೇ ಶಿವಮೊಗ್ಗ ಹಾಲು ಒಕ್ಕೂಟ ಹೊಸದಾಗಿ ನಂದಿನಿ ಸಿಹಿತಿ ನಿಸು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶಿವಮೊಗ್ಗ ಹಾಲುಒಕ್ಕೂಟ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ವೇಳೆ ಶಿವಮೊಗ್ಗ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಇರ್ಫಾನ್, ಸಿಬ್ಬಂದಿ ಅಭಿಷೇಕ್, ಸುರೇಶ್‌ಬಾಬು, ಅಭಿ, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.