ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಬೈಪಾಡಿಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದ್ದು ಅದರ ಸಮಾರೋಪ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢ ಶಾಲೆ ಬೈಪಾಡಿಯಲ್ಲಿ ನಡೆಸಲಾಯಿತು.
ಮೇಲ್ವಿಚಾರಕ ರಾದ ಪೂರ್ಣಿಮಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿಶೇಷ ತರಗತಿಯ ಅವಕಾಶಗಳು ಇಲ್ಲದೆ ಇದ್ದು ಜ್ಞಾನ ವಿಕಾಸ ಕೇಂದ್ರದ ಮೂಲಕ ಸದಸ್ಯರ ಮಕ್ಕಳಿಗೇ ಟ್ಯೂಷನ್ ಕ್ಲಾಸ್ ಗೆ ಅವಕಾಶವನ್ನು ಒದಗಿಸಿದ್ದು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವಂತೆ ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ, ಶೇ. 100 ಫಲಿತಾಂಶ ಬರುವುದು ಮುಖ್ಯವಲ್ಲ. ಸಾಧನೆ ಮುಖ್ಯ ನಮ್ಮ ಶಾಲೆಯ ಮಕ್ಕಳಿಗೆ ವಿಶೇಷ ತರಗತಿಗೆ ಅವಕಾಶ ಒದಗಿಸಿರುವುದರಿಂದ ಪ್ರಥಮ ಪೂರಕ ಪರೀಕ್ಷೆಯಿಂದ ದ್ವಿತೀಯ ಪೂರಕ ಪರೀಕ್ಷೆ ಯಲ್ಲಿ ಮಕ್ಕಳು ಹೆಚ್ಚು ಅಂಕ ಪಡೆದಿರುವುದು ಸಾಕ್ಷಿಯಾಗಿದೆ. ಅವಕಾಶ ಒದಗಿಸಿದಕ್ಕಾಗಿ ಧನ್ಯವಾದ ಹೇಳಿದರು.ವೇದಿಕೆಯಲ್ಲಿ ಒಕ್ಕೂಟ ಅಧ್ಯಕ್ಷರಾದ ಶಶಿಧರ ಗೌಡ, ಉಪಾಧ್ಯಕ್ಷರಾದ ದಿನೇಶ್, ಗೀತಾ ಅವರು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ಸೇವ ಪ್ರತಿನಿಧಿ ಸ್ವಾಗತಿಸಿ ವಿಶೇಷ ತರಗತಿ ಶಿಕ್ಷಕರಾದ ಮೇದ ವಂದಿಸಿದರು. ವಿದ್ಯಾರ್ಥಿಗಳಾದ ದೃತಿ ಮತ್ತು ನಿತ್ಯ ಅವರು ಅನಿಸಿಕೆ ವ್ಯಕ್ತಪಡಿಸಿದರು.