ಮಂಗ್ಳೂರಿಗೆ 2 ಲಕ್ಷ ಟನ್‌ ಕಚ್ಚಾ ತೈಲ ಹಡಗು ಆಗಮನ

Published : Mar 22, 2026, 09:06 AM IST
Crude Oil

ಸಾರಾಂಶ

ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಚಾತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ. ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡಿಕೊಂಡಿದ್ದು, ಚೀನಾಕ್ಕೆ ತೆರಳುವ ಗುರಿ ಹೊಂದಿತ್ತು.

ಮಂಗಳೂರು :  ಮಧ್ಯಪ್ರಾಚ್ಯ ದೇಶಗಳ ಯುದ್ಧದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ಕಚ್ಚಾತೈಲದ ಬೃಹತ್‌ ಹಡಗು ಮಂಗಳೂರು ಬಂದರಿಗೆ ಶನಿವಾರ ರಾತ್ರಿ ತಲುಪಿದೆ.

ಅಕ್ವಾ ಟೈಟಾನ್‌ ಎಂಬ ಹೆಸರಿನ ಈ ಸರಕು ಹಡಗು

ಅಕ್ವಾ ಟೈಟಾನ್‌ ಎಂಬ ಹೆಸರಿನ ಈ ಸರಕು ಹಡಗು ಜನವರಿ ಅಂತ್ಯದ ವೇಳೆಗೆ ರಷ್ಯಾದಲ್ಲಿ ಕಚ್ಚಾ ತೈಲವನ್ನು ಲೋಡ್‌ ಮಾಡಿಕೊಂಡಿದ್ದು, ಚೀನಾಕ್ಕೆ ತೆರಳುವ ಗುರಿ ಹೊಂದಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಆಗ್ನೇಯ ಏಷ್ಯಾದ ಜಲ ಪ್ರದೇಶಕ್ಕೆ ಬರುತ್ತಿದ್ದಂತೆ ಈ ಹಡಗಿನ ಪಥ ಬದಲಿಸಲಾಗಿದ್ದು, ಮಂಗಳೂರು ತಲುಪಿದೆ.

1.1ರಿಂದ 2 ಲಕ್ಷ ಟನ್‌ನಷ್ಟು ಕಚ್ಛಾ ತೈಲ

ಆಕ್ವಾ ಟೈಟಾನ್ ಹಡಗಿನಲ್ಲಿ 1.1ರಿಂದ 2 ಲಕ್ಷ ಟನ್‌ನಷ್ಟು ಕಚ್ಛಾ ತೈಲ ಇದ್ದು, ಮಂಗಳೂರು ಬಂದರಿಗಿಂತ ಸ್ವಲ್ಪ ದೂರದಲ್ಲಿ ಸಮುದ್ರ ಮಧ್ಯದಿಂದ ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕಕ್ಕೆ ಪೈಪ್‌ಲೈನ್ ಮೂಲಕ ಈ ತೈಲವನ್ನು ಅನ್‌ಲೋಡ್‌ ಮಾಡಲಾಗುತ್ತದೆ. ಭಾನುವಾರ ಬೆಳಗ್ಗೆ ಈ ಪ್ರಕ್ರಿಯೆ ಆರಂಭಿಸಲಾಗುತ್ತದೆ, ಮುಗಿಯಲು ಒಂದು-ಒಂದೂವರೆ ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಇಂಧನ ಬೇಡಿಕೆ ಪೂರೈಸುವಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಕಾಲಗಣನೆಯಲ್ಲಿ ಆತ್ಮನಿರ್ಭರತೆಗಾಗಿ ಕನ್ನಡಿಗನ ಸಾಹಸ!
ಮಂಗಳೂರಿಗೆ ಆಗಮಿಸಿದ ಕಚ್ಚಾತೈಲ ಹಡಗು