ದೇವನಹಳ್ಳಿ: ರೇಷ್ಮೆ ಮತ್ತು ಹೈನುಗಾರಿಕೆ ರೈತರಿಗೆ ಎರಡು ಕಣ್ಣುಗಳಿದ್ದಂತೆ, ಹೈನುಗಾರಿಕೆ ರೈತರ ಆರ್ಥಿಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಈ ಹಿಂದೆ ಫಾರಂ ಹಸಿ ಹುಲ್ಲು ನೀಡುತ್ತಿದ್ದೆವು. ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದೆ. ತಾಂತ್ರಿಕತೆ ಹೆಚ್ಚಾಗುತ್ತಿದೆ. ಹೊಸ ತಂತ್ರಜ್ಞಾನ ಬೆಳೆಸಿಕೊಂಡು ಹೈನುಗಾರಿಕೆ ಮಾಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸಾವಕನಹಳ್ಳಿ ಎಸ್.ಪಿ.ಮುನಿರಾಜು ಮಾತನಾಡಿ, ಜೋಳದ ಹಸಿ ಮೆವನ್ನು ಸಂಗ್ರಹಿಸಿ ಸೈಲೇಜ್ ಬ್ಯಾಗಿನಲ್ಲಿ ಸಂಗ್ರಹಿಸಿ ಒಂದು ವರ್ಷದವರೆಗೂ ಹಾಲು ಉತ್ಪಾದಕ ರೈತರು ಬಳಸಬಹುದು. ಸೈಲೇಜ್ ಯಂತ್ರದಲ್ಲಿ ಖಾಸಗಿ ಅವರು ಒಂದು ಕೆಜಿಗೆ ೧೦ ರುಪಾಯಿ ತೆಗೆದುಕೊಳ್ಳುತ್ತಾರೆ. ಆದರೆ ನಾವು ರೈತರು ಜೋಳದ ಕಡ್ಡಿಗಳ ಹಸಿ ಮೇವನ್ನು ತೆಗೆದುಕೊಂಡು ಬಂದರೆ ಕಾರ್ಮಿಕರ ಕೂಲಿ ವೆಚ್ಚ, ಡೀಸೆಲ್ ಖರ್ಚು, ಸೈಲೇಜ್ ೫೦ ರಿಂದ ೬೦ ಕೆಜಿ ಬ್ಯಾಗ್ ದರ ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಬಿ.ರಾಜಣ್ಣ, ಬಯಪಾ ಅಧ್ಯಕ್ಷ ವಿ.ಶಾಂತಕುಮಾರ್, ನಿರ್ದೇಶಕ ಸಿ.ಪ್ರಸನ್ನಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ, ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ದೇವನಹಳ್ಳಿ ಶಿಬಿರ ಕಚೇರಿಯ ಮುಖ್ಯಸ್ಥ ಮುನಿರಾಜು, ದೇವನಹಳ್ಳಿ ಶಿಬಿರ ಕಚೇರಿಯ ಪಶು ಮುಖ್ಯಸ್ಥ ಡಾ.ಭರತ್, ಡಾ.ಮಹದೇವ, ದೇವನಹಳ್ಳಿ ಶಿಬಿರ ಕಚೇರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.೨೩ ದೇವನಹಳ್ಳಿ ಚಿತ್ರಸುದ್ದಿ: ೦೧
ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.