ಹಿಂದೂ ಸಮಾಜ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಮಾಜದ ಪ್ರತಿಯೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಆರ್ಎಸ್ಎಸ್ನ ಉತ್ತರ ಕರ್ನಾಟಕ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಕೃಷ್ಣಾನಂದ ಕಾಮತ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಹಿಂದೂ ಸಮಾಜ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಮಾಜದ ಪ್ರತಿಯೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಆರ್ಎಸ್ಎಸ್ನ ಉತ್ತರ ಕರ್ನಾಟಕ ಪ್ರಾಂತ ಸಹ ವ್ಯವಸ್ಥಾ ಪ್ರಮುಖ ಕೃಷ್ಣಾನಂದ ಕಾಮತ ಹೇಳಿದರು. ನಗರದಲ್ಲಿ ಭಾನುವಾರ ನಮಸ್ಕಾರ ಮಂಡಲಿ ಮೈದಾನದಲ್ಲಿ ಪಥಸಂಚಲನದ ಸಮಾರೋಪದ ಮುಖ್ಯ ವಕ್ತಾರರಾಗಿ ಮಾತನಾಡಿದರು. ಹಿಂದೂ ಸಮಾಜ 200 ವರ್ಷಗಳ ಗುಲಾಮ ಗಿರಿಯಿಂದ ಜಾತಿಗಳ ಹೆಸರಿನಲ್ಲಿ ಹರಿದು ಹಂಚಿ ಹೋಗಿದೆ. ಸಮಾಜ ಸಂಘಟಿತವಾಗಬೇಕು, ಸಮಾದ ಅಭಿವೃದ್ಧಿಗೆ ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗಬೇಕ. ದೇಶ ವಿಭಜನೆಯ ಕರಾಳ ಇತಿಹಾಸ, ಹಿಂದೂಗಳ ಕಗ್ಗೊಲೆ, ಮೊದಲ ಪ್ರಧಾನಿಯ ಹಿಂದೂ ವಿರೋಧಿ ಧೋರಣೆಗಳು, ಅಂದಿನ ಕಾಲದಲ್ಲಿ ಸಮಾಜವನ್ನು ದುರ್ಬಲಗೊಳಿಸಿದ್ದವು. ದೇಶದ ಕರಾಳ ಇತಿಹಾಸದ ಸತ್ಯ ತಿಳಿದುಕೊಂಡು ಸಮಾಜ ಜಾತಿ, ಮತ, ಪಂಥಗಳನ್ನು ದೂರವಿಟ್ಟು ಒಗ್ಗಟ್ಟಾಗಿ ಬದುಕುವ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಸಂಘ ನೂರು ವರ್ಷ ಪೂರೈಸಿ ದೊಡ್ಡ ಶಕ್ತಿಯಾಗಿ ಬೆಳೆದಿದೆ. ದೇಶದ ಯುವಕರು ಪಾಶ್ಷಿಮಾತ್ಯರ ಸಂಸ್ಕೃತಿಗೆ ಮಾರು ಹೋಗುವುದನ್ನು ತಡೆಯಬೇಕಿದೆ. ದೇಶದ ಸನಾತನ ಸಂಸ್ಕೃತಿ, ಕುಟುಂಬ ವ್ಯವಸ್ಥೆ, ಸಮಾಜದ ಅಭಿವೃದ್ಧಿ, ಸಂಘಟನೆ, ದೇಶ ರಕ್ಷಣೆ, ಜತೆಗೆ ಪರಿಸರ ರಕ್ಷಣೆ ಮುಂತಾದ ಐದು ಯೋಜನೆಗಳನ್ನು ಪ್ರತಿಯೊಬ್ಬರೂ ಜಾರಿಗೆ ತಂದು ಕೊಳ್ಳಬೇಕಿದೆ. ದೇಶದ ಮಹಾನ್ ನಾಯಕರ ಜನ್ಮದಿನಗಳನ್ನು ಎಲ್ಲರೂ ಸೇರಿ ಆಚರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಪ್ರಧಾನಿ ಘೋಷಣೆಯಂತೆ ಓಕಲ್ ಫಾರ್ ಲೋಕಲ್, ಪ್ಲಾಸ್ಟಿಕ್ ಬಳಕೆ ನಿಶೇಧ, ಭೂಮಿಯ ಫಲವತ್ತತೆ ಕಾಪಾಡುವುದು ಸೇರಿದಂತೆ ನಮ್ಮ ಕೈಯಿಂದಾಗುವ ಸಣ್ಣ ಪರಿವರ್ತನೆ ಮಾಡುವ ಮೂಲಕ ಶುದ್ಧ ಆಹಾರ, ನೀರು, ಪರಿಸರದ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು,
ಇಂದು ಸಂಘ 120 ವಿವಿಧ ಸೇವಾ ಕ್ಷೇತ್ರ ನಿರ್ಮಿಸಿ ಸಮಾಜ ಸೇವೆಯಲ್ಲಿ ತೊಡಗಿದೆ. ಸಾಮರಸ್ಯ, ಸಮಾನತೆ, ಸಂಘಟಿತ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ. ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಸಮಾಜ ಒಂದಾಗಬೇಕು, ದೇಶ ಸ್ವದೇಶವಾಗಿ ಉಳಿಯಬೇಕು ಎಂಬುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.
ನಿವೃತ್ತ ಕೆಇಎಸ್ ಅಧಿಕಾರಿ ಸಿ.ಎಂ,ನ್ಯಾಮಗೌಡ, ಮಾತನಾಡಿದರು, ಕುಂಚನೂರಿನ ಕಮರಿಮಠದ ಸಿದ್ಧಲಿಂಗೇಶ್ವರ ಸ್ವಮಿಗಳು ಆಶೀರ್ವಚನ ನೀಡಿದರು. ನಂದೇಶ ಶಿರಹಟ್ಟಿ ನಿರೂಪಿಸಿದರು. ಸಂಗಮೇಶ ಮುತ್ತಗಿ, ಈಶ್ವರ ಕಾಖಂಡಕಿ ದೇಶಭಕ್ತಿಗೀತೆ ಹಾಡಿದರು. ಮಲ್ಲಿಕಾರ್ಜುನ ಇಂಗಳಗಾವಿ ವಂದಿಸಿದರು. ಸಮಾಜದ ಮುಖಂಡರು, ಮಹಿಳೆಯರು, ಗಣ್ಯರು ಇದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು,
ಆರ್ಎಸ್ಎಸ್ ನಾಶ ಮಾಡಲು ನೆಹರು ಪ್ರಯತ್ನಿಸಿದರು. ಗಾಂಧಿಜೀ ಹತ್ಯೆಯ ನಂತರ ಸಂಘದ ಮೇಲೆ ಗೂಬೆ ಕೂರಿಸಿ ಸ್ವಯಂ ಸೇವಕರನ್ನು ಕ್ರೂರವಾಗಿ ನಡೆಸಿಕೊಳ್ಳಲಾಯಿತು, ಇಂದಿರಾ ಗಾಂಧಿ ಕಾಲದಲ್ಲಿ ತುರ್ತು ಪರಿಸ್ಥಿತಿ ವಿಧಿಸಿ ಸಂಘದ ಕಾರ್ಯಕರ್ತರನ್ನು ಜೈಲಿಗಟ್ಟಿದರು. ಅಂದು ತೇರದಾಳದಲ್ಲಿ 6 ಜನ ಆರ್ಎಸ್ಎಸ್ ಕಾರ್ಯಕರ್ತರನ್ನು ಗಾಂಧಿ ಹತ್ಯೆಯ ಆರೋಪ ಹೊರಿಸಿ ಸಚಿವ ದಹನ ಮಾಡಲಾಗಿತ್ತು. ಆದರೆ ಆರ್ಎಸ್ಎಸ್ ಎಲ್ಲ ಕಷ್ಟ ನಷ್ಟ ಅನುಭವಿಸಿ ನೂರು ವರ್ಷ ಪೂರೈಸಿದೆ.
- ಕೃಷ್ಣಾನಂದ ಕಾಮತ ಆರ್ಎಸ್ಎಸ್ನ ಉತ್ತರ ಕರ್ನಾಟಕ ಪ್ರಾಂತ ಸಹ ವ್ಯವಸ್ಥಾ ಪ್ರಮುಖ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.