ಹಾರೋಹಳ್ಳಿ: ರೈತರು ಹೈನುಗಾರಿಕೆ ಉಪಕಸುಬಿನಿಂದ ಅಧಿಕ ಲಾಭ ಪಡೆಯುತ್ತಿದ್ದಾರೆ, ಅವರಿಗೆ ಪೂರಕವಾಗಿ ಹಾಲು ಉತ್ಪಾದಕರ ಸಹಕಾರ ಸಂಘ ಸಹಕರಿಸುತ್ತಿದೆ ಎಂದು ಅಧ್ಯಕ್ಷ ಸಿ.ಆರ್.ಶಿವರಾಜು ಹೇಳಿದರು.
ತಾಲೂಕಿನ ಚಿಕ್ಕಕಲ್ಬಾಳು ಹಾಲು ಉತ್ಪಾದಕ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಆಯುಧ ಪೂಜೆಗೂ ಮುನ್ನವೇ ರೈತರಿಗೆ 3,19,816 ರು. ಹಂಚಿಕೆ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ. ಬಮೂಲ್ ಉಚಿತ ವಿಮೆ 98,400 ರು. ಹಣವನ್ನು ಭರಿಸಿದೆ. ಸಂಘದಲ್ಲಿ ಮೃತಪಟ್ಟ ಇಬ್ಬರು ಸದಸ್ಯರಿಗೆ ತಲಾ ಒಂದು ಲಕ್ಷದಂತೆ ಮರಣ ನಿಧಿ ವಿತರಿಸಲಾಗಿದೆ. 8 ಲಕ್ಷ ರು. 13 ಜನ ಸದಸ್ಯರಿಗೆ ರಾಸುಗಳು ಮರಣಹೊಂದಿದ ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.ವಿಸ್ತರಣಾಧಿಕಾರಿ ಪ್ರವೀಣ್‌ಕುಮಾರ್ ಮತ್ತು ಒಕ್ಕೂಟದ ಕೃಷಿ ಅಧಿಕಾರಿ ರಾಜ್‌ಕುಮಾರ್ ಮಾತನಾಡಿ, ರೈತರು ಗುಣಮಟ್ಟದ ಹಾಲು ಪೂರೈಸಿ ಅಭಿವೃದ್ಧಿಗೆ ಸಹಕರಿಸಬೇಕು. ಹಸುಗಳಿಗೆ ಹಸಿ ಹುಲ್ಲು, ಪೌಷ್ಠಿಕಾಂಶದ ಆಹಾರ ನೀಡಬೇಕು, ಹಸುಗಳಿಗೆ ಮುಸರೆ ನೀರು ನೀಡಬಾರದು ಎಂದು ಸಲಹೆ ನೀಡಿದರು.
ಸಂಘದ ಸಿಇಒ ನವೀನ್ ವಾರ್ಷಿಕ ಸಭೆಯಲ್ಲಿ ಲೆಕ್ಕ ಪರಿಶೋಧನೆ, ಜಮಾ-ಖರ್ಚು, ಆಸ್ತಿ ವಿವರಗಳನ್ನು ನೀಡಿ ನೂತನ ಆಯಾ-ವ್ಯಯಕ್ಕೆ ಅನುಮೋದನೆ ಪಡೆದುಕೊಂಡರು. ಸಂಘ ಪ್ರಸಕ್ತ ಸಾಲಿನಲ್ಲಿ 1,02,65,000 ರು. ವಹಿವಾಟು ನಡೆಸಿ 7,11,250 ರು.ಲಾಭ ಗಳಿಸಿದೆ ಎಂದರು.ಸಭೆಯಲ್ಲಿ ಉಪಾಧ್ಯಕ್ಷೆ ಸುನಿತಾ, ನಿರ್ದೇಶಕರಾದ ಮುದ್ದೇಗೌಡ, ಚಂದ್ರಯ್ಯ, ಗೋವಿಂದ, ಚಂದ್ರಶೇಖರ್, ಗುರುಮೂರ್ತಿ, ರತ್ನಮ್ಮ, ರಮ್ಯಾ, ಪವಿತ್ರ, ಸದಸ್ಯರು ಭಾಗವಹಿಸಿದ್ದರು.
29ಕೆಆರ್ ಎಂಎನ್ 2.ಜೆಪಿಜಿಹಾರೋಹಳ್ಳಿಯ ಚಿಕ್ಕಕಲ್ಬಾಳು ಡೈರಿ ಆವರಣದಲ್ಲಿ ಸರ್ವಸದಸ್ಯರ ಸಭೆಯಲ್ಲಿ ಸಿ.ಆರ್.ಶಿವರಾಜು, ಪ್ರವೀಣ್‌ಕುಮಾರ್, ರಾಜ್‌ಕುಮಾರ್, ಸುನಿತಾ ಉಪಸ್ಥಿತರಿದ್ದರು.