ರೈತರ ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ನೆರವು: ಸಿ.ಶಿವಕುಮಾರ್

KannadaprabhaNewsNetwork |  
Published : Sep 16, 2025, 12:03 AM IST
15ಕೆಎಂಎನ್ ಡಿ19 | Kannada Prabha

ಸಾರಾಂಶ

ಹಾಲು ಉತ್ಪಾದಕ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ ಒಕ್ಕೂಟವು ಹಲವು ಸೌಲಭ್ಯ ನೀಡುತ್ತಿದೆ. ಎಲ್ಲವನ್ನು ಸದ್ಬಳಕೆ ಮಾಡಿಕೊಂಡು ರೈತರು ಗುಣ ಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದರೆ ರೈತರ ಅಭಿವೃದ್ಧಿ ಸಾಧ್ಯ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೈನುಗಾರಿಕೆ ರೈತರ ಬೆನ್ನೆಲುಬಾಗಿ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ಕುರಹಟ್ಟಿ ಗ್ರಾಮದ ಡೇರಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಹಾಲು ಉತ್ಪಾದಕ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ ಒಕ್ಕೂಟವು ಹಲವು ಸೌಲಭ್ಯ ನೀಡುತ್ತಿದೆ. ಎಲ್ಲವನ್ನು ಸದ್ಬಳಕೆ ಮಾಡಿಕೊಂಡು ರೈತರು ಗುಣ ಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಸಹಕಾರ ಸಂಘಗಳು ಅಭಿವೃದ್ಧಿ ಹೊಂದಿದರೆ ರೈತರ ಅಭಿವೃದ್ಧಿ ಸಾಧ್ಯ ಎಂದರು.

ಇದೇ ವೇಳೆ ಸಿ.ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತಾರ್ಣಾಧಿಕಾರಿ ಸಿ.ಎಸ್.ಮಧುಶಂಕರ್, ಸಂಘದ ಅಧ್ಯಕ್ಷೆ ಬಿ.ಸಿ.ರೋಹಿಣಿ, ಉಪಾಧ್ಯಕ್ಷೆ ಕೋಮಲ, ಫ್ರೆಂಚ್ ರಾಕ್ಸ್ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಕೆ.ಆರ್.ಸ್ವಾಮೀಗೌಡ, ಕಾರ್ಯದರ್ಶಿ ಪುಟ್ಟಬಸವೇಗೌಡ, ನಿರ್ದೇಶಕರಾದ ಇಂದ್ರಮ್ಮ, ದಿವ್ಯ, ಗೀತಾ ಎಚ್.ಎಂ., ಸುಶೀಲ, ಶ್ವೇತ ಬಿ.ಕೆ., ರೋಜ ಕೆ.ಆರ್, ಮುಖಂಡರಾದ ಕೆ.ಆರ್.ಗುರುಮೂರ್ತಿ, ಕೆ.ಮಹದೇವು, ಯ.ಕೆ.ಎಚ್.ಕೆಂಪೇಗೌಡ, ಸೊಸೈಟಿ ನಿರ್ದೇಶಕ ಸಿ. ಮಹದೇವು, ಕಾರ್ಯದರ್ಶಿ ಆಶಾಹರೀಶ್, ಸಿಬ್ಬಂದಿ ಪುಷ್ಪ ಶ್ರೀನಿವಾಸ್, ರತ್ನಗಿರಿಶೆಟ್ಟಿ ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಸದಸ್ಯರ ಸಹಕಾರವಿದ್ದರೆ ಸಂಘದ ಅಭಿವೃದ್ಧಿ ಸಾಧ್ಯ: ಎಚ್.ವಿ.ಅಶ್ವಿನ್ ಕುಮಾರ್

ಹಲಗೂರು: ಸಹಕಾರ ಸಂಘಗಳು ಅಭಿವೃದ್ಧಿ ಆಗಬೇಕಾದರೆ ಸದಸ್ಯರು ಪ್ರತಿಯೊಬ್ಬರಿಂದ ಫಿಕ್ಸೆಡ್ ಡೆಪಾಸಿಟ್ ಮಾಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಜನಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್ ತಿಳಿಸಿದರು.

ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಘಕ್ಕೆ ಈ ವರ್ಷ 15 ಲಕ್ಷದ 663 ರು. ನಿವ್ವಳ ಲಾಭ ಬಂದಿದೆ. ಕಳೆದ 8 ವರ್ಷಗಳ ಹಿಂದೆ ಆರಂಭವಾದ ಸಂಘದಲ್ಲಿ ಅಂದಿನಿಂದ ಇಂದಿನವರೆಗೂ 60 ಲಕ್ಷ ರು. ಪ್ರಸ್ತುತ ಠೇವಣಿ ಇರುವುದರಿಂದ ಮುಂದಿನ ದಿನಗಳಲ್ಲಿ ಸಂಘದ ಹೆಸರಿನಲ್ಲಿ ಸ್ವಂತ ನಿವೇಶನ ಖರೀದಿ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಸಂಘದಿಂದ 2 ಕೋಟಿ, 10 ಲಕ್ಷ, 42,000 ರು.ಗಳನ್ನು ಗ್ರಾಹಕರಿಗೆ ಸಾಲ ನೀಡಿದೆ. ಸಂಘದ ಕಾರ್ಯಕ್ಕೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗುರುತಿಸಿ 5 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿದೆ. ಸಂಘದ ಉಪಾಧ್ಯಕ್ಷ ಪುಟ್ಟಲಿಂಗೇಗೌಡ, ಕಾರ್ಯನಿರ್ವಹಣಾಧಿಕಾರಿ ನಾಗವೇಣಿ ಅವರಿಗೆ ಅಭಿನಂದಿಸಿದ್ದಾರೆ ಎಂದರು.

ಸಂಘವು ಪ್ರಸ್ತುತ ಪಿಗ್ಮಿ ಸಂಗ್ರಹಣೆಯಲ್ಲಿ ಉತ್ತಮ ಗಳಿಕೆಯಲ್ಲಿದೆ. ನಿಶ್ಚಿತ ಠೇವಣಿ ಇಡುವ ಸದಸ್ಯರಿಗೆ ಮೂರು ವರ್ಷಕ್ಕೆ 12ರಷ್ಟು ಬಡ್ಡಿ ನೀಡಲಾಗುತ್ತದೆ. ಸದಸ್ಯರು ಹೆಚ್ಚುವರಿಯಾಗಿ ಎಫ್‌ಡಿ ಇಡಲು ಸಹಕರಿಸಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಪುಟ್ಟಲಿಂಗೇಗೌಡ, ನಿರ್ದೇಶಕರಾದ ವಿರೂಪಾಕ್ಷ, ತಮ್ಮಣ್ಣೇಗೌಡ, ಎಚ್.ಆರ್.ರವಿ, ಎಚ್.ಎನ್.ಶ್ರೀಧರ್, ಎಂ.ಎನ್.ಶೋಭಾ, ಬಿ.ಕೆ.ಸುರೇಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗವೇಣಿ, ಸಿಬ್ಬಂದಿ ಎಂ.ಪರಮೇಶ್, ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ