ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೃತ್ಯ ತರಬೇತಿ ಪೂರಕ

KannadaprabhaNewsNetwork |  
Published : Feb 12, 2025, 12:31 AM IST
ಕ್ಯಾಪ್ಷನ10ಕೆಡಿವಿಜಿ37 ದಾವಣಗೆರೆಯಲ್ಲಿ ನಮನ ಅಕಾಡೆಮಿಯಿಂದ ನಡೆದ ಪೂರ್ವ ರಂಗ ನಮನ: ಭರತನಾಟ್ಯದ ನೃತ್ಯ ವೈಭವ ಕಾರ್ಯಕ್ರಮವನ್ನು ದಿನೇಶ ಕೆ.ಶೆಟ್ಟಿ ಉದ್ಘಾಟಿಸಿದರು. ........ಕ್ಯಾಪ್ಷನ10ಕೆಡಿವಿಜಿ38 ದಾವಣಗೆರೆಯಲ್ಲಿ ನಡೆದ ನಮನ ಅಕಾಡೆಮಿಯ ಪೂರ್ವ ರಂಗ ನಮನ ಕಾರ್ಯಕ್ರಮದಲ್ಲಿ ವಿದುಷಿ ಡಿ.ಕೆ.ಮಾಧವಿ ಶಿಷ್ಯಂದಿರು ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನೀಡಿದರು. | Kannada Prabha

ಸಾರಾಂಶ

ಮಕ್ಕಳ ನೃತ್ಯವನ್ನು ನೋಡಿದರೆ ಅವರಲ್ಲಿ ಇರುವ ಶ್ರದ್ಧೆ, ಪರಿಶ್ರಮ ಆಸಕ್ತಿ ಎದ್ದುಕಾಣುತ್ತಿದೆ. ಯಾರು ತಮ್ಮನ್ನು ಇಂತಹ ಒಳ್ಳೆಯ ಚಟುವಟಿಕೆಗಳಿಗೆ ಅಳವಡಿಸಿಕೊಳ್ಳುತ್ತಾರೋ, ಅಂತಹ ಮಕ್ಕಳು ಓದಿನಲ್ಲಿಯೂ ಮುಂದೆ ಬರುತ್ತಾರೆ ಎಂದು ನಮನ ಅಕಾಡೆಮಿ ಉಪಾಧ್ಯಕ್ಷ ಹಾಗೂ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

- ಪೂರ್ವ ರಂಗನಮನ: ಭರತನಾಟ್ಯದ ನೃತ್ಯವೈಭವ ಕಾರ್ಯಕ್ರಮದಲ್ಲಿ ದಿನೇಶ ಶೆಟ್ಟಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳ ನೃತ್ಯವನ್ನು ನೋಡಿದರೆ ಅವರಲ್ಲಿ ಇರುವ ಶ್ರದ್ಧೆ, ಪರಿಶ್ರಮ ಆಸಕ್ತಿ ಎದ್ದುಕಾಣುತ್ತಿದೆ. ಯಾರು ತಮ್ಮನ್ನು ಇಂತಹ ಒಳ್ಳೆಯ ಚಟುವಟಿಕೆಗಳಿಗೆ ಅಳವಡಿಸಿಕೊಳ್ಳುತ್ತಾರೋ, ಅಂತಹ ಮಕ್ಕಳು ಓದಿನಲ್ಲಿಯೂ ಮುಂದೆ ಬರುತ್ತಾರೆ ಎಂದು ನಮನ ಅಕಾಡೆಮಿ ಉಪಾಧ್ಯಕ್ಷ ಹಾಗೂ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಬಾಪೂಜಿ ಸಭಾಂಗಣದಲ್ಲಿ ನಮನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ನಡೆದ ಪೂರ್ವ ರಂಗನಮನ: ಭರತನಾಟ್ಯದ ನೃತ್ಯ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಪೋಷಕರಲ್ಲಿ ಮಕ್ಕಳಿಗೆ ಓದಿನ ಜೊತೆಗೆ ಇಂತಹ ಸಾಂಸ್ಕೃತಿಕ ಕಲೆಗಳ ತರಬೇತಿಗೆ ಸೇರಿಸುವ ಆಸಕ್ತಿ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ಸರ್ವತೋನ್ಮುಖ ಬೆಳವಣಿಗೆ ಆಗುತ್ತದೆ. ಈ ನಿಟ್ಟಿನಲ್ಲಿ ಅಂತರ ರಾಷ್ಟ್ರೀಯಮಟ್ಟದ ಕಲಿಕೆಯನ್ನು ನೀಡುತ್ತಿರುವ ಗುರು ವಿದುಷಿ ಡಿ.ಕೆ.ಮಾಧವಿ ಅವರ ಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ನಮನಶ್ರೀ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ನಿನಾದ ನಾಟ್ಯ ಅಕಾಡೆಮಿಯ ನಿರ್ದೇಶಕಿ, ಗುರು ವಿದುಷಿ ಧರಣಿ ಟಿ.ಕಶ್ಯಪ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಾಧವಿಯ ಶಿಷ್ಯಂದಿರ ನೃತ್ಯ ನೋಡಿ ಅವರ ಬದ್ಧತೆ ಶ್ರಮ ಎಲ್ಲವೂ ಕಾಣುತ್ತಿದೆ ಎಂದು ಶುಭ ಹಾರೈಸಿದರು.

ನಮನ ಅಕಾಡೆಮಿ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ನೃತ್ಯಗುರು ವಿದುಷಿ ಡಿ.ಕೆ.ಮಾಧವಿ, ಸೋಶಿಯಲ್ ಮೀಡಿಯಾ ಚಾನೆಲ್‌ನ ಗಾಯತ್ರಿ, ನಗರಸಭಾ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್, ಅಕಾಡೆಮಿಯ ನಿರ್ದೇಶಕರಾದ ಪಿ.ಸಿ.ರಾಮನಾಥ, ಅನಿಲ್ ಬಾರಂಗಳ್, ಕಿರಣ್ ರವಿನಾರಾಯಣ್, ಸಿ.ಆರ್.ರಜತ್, ಅಕಾಡೆಮಿ ಅಧ್ಯಕ್ಷ ಕೆ.ಎನ್.ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು. ಮಾನಸ ಕಾರ್ಯಕ್ರಮ ನಿರೂಪಿಸಿ, ರಾಮನಾಥ ವಂದಿಸಿದರು.

ದೇವಿ ಸ್ತುತಿಗೆ ಮಡಿಕೆಯ ಮೇಲೆ ನಿಂತು ನೃತ್ಯ ಹಾಗೂ "ಶ್ರೀಕೃಷ್ಣ ವಿಲಾಸಂ " ಶ್ರೀಕೃಷ್ಣನ ಲೀಲಾವಿಭೂಷಿತ ಗಾಥೆಯ ನೃತ್ಯನಾಟಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಋತು ಹಿರೇಮಠ್, ಸಿ.ಜಿ.ಅದಿತಿ ತಂಡ ನಟೇಶ ಕೌತುವಂ ಪ್ರಸ್ತುತಪಡಿಸಿದರು.

- - - -10ಕೆಡಿವಿಜಿ37.ಜೆಪಿಜಿ:

ದಾವಣಗೆರೆಯಲ್ಲಿ ಪೂರ್ವ ರಂಗನಮನ: ಭರತನಾಟ್ಯದ ನೃತ್ಯ ವೈಭವ ಕಾರ್ಯಕ್ರಮವನ್ನು ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು.

-10ಕೆಡಿವಿಜಿ38:

ದಾವಣಗೆರೆಯಲ್ಲಿ ನಡೆದ ನಮನ ಅಕಾಡೆಮಿಯ ಪೂರ್ವ ರಂಗನಮನ ಕಾರ್ಯಕ್ರಮದಲ್ಲಿ ವಿದುಷಿ ಡಿ.ಕೆ.ಮಾಧವಿ ಶಿಷ್ಯಂದಿರು ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ