ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಜೀವನಾಧಾರಿತ ಉಪ ಕಸುಬುಗಳಾದ ಹೈನುಗಾರಿಕೆ ಮತ್ತು ರೇಷ್ಮೆ ಕೃಷಿ ರೈತರ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ರೈತರು ಭೂಮಿ ಕೊಡಲು ವಿಳಂಬ ಮಾಡಿದ್ದರಿಂದ ಎತ್ತಿನ ಹೊಳೆ ಯೋಜನೆ ಕಾಮಗಾರಿ ವಿಳಂಬವಾಗಿದ್ದು, ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ನೀರು ಸಿಗಲಿದೆ. ಜೊತೆಗೆ ಎಚ್.ಎನ್.ವ್ಯಾಲಿ ನೀರು ಹೆಚ್ಳಳ ಮಾಡಿ ಅಂತರ್ಜಲ ವೃದ್ಧಿಗೆ ಸಹಕರಿಸಲಾಗುವುದು. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಯುವಜನರ ನಿರುದ್ಯೋಗ ನಿವಾರಣೆ ಸೇರಿದಂತೆ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಸಚಿವ ಮುನಿಯಪ್ಪ ಹೇಳಿದರು.
ಡೈರಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಬೊಮ್ಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬಮೂಲ್ ೪.೫೦ ಲಕ್ಷ , ಕೆಎಂಎಫ್ ೪.೫೦ ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ೨ ಲಕ್ಷ ಹಾಗೂ ದಾನಿಗಳಿಂದ ೩ ಲಕ್ಷ ಧನಸಹಾಯ ಸೇರಿ ಒಟ್ಟು ೧೪ ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಇದು ಸಂಘದ ಪ್ರಗತಿಯ ಸಂಕೇತ ಎಂದು ಹೇಳಿದರು.ಬಮೂಲ್ ನಿದೇರ್ಶಕ ಎಸ್.ಪಿ.ಮುನಿರಾಜು ಮಾತನಾಡಿ, ಬಮೂಲ್ ಸದೃಢವಾಗಿದೆ. ಪ್ರತಿದಿನ ೯೬ ಸಾವಿರ ಲೀಟರ್ ಹಾಲು ಪೂರೈಸುತ್ತಿದ್ದೀರಿ. ಮೊದಲು ೧.೫ ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು. ಈಗ ಇಂಡಿ, ಬೂಸಾ ಬೆಲೆ ಹೆಚ್ಚಳದಿಂದ ಹೈನುಗಾರಿಕೆ ಮಾಡಲು ಕಷ್ಟಕರವಾಗಿದೆ. ೨೫ರಿಂದ ೫೦ ಸಾವಿರವಾಗುವ ಮಿಲ್ಕಿ ಮಿಷಿನ್, ಚಾಪ್ ಕಟರ್ ಮುಂತಾದ ಸೌಲಭ್ಯಗಳನ್ನು ರಿಯಾಯತಿ ದರದಲ್ಲಿ ಕೊಡಿಸಲು ಸಚಿವರು ಸಹಕರಸಬೇಕು. ಒಕ್ಕೂಟದಲ್ಲಿ ಬ್ಯಾಂಕ್ ವ್ಯವಸ್ಥೆ ಇಲ್ಲದಿರುವುದರಿಂದ ಬಿಡಿಸಿಸಿ ಬ್ಯಾಂಕ್ ನಲ್ಲಿ ನೂರು ಕೋಟಿ ಠೇವಣಿ ಇಟ್ಟು ಸಹಕಾರ ಸಂಘಗಳಿಂದ ಹಾಲು ಉತ್ಪಾದಕರಿಗೆ ಸಾಲ ಕೊಡಿಸಲು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಇಲ್ಲಿ ನೀವು ಶಿಪಾರಸು ಮಾಡಿದ ಹೈನುಗಾರರಿಗೆ ಶೇ. ೩ರಷ್ಟು ವಾರ್ಷಿಕ ಬಡ್ಡಿದರದಲ್ಲಿ ಸಾಲ ಸಿಗಲಿದೆ. ಹಾಲು ಉತ್ಪಾದಕರ ಮಕ್ಕಳಿಗೆ ಶೇ.೩೦ರಷ್ಟು, ಸಿಬ್ಬಂದಿ ಮಕ್ಕಳಿಗೆ ಶೇ.೫ರಷ್ಟು, ಅಧಿಕಾರಿಗಳ ಮಕ್ಕಳಿಗೆ ಶೇ.೫ರಷ್ಟು ಬಮೂಲ್ ನಲ್ಲಿ ಉದ್ಯೋಗ ಮೀಸಲಿಗೆ ಸುರೇಶ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
೦೧ ದೇವನಹಳ್ಳಿ ಚಿತ್ರಸುದ್ದಿ: ೦೨