ಧಾರವಾಡ:
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕೊಲೆ ಪ್ರಕರಣ ಗಮನಿಸಿದರೆ ದರ್ಶನ ವರ್ತನೆ ತಪ್ಪು. ಕರ್ನಾಟಕ ಪೊಲೀಸರು ಈ ಕುರಿತು ಕ್ರಮ ಕೈಗೊಂಡಿದ್ದಾರೆ. ಅಭಿಮಾನಿಗಳ ಅಭಿಮಾನವು ನಟರ ಅಭಿನಯಕ್ಕೆ ಮಾತ್ರ ಇರಬೇಕು. ನಟರ ಭಯಾನಕ ಹಾಗೂ ಅಮಾನುಷ ವರ್ತನೆಗೆ ಬೆಂಬಲ ನೀಡಬಾರದು. ಮುಂದಿನ ದಿನಗಳಲ್ಲಿ ನಟರ ಅಭಿಮಾನಿಗಳು ಇದನ್ನು ಗಮನಿಸಬೇಕು ಎಂದರು.
ಬ್ಯಾನ್ ಮಾಡಲಿ:ಇನ್ನು, ನಟ ದರ್ಶನರನ್ನು ಸಿನಿಮಾ ಮಂಡಳಿಯಿಂದ ಶಾಶ್ವತವಾಗಿ ಹೊರಗಿಡಬೇಕು. ಸಿನಿಮಾದಲ್ಲಿ ಹಿರೋ ಎನಿಸಿಕೊಂಡ ದರ್ಶನ ಸಮಾಜಕ್ಕೆ ಆದರ್ಶಪ್ರಾಯರಾಗಬೇಕಿತ್ತು. ಆದರೆ, ಕೊಲೆಗೆ ಕುಮ್ಮಕ್ಕು ನೀಡಿ ಸಮಾಜಕ್ಕೆ ಕಂಟಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಮಂಡಳಿಯು ಅವರನ್ನು ಬ್ಯಾನ್ ಮಾಡಬೇಕು. ಇಲ್ಲದೇ ಹೋದಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಕಪ್ಪು ಚುಕ್ಕೆ ಬಂದಂತಾಗುತ್ತದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಲ್. ಹಗೇದಾರ ಆಗ್ರಹಿಸಿದ್ದಾರೆ.