ಹೊಸಪೇಟೆ: ನಗರದ ಬಡ, ದಲಿತ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ಸ್ಲಂ ಬೋರ್ಡ್ ವಿತರಿಸಿರುವ ನಿವೇಶನಗಳ ಹಕ್ಕುಪತ್ರಗಳ ಆಧಾರದಲ್ಲಿ ಫಾರಂ ನಂ.3 ವಿತರಿಸಿ, ನೋಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಕೂಡಲೇ ಕೊಳಗೇರಿ ಅಭಿವೃದ್ಧಿ ನಿಮಗದ ಉಪವಿಭಾಗದ ಎಇಇ ತಿಮ್ಮಣ್ಣ ಅವರನ್ನು ಅಧಿಕಾರ ದುರ್ಬಳಕೆ ಕಾಯ್ದೆ ಅಡಿಯಲ್ಲಿ ಅಮಾನತು ಮಾಡಿ ಫಲಾನುಭವಿಗಳಿಗೆ ನೋಂದಣಿ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ನಗರಸಭೆಯಲ್ಲಿ ಫಾರಂ ನಂ.3 ಮಾಡಿಸಲಿಕ್ಕೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಶಿಸ್ತಿನ ಆದೇಶ ಮಾಡಿಸಬೇಕು. ಬಡ, ನಿರ್ಗತಿಕ ಫಲಾನುಭವಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಳ್ಳಿ, ತಾಲೂಕು ಅಧ್ಯಕ್ಷ ಸಿ.ರಮೇಶ್, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ನಾಗರಾಜ್ ಒತ್ತಾಯಿಸಿದ್ದಾರೆ.