ದಸರಾ ಮಹೋತ್ಸವದ ಧರ್ಮ ಧ್ವಜಾರೋಹಣ ಕಾರ್ಯಕ್ರಮ

KannadaprabhaNewsNetwork |  
Published : Oct 12, 2026, 02:30 AM IST
ಧರ್ಮ ಧ್ವಜಾರೋಹಣವನ್ನು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕಬಾಡರ ನೆರವೇರಿಸಿದರು. | Kannada Prabha

ಸಾರಾಂಶ

ಕಳೆದ 46 ವರ್ಷಗಳಿಂದ ಶ್ರೀದೇವಿ ಪುರಾಣ ಪ್ರವಚನ ಹಾಗೂ 12 ವರ್ಷಗಳಿಂದ ಮಹಿಳೆಯರಿಂದ ಶ್ರೀಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಎಳೆಯುವ ಜಾತ್ರಾ ಹೋತ್ಸವದ ಕಾರ್ಯಕ್ರಮಗಳು ಅವಳಿ ನಗರದ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಕಳೆದ 46 ವರ್ಷಗಳಿಂದ ಶ್ರೀದೇವಿ ಪುರಾಣ ಪ್ರವಚನ ಹಾಗೂ 12 ವರ್ಷಗಳಿಂದ ಮಹಿಳೆಯರಿಂದ ಶ್ರೀಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಎಳೆಯುವ ಜಾತ್ರಾ ಹೋತ್ಸವದ ಕಾರ್ಯಕ್ರಮಗಳು ಅವಳಿ ನಗರದ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಎಚ್.ಸಿ.ಇ.ಎಸ್ ಪಿಯು ಕಾಲೇಜ್ ವಿಶ್ರಾಂತ ಪ್ರಾ. ಬಿ.ಬಿ. ಪಾಟೀಲ ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವದ ಧರ್ಮ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀದೇವಿಯ ಪುರಾಣ ಪ್ರವಚನವನ್ನು ಎಲ್ಲರೂ 9 ದಿನಗಳ ಕಾಲ ಆಲಿಸುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರು.

ಜಾತ್ರಾಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ ಮಾತನಾಡಿ, 9 ದಿನಗಳ ಕಾಲ ಶ್ರೀದೇವಿಯ ಆರಾಧನೆ ಮಾಡುವ ಜೊತೆಗೆ ಶ್ರೀಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಎಳೆಯುವ ಸೌಭಾಗ್ಯ ಮಹಿಳೆಯರದಾಗಿದೆ. ಇಂತಹ ರಥೋತ್ಸವ ಉತ್ತರ ಕರ್ನಾಟಕದಲ್ಲಿಯೇ ಮೊದಲನೆಯದು ಎಂದು ತಿಳಿಸಿದರು.

ಜಾತ್ರಾ ಮಹೋತ್ಸವ ಸಮಿತಿ ಮಹಿಳಾ ಅಧ್ಯಕ್ಷೆ ಶಿವಲೀಲಾ ಅಕ್ಕಿ ಮಾತನಾಡಿ, ನವರಾತ್ರಿ ಹಬ್ಬದ ಆಚರಣೆಯಲ್ಲಿ 9 ದಿನಗಳ ಕಾಲ ಶ್ರೀದೇವಿಯ ಆರಾಧನೆಯ ಮೂಲಕ ನಮ್ಮ ಬದುಕಿನಲ್ಲಿ ಹೊಸ ಚೈತನ್ಯವನ್ನು ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ನಗರದ ಶ್ರೀಅಡವಿಂದ್ರಸ್ವಾಮಿ ಮಠದಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು.

ಧರ್ಮ ಧ್ವಜಾರೋಹಣವನ್ನು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಮಹೇಶಚಂದ್ರ ಕಬಾಡರ ನೆರವೇರಿಸಿದರು. ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ, ಪೂಜಾ ಸಮಿತಿ ಅಧ್ಯಕ್ಷ ಶರಣಯ್ಯ ಶಾಸ್ತ್ರಿಗಳು ಶಿವಪ್ಪಯ್ಯನಮಠ ಸಮ್ಮುಖ ವಹಿಸಿದ್ದರು. ಕಿರಣ ಹಾವನೂರ, ರತನಲಾಲಸಾ ಭಾಂಡಗೆ ಪ್ರಸಾದ ಭಕ್ತಿಸೇವೆ ವಹಿಸಿದ್ದರು.

ಗಣ್ಯ ಉದ್ದಿಮೆದಾರರಾದ ಸಿದ್ಧಲಿಂಗೇಶ ಉಮಚಗಿ, ಅಕ್ಷತಾ ಉಮಚಗಿ, ವೀರೇಶ್ವರ ಶಾಸ್ತ್ರಿಗಳು ಹೊಸಳ್ಳಿಮಠ, ಪ್ರಕಾಶ ಅಕ್ಕಿ, ವಿನಾಯಕ ಪಾಟೀಲ, ಶಾರದಾ ಬೊಮ್ಮಸಾಗರ, ಶಿವಪ್ರಭು ನೀಲಗುಂದ, ಪ್ರಭುಗೌಡ ಪಾಟೀಲ, ಅಶ್ವಿನಿ ನೀಲಗುಂದ, ಸುವರ್ಣಾ ಮದರಿಮಠ, ಬಸವರಾಜ ಬ್ಯಾಹಟ್ಟಿ ಸೇರಿ ಶ್ರೀಮಠದ ಸದ್ಭಕ್ತರು ಇದ್ದರು. ಸುವರ್ಣಾ ವಸ್ತ್ರದ ಸ್ವಾಗತಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ಯೋಗ ಶಿಕ್ಷಕ ಸಿದ್ದಣ್ಣ ಜವಳಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ