ಆಳ ನೀರಿನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

KannadaprabhaNewsNetwork |  
Published : Sep 26, 2026, 01:45 AM IST
ಕಾರ್ಯಗಾರ | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್. ಅವರು ಶೌರ್ಯ ಸ್ವಯಂ ಸೇವಕರ ಈಜು ಮತ್ತು ಆಳ ನೀರಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್. ಅವರು ಶೌರ್ಯ ಸ್ವಯಂ ಸೇವಕರ ಈಜು ಮತ್ತು ಆಳ ನೀರಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು.

ತರಬೇತಿ ಕಾರ್ಯಕ್ರಮವು ವಿಪತ್ತು ಸಂದರ್ಭದಲ್ಲಿ ಜೀವ ರಕ್ಷಿಸುವ, ಸಾಮರ್ಥ್ಯವನ್ನು ಬೆಳೆಸುವ ಅತ್ಯಂತ ಮಹತ್ವದ ತರಬೇತಿಯಾಗಿದೆ. ಕೇವಲ ಈಜು ಕಲಿಯುವುದಲ್ಲದೆ, ಅಪಾಯದ ಸಂದರ್ಭದಲ್ಲಿ ಧೈರ್ಯ, ಸಮಯಪ್ರಜ್ಞೆ, ಶಿಸ್ತು ಮತ್ತು ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯವನ್ನು ಈ ತರಬೇತಿ ನೀಡುತ್ತದೆ.ಸ್ವಯಂ ಸೇವಕರಿಗೆ ನೀಡುವ ನಿರಂತರ ತರಬೇತಿ ಮತ್ತು ಸಿದ್ಧತೆ ಸಮಾಜಕ್ಕೆ ಒಂದು ದೊಡ್ಡ ಭದ್ರತೆಯಾಗಿದೆ.ಶೌರ್ಯ ಸ್ವಯಂಸೇವಕರ ಸೇವಾ ಮನೋಭಾವ ಇನ್ನಷ್ಟು ಬಲಗೊಳ್ಳಲಿ, ಅವರ ತರಬೇತಿ ಸಮಾಜದ ಅನೇಕ ಜೀವಗಳಿಗೆ ರಕ್ಷಣೆಯಾಗಿ ಪರಿಣಮಿಸಲಿ ಎಂದು ಶುಭ ಹಾರೈಸಿದರುಮುಖ್ಯ ಅತಿಥಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ವಿಶ್ವನಾಥ ಪಿ. ಅವರು ಮಾತನಾಡಿ, ಡಾ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶೌರ್ಯ ಸ್ವಯಂಸೇವಕರು ತರಬೇತಿ, ಶಿಸ್ತು, ಧೈರ್ಯ ಮತ್ತು ಸಮಯೋಚಿತ ಸ್ಪಂದನೆಯ ಮೂಲಕ ಸಮಾಜಕ್ಕೆ ನೀಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ. ಅಪಾಯದ ಸಂದರ್ಭಗಳಲ್ಲಿ ತಮ್ಮ ಸುರಕ್ಷತೆಯನ್ನೂ ಲೆಕ್ಕಿಸದೆ ಇತರರ ನೆರವಿಗೆ ಧಾವಿಸುವ ಅವರ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. ಆಳ ನೀರಿನ ಸುರಕ್ಷತಾ ಪರಿಕರಗಳನ್ನು ಸ್ವಯಂ ಸೇವಕರಿಗೆ ವಿತರಿಸಲಾಯಿತು.ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ರವರು ಶೌರ್ಯ ಸ್ವಯಂ ಸೇವಕರಿಗೆ ಕಾರ್ಯಕ್ರಮದ ಹಿನ್ನೆಲೆ ಹಾಗೂ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 10th ಬೆಟಾಲಿಯನ್, ವಿಜಯವಾಡ ಇದರ ಇನ್ ಸ್ಪೆಕ್ಟರ್ ಆದ ಶಾಂತಿಲಾಲ್ ಜಟಿಯಾರವರ ನೇತೃತ್ವದಲ್ಲಿ ಎನ್‌ಡಿಆರ್‌ಎಫ್‌ ತಂಡದಿಂದ ತರಬೇತಿ ಕಾರ್ಯಕ್ರಮವು ನಡೆಯಿತು. ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಆಯ್ದ 45 ಶೌರ್ಯ ಸ್ವಯಂ ಸೇವಕರಿಗೆ 2 ದಿನದ ಈಜು ಹಾಗೂ ಆಳ ನೀರಿನ ಸುರಕ್ಷತಾ ತರಬೇತಿಯು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಈಜು ಕೊಳದಲ್ಲಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿ-ಯಾದಗಿರಿ ರೈಲು ಮಾರ್ಗ: ಗರಿಗೆದರಿದ ನಿರೀಕ್ಷೆ
ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್. ಇಂದುಮತಿ