ಕನ್ನಡಪ್ರಭ ವಾರ್ತೆ ಸಕಲೇಶಪುರ
ದಲಿತರಿಗೆ ಅನ್ಯಾಯವಾದಾಗ ಸಿಡಿದೆದ್ದು ನ್ಯಾಯ ಕೇಳುವ ರೂಢಿಯನ್ನು ಕರಗತ ಮಾಡಿಕೊಳ್ಳಬೇಕಿದೆ. ನಮ್ಮ ಶಾಸಕತ್ವದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ ಎಲ್ಲಿಯೂ ನಮ್ಮ ಹೆಸರು ಹಾಕಿಕೊಂಡಿಲ್ಲ. ಮಾಡುವ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ. ಹೊರತು ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕಿದರೆ ಜನರು ಮೆಚ್ಚುವುದಿಲ್ಲ. ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕೇವಲ ಚುನಾವಣೆ ಉದ್ದೇಶ ಹೊರತುಪಡಿಸಿ ಜನಪರ ಕಾರ್ಯದಲ್ಲಿ ತೊಡಗಿಕೊಳ್ಳುವತ್ತ ಕೆಲಸ ಮಾಡಬೇಕು. ಸದ್ಯದಲ್ಲಿ ಜೆಡಿಎಸ್ ಎಲ್ಲ ವಿಭಾಗಗಳಿಗೂ ಪದಾಧಿಕಾರಿಗಳ ನೇಮಕವಾಗಲಿದ್ದು ಪಕ್ಷದ ಬಗ್ಗೆ ನಿಷ್ಠೆ ಹೊಂದಿರುವ ಹಾಗೂ ಸಕ್ರಿಯ ವ್ಯಕ್ತಿಗಳಿಗೆ ಮಾತ್ರ ಹುದ್ದೆ ನೀಡಲಿದ್ದೇವೆ. ಹಿಂದಿನ ಚುನಾವಣೆ ಸೋಲನ್ನು ಮರೆತು ಪಕ್ಷ ಸಂಘಟನೆಯತ್ತ ಗಮನಹರಿಸಿ. ಸೋಲಿನ ಕಾರಣಗಳನ್ನು ಪರಾಮರ್ಶೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಿಗೆ ಆಸ್ಪದವಾಗದಂತೆ ಕೆಲಸ ಮಾಡಲಾಗುವುದು. ಎನ್‌ಡಿಎ ಹೈಕಮಾಂಡ್ ಸೂಚಿಸಿದ ವ್ಯಕ್ತಿಗೆ ಚುನಾವಣೆಯಲ್ಲಿ ಕೆಲಸ ಮಾಡುವುದು ಎಲ್ಲರಿಗೂ ಅನಿವಾರ್ಯ. ಕೇವಲ ಚುನಾವಣೆಗಾಗಿ ಕೆಲಸ ಮಾಡದೆ ಜನರ ಸೇವೆಯಲ್ಲಿ ಸಂತೃಪ್ತಿ ಪಡುವ ಗುಣ ಬೆಳಸಿಕೊಳ್ಳ ಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದಾಗ ಮಾತ್ರ ಕಾರ್ಯಕರ್ತರಿಗೆ ಬೆಲೆ ನಮ್ಮಲ್ಲಿ ಯಾವುದೇ ಭಿನ್ನಮತವಿದ್ದರೂ ಚುನಾವಣೆ ವೇಳೆ ಇದನ್ನು ಪ್ರದರ್ಶಿಸದೇ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಒಂದು ಕುಟುಂಬದಂತೆ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದಲ್ಲಿ ನಮ್ಮ ಶಾಸಕರು ಇರಲಿದ್ದಾರೆ ಎಂದರು.ಈ ವೇಳೆ ಜೆಡಿಎಸ್ ಮುಖಂಡರಾದ ಚಂಚಲಾ ಕುಮಾರಸ್ವಾಮಿ, ಹೆನ್ನಲಿ ಈರಯ್ಯ, ಹಾನುಬಾಳ್ ಗೋಪಾಲ್, ಬಾಳ್ಳು ಧರ್ಮ, ಮಂಜುಳಾ, ರುಕ್ಮಿಣಿ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.