ಕುಕನೂರು: ಆರ್ಥಿಕವಾಗಿ ಬೆಳೆಯುವುದಕ್ಕೆ ಹೈನುಗಾರಿಗೆ ಒಂದು ಉದ್ಯಮವಾಗಿ ಬೆಳೆದಿದೆ ಎಂದು ರಾಜ್ಯ ಕೆಎಂಎಫ್‌ನ ನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಹೇಳಿದರು.
ಸಮೀಪದ ದ್ಯಾಂಪೂರ ಗ್ರಾಮದ ಹಾಳು ಉತ್ಪಾದಕ ಸಹಕಾರ ಸಂಘದಿಂದ ಗುರುವಾರ ಜರುಗಿದ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿ ಪ್ರತಿಯೊಬ್ಬರು ಅರಿಯಬೇಕು.ರಾಜ್ಯ ಸರ್ಕಾರದಿಂದ ಯಾವುದೇ ಒಂದು ಕಾರ್ಯಕ್ಕೆ ಅನುದಾನ ಬರಬೇಕಾದರೆ ೬೦ ರಿಂದ ೬೫ ರಷ್ಟು ಮಾತ್ರ ಅನುದಾನ ಬರುತ್ತದೆ. ಸಹಕಾರ ಸಂಘಕ್ಕೆ ಬಂದ ಅನುದಾನ ಶೇ.೯೦ ರಿಂದ ೯೫ ರಷ್ಟು ಉಪಯೋಗವಾಗುತ್ತದೆ. ಒಂದೇ ಆಕಳನ್ನು ಕಟ್ಟುವದನ್ನು ಬಿಟ್ಟು ಹತ್ತಾರು ಆಕಳನ್ನು ಸಾಕುವ ಮೂಲಕ ಸಹಕಾರ ಸಂಘಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ೨೦೨೫ ಅಂತಾರಾಷ್ಟ್ರೀಯ ಸಹಕಾರಿ ವರ್ಷ ಎಂದು ಹೇಳಬಹುದು. ಸಹಕಾರಿ ಕ್ಷೇತ್ರದಲ್ಲಿ ಬಜೆಟ್‌ನಲ್ಲಿ ₹೧೨೦ ಕೋಟಿ ಅನುದಾನ ಇಟ್ಟಿರುವದು ನಮ್ಮ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ. ಕ್ಷೇತ್ರದಲ್ಲಿ ೧೪ ರಿಂದ ೧೫ ಹಾಲಿನ ಡೈರಿ ಕಟ್ಟಡ ನಿರ್ಮಾಣಕ್ಕೆ ₹೩ ಲಕ್ಷ ಅನುದಾನ ನೀಡುವ ಯೋಜನೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪದಕ ಸಹಕಾರ ಸಂಘದ ಅಧ್ಯಕ್ಷ ಫಕೀರಯ್ಯ ಬೆಣಕಲ್ ವಹಿಸಿದ್ದರು. ಉಪಾಧ್ಯಕ್ಷೆ ಅನ್ನಮ್ಮ ಬಿಡನಾಳ, ಸಂಘದ ಕಾರ್ಯದರ್ಶಿ ಶಿವಕುಮಾರ ಸಿದ್ನೇಕೊಪ್ಪ, ರಾ.ಬ.ಕೋ ಒಳ್ಳಾರಿ ಒಕ್ಕೂಟದ ನಿರ್ದೇಶಕಿ ಕಮಲಮ್ಮ ಲಕಮಾಪುರ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಭೀಮರಡ್ಡಿ ಶ್ಯಾಡ್ಲಗೇರಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಹಾಂತೇಶ ಸಜ್ಜನ್, ಕೊಪ್ಪಳ ಸಹಕಾರ ನಿಂಬಂಧಕ ಮಲ್ಲಯ್ಯ ಕಂದಾ, ಯಲಬುರ್ಗಾ ಸಹಕಾರ ಅಧಿಕಾರಿ ಚಂದ್ರಶೇಖರ, ಕುಕನೂರು ವಿಸ್ತೀರ್ಣಾಧಿಕಾರಿ ರತ್ನಾ ಹಕ್ಕಂಡಿ, ಯಲಬುರ್ಗಾ ವಿಸ್ತೀರ್ಣಾಧಿಕಾರಿ ಬಸವರಾಜ ಯರದೊಡ್ಡಿ, ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ, ಸಮಾಲೋಚಕ ಸೋಮಶೇಖರ ಗುರಿಕಾರ, ಸತ್ಯನಾರಾಯಣ ಅಂಗಡಿ, ಕಳಕಯ್ಯ ದೊಪದ, ಸುರೇಶ ಚೌಡಕಿ, ರಾಜೂರು ಹಾಲು ಉತ್ಪಾದಕರ ಅಧ್ಯಕ್ಷೆ ಪಾರ್ವತಿ ಶಿವಾನಂದಪ್ಪ ದೊಡ್ಡಮನಿ, ಕುಕನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ ಕಳ್ಳಿಮಠ, ಶಿವಲಿಂಗಯ್ಯ ಶಿರೂರಮಠ, ಗಿರಿಯಪ್ಪ ಬೀಡಿನಾಳ, ಶರಣಯ್ಯ ಸಸಿಮಠ, ಮುತ್ತಯ್ಯ ಗಣೇಚಾರ್, ಶಿವಯ್ಯ ಇತರರಿದ್ದರು.