ದೀಕ್ಷಾ ಮೂಲಕ ಅರ್ಥ ವ್ಯವಸ್ಥೆಗೆ ದಾಲ್ಮಿಯಾ ಕೊಡುಗೆ

KannadaprabhaNewsNetwork |  
Published : Jul 23, 2025, 01:45 AM IST
ಚಚಚಚ | Kannada Prabha

ಸಾರಾಂಶ

ದೇಶನಲ್ಲಿ ದಾಲ್ಮಿಯಾವು ಪ್ರಾಯೋಗಿಕ ತರಬೇತಿ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಲಿಷ್ಠ ಹಾಗೂ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ಸನ್ನದ್ಧವಾಗಿದೆ. ಕಂಪನಿಯು ತನ್ನ ದೀಕ್ಷಾ ಮೂಲಕ ನೀಡಿರುವ ತರಬೇತಿಯಿಂದ ಯುವಕರ ಸ್ವಂತ ಬದುಕು ಕಂಡುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ದಾಲ್ಮಿಯಾ ಭಾರತ್ ಫೌಂಡೇಶನ್‌ ಸಿಇಒ ಅಶೋಕ್ ಕುಮಾರ್ ಗುಪ್ತಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶನಲ್ಲಿ ದಾಲ್ಮಿಯಾವು ಪ್ರಾಯೋಗಿಕ ತರಬೇತಿ ಮೂಲಕ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಬಲಿಷ್ಠ ಹಾಗೂ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ಸನ್ನದ್ಧವಾಗಿದೆ. ಕಂಪನಿಯು ತನ್ನ ದೀಕ್ಷಾ ಮೂಲಕ ನೀಡಿರುವ ತರಬೇತಿಯಿಂದ ಯುವಕರ ಸ್ವಂತ ಬದುಕು ಕಂಡುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ದಾಲ್ಮಿಯಾ ಭಾರತ್ ಫೌಂಡೇಶನ್‌ ಸಿಇಒ ಅಶೋಕ್ ಕುಮಾರ್ ಗುಪ್ತಾ ಹೇಳಿದರು.

ದಾಲ್ಮಿಯಾ ಭಾರತ್ ಫೌಂಡೇಶನ್ (ಡಿಬಿಎಫ್) ವಿಶ್ವ ಕೌಶಲ್ಯ ದಿನದ ಸಂದರ್ಭದಲ್ಲಿ ತನ್ನ ಪ್ರಮುಖ ಕೌಶಲ್ಯ ಅಭಿವೃದ್ಧಿ ಯೋಜನೆಯಾದ ದೀಕ್ಷಾ (ದಾಲ್ಮಿಯಾ ಇನ್‌ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಆ್ಯಂಡ್‌ ಸ್ಕಿಲ್ ಹಾರ್ನೆಸಿಂಗ್) ದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವ ಯುವ ಕೌಶಲ್ಯ ದಿನದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಯೋಜನೆ ಗ್ರಾಮೀಣ ಮಟ್ಟದಲ್ಲಿನ ಯುವಜನರಿಗೆ ಸರಿಯಾಗಿ ತಲುಪಬೇಕಿದೆ. ಅವರಿಗೆ ಸರಿಯಾದ ಕೌಶಲ್ಯಗಳನ್ನು ಕಲಿಸುವುದರಿಂದ ಬಲಿಷ್ಠ ಭಾರತಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದರು.ದೀಕ್ಷಾ ಮೂಲಕವಾಗಿ ಸಾಕಷ್ಟು ಜನ ಯುವಕರಿಗೆ ತರಬೇತಿಗಳನ್ನು ನೀಡಿ, ಅನೇಕ ಯುವಕರ ಜೀವನವನ್ನು ಪರಿವರ್ತಿಸಬಹುದು. ಇದಕ್ಕಾಗಿ ದಾಲ್ಮಿಯಾ ಕಟಿಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಮಾತ್ರವಲ್ಲ, ದೇಶದ ಅರ್ಥವ್ಯವಸ್ಥೆಗೆ ಪರೋಕ್ಷವಾಗಿ ತನ್ನದೆಯಾದ ಕಾಣಿಕೆಯನ್ನು ನೀಡುತ್ತಿದೆ ಎಂದು ತಿಳಿಸಿದರು.ದೀಕ್ಷಾದ ಕೌಶಲ್ಯ ತರಬೇತಿ ಕಾರ್ಯಕ್ರಮವು ಸಮಗ್ರ ವಿಧಾನವನ್ನು ಒಳಗೊಂಡಿದ್ದು, ಇದರಲ್ಲಿ ಪ್ರಾಯೋಗಿಕ ತರಬೇತಿ, ವೃತ್ತಿ ಸಲಹೆ ಮತ್ತು ಉದ್ಯೋಗ ನಿಯೋಜನೆ ಮುಂತಾದ ಸಹಾಯ ದೊರಕಲಿದೆ. ಕೋರ್ಸ್‌ಗಳು ಎನ್‌ಎಸ್‌ಡಿಸಿ ಮತ್ತು ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳಿಂದ ಪ್ರಮಾಣೀಕೃತವಾಗಿದ್ದು, ಉದ್ಯಮಕ್ಕೆ ತಕ್ಕಂತೆ ರೂಪಿಸಲಾಗಿದೆ. ಅನೇಕ ಪದವೀಧರರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಲ್ಲಿ ಆದಾಯ ಹೆಚ್ಚಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸದ ಬದುಕು ಸಾಧ್ಯವಾಗುತ್ತಿದೆ ಎಂದರು.2025ರಲ್ಲಿ 20 ಕೇಂದ್ರಗಳಲ್ಲಿ 6925 ಯುವಪೀಳಿಗೆಗೆ ತರಬೇತಿ ನೀಡಲಾಗಿದ್ದು, ಅನೇಕರು ಮೂರು ತಿಂಗಳೊಳಗೆ ಉದ್ಯೋಗ ಪಡೆದಿದ್ದಾರೆ. ಕೆಲವರು ವ್ಯವಹಾರ ಆರಂಭಿಸಿದ್ದಾರೆ. ಶೇ.50ಕ್ಕಿಂತ ಹೆಚ್ಚು ಮಂದಿ ಮಹಿಳಾ ಅಭ್ಯರ್ಥಿಗಳಿಗೂ ತರಬೇತಿ ನೀಡಲಾಗಿದೆ. ದೀಕ್ಷಾ ಆರ್ಥಿಕ ಸಬಲೀಕರಣದ ಮೂಲಕ ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ