ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಬೆಳೆ ಕಟಾವು ಪ್ರಯೋಗಗಳನ್ನು ನಿಖರವಾಗಿ ನಡೆಸುವ ಮೂಲಕ ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ದತ್ತಾಂಶ ಮತ್ತು ಇಳುವರಿಯನ್ನು ನಿಖರವಾಗಿ ದಾಖಲಿಸಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗದಲ್ಲಿ 2024-25 ನೇ ಸಾಲಿನ ಬೇಸಿಗೆ ಹಂಗಾಮಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ಕುರಿತು ಜಿಲ್ಲಾ ಮಟ್ಟದ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆ ಹಾಗೂ 2025-26 ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಸಕಾಲದಲ್ಲಿ ಪ್ರಗತಿ ಸಾಧಿಸುವ ಸಂಬಧ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗ ಕುಂಠಿತಗೊಳ್ಳುತ್ತಿದ್ದು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಿ.ಆರ್ ನೇಮಿಸಿಕೊಂಡು ಸಮೀಕ್ಷೆ ಮುಗಿಸಬೇಕು. ಸಮಯಕ್ಕೆ ಸರಿಯಾಗಿ ಬೆಳೆ ಸಮೀಕ್ಷೆ ಆಗಬೇಕು. ಇದಕ್ಕಾಗಿ ಒಂದು ಗ್ರಾಮಗಳಿಗೆ ಆಸಕ್ತಿ ಇರುವ 4 ರಿಂದ 5 ಪಿಆರ್ ಗಳನ್ನ ನೇಮಿಸಿಕೊಂಡು ಸಮೀಕ್ಷೆ ಮಾಡಬೇಕು, ಹಾಗಾದರೆ ಸಮೀಕ್ಷೆ ವೇಗವಾಗಿ ಮುಗಿಯಲಿದೆ ಎಂದು ಅವರು ಹೇಳಿದರು.ಬೆಳೆ ಸಮೀಕ್ಷೆ ಸರಿಯಾಗಿ ಆಗದಿದ್ದಾಗ ರೈತರಿಗೆ ಬೆಳೆ ಹಾನಿ ಪರಿಹಾರ ಕೊಡುವಾಗ ಸಮಸ್ಯೆ ಆಗುತ್ತದೆ. ಮುಂಗಾರು ಬೆಳೆ ಹಿಂಗಾರು ಬೆಳೆ ಬೇಸಿಗೆ ಕಾಲದ ಬೆಳೆ ಆಯಾ ಸಮಯಕ್ಕೆ ಸರಿಯಾಗಿ ಸಮೀಕ್ಷೆ ಆಗದಿದ್ದಾಗ ರೈತರಿಗೆ ನಷ್ಟ ಭರಿಸಲು ಇಲಾಖೆಗೆ ಕಷ್ಟವಾಗಲಿದೆ, ಇದನ್ನು ಅಧಿಕಾರಿಗಳು ಅರಿತುಕೊಂಡು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆ ವೇಗವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.ಎಲ್ಲಾ ಬೆಳೆಗಳನ್ನು ವಿಮಾ ಯೋಜನೆಗೆ ಒಳಪಡಿಸಲು ಹಾಗೂ ಅಂತರ್ಜಲ ಮರುಪೂರಕ ಕಾರ್ಯವನ್ನು ನರೇಗಾ ಯೋಜನೆಯಡಿ ಸದುಪಯೋಗ ಪಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಬೇಕು. ರೈತರ ಪರವಾಗಿಯೇ ಕೆಲಸವಾಗಬೇಕು ಎಂದರು.ಫಸಲ್ ಭೀಮಾ ಯೋಜನೆ ರೈತರಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಬೇಕು. ರೈತರಿಗೆ ಕೃಷಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿಕೊಡವ ಜೊತೆಗೆ ಮೊಬೈಲ್ ಗಳಿಗೆ ಕೃಷಿಗೆ ಸಂಬಂಧಿಸಿದ ಆಪ್ ಗಳನ್ನು ಅಳವಡಿಸಿಕೊಂಡು (ಇನ್‌ಸ್ಟಾಲ್) ತಿಳಿಸಿ ಅದರ ಉಪಯೋಗದ ಬಗ್ಗೆ ತಿಳಿಸಿಕೊಡಬೇಕು. ಬೆಳೆಗಳಿಗೆ ಸಂಬಂಧಿಸಿದಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಭತ್ತ, ರಾಗಿ ಬೆಳೆಗೆ ಸೀಮಿತವಾಗದೆ ವಿವಿಧ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕು. ರೈತ ಬೆಳೆದ ಬೆಳೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಅವರು ತಿಳಿಸಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಅಂಗಡಿ, ಇಇ ಎ.ಎಸ್. ಭಾಸ್ಕರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್. ಚಿತ್ರಾ, ಸಹಾಯಕ ನಿರ್ದೇಶಕ ಎಂ.ವಿ. ಹೊನ್ನೇಗೌಡ, ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಗಣೇಶ, ಎಸ್. ಕವಿತಾ, ಬೆಳೆ ವಿಮಾ ಕಂಪನಿಯ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.----------------eom/mys/dnm/
;Resize=(128,128))
;Resize=(128,128))
;Resize=(128,128))
;Resize=(128,128))