ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡಿಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ತಾಯಿಯ ಕೃಪೆಯಿಂದ ನವರಾತ್ರಿ ಉತ್ಸವವು ಅತ್ಯಂತ ವೈಭವದಿಂದ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ನಾಡಹಬ್ಬವಾಗಿ ಆಚರಿಸಲ್ಪಡುತ್ತಿದೆ ಎಂದರು.
ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ನಡೆಸಿರುವುದು ಪ್ರತಿಯೊಬ್ಬರಿಗೂ ಅತ್ಯಂತ ಸಂತೋಷ ಮತ್ತು ಧನ್ಯತಾ ಭಾವವನ್ನು ತಂದಿದೆ. ಮಠದ ವತಿಯಿಂದ ನೀಡಲಾಗುತ್ತಿರುವ ಶಿಕ್ಷಣ, ಮಹಿಳಾ ಸಬಲೀಕರಣ, ಜಲಸಂರಕ್ಷಣೆ ಮತ್ತು ವ್ಯಾಪಕ ಸಸಿ ನೆಡುವ ಕ್ರಾಂತಿಕಾರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.ಕೊಪ್ಪಳದ ಗವಿಮಠದ ಜಾತ್ರೆ ಲೋಕಪ್ರಸಿದ್ಧಿ ಪಡೆದಿದೆ. ಜಾತಿಮತವನ್ನು ಮೀರಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಅಣ್ಣಬ್ರಹ್ಮ ವಾಸಿಸುವ ಜಾಗ ಕೊಪ್ಪಳದ ಗವಿಮಠ. ಮಠದಲ್ಲಿ ಒಂದು ಫೋಟೋವನ್ನು ಕೂಡ ಅವರು ಹಾಕೊಂಡಿಲ್ಲ. ದೊಡ್ಡ ಶ್ರೀಗಳ ಫೋಟೋ ಮಾತ್ರ ಹಾಕಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಕೊಪ್ಪಳದ ಗವಿಶ್ರೀ. ಇವರು ದಸರಾ ಉದ್ಘಾಟನೆ ಮಾಡಿರೋದು ಸಂತಸ ತಂದಿದೆ ಎಂದರು.
ದಸರಾ ಉದ್ಘಾಟನೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಗವಿ ಶ್ರೀಗಳನ್ನು ಆಯ್ಕೆ ಮಾಡಿದರು. ಡಿಕೆಶಿ ಹಿಂದೆ ಗುರು ಮುಂದೆ ಗುರಿ ಇರಿಸಿಕೊಂಡು ಸಿಎಂ ಆಗಿದ್ದಾರೆ. ರಂಭಾಪುರಿ ಮಠದ ಸ್ವಾಮೀಜಿಗಳ ಆಶೀರ್ವಾದ ಡಿಕೆಶಿ ಮೇಲಿದೆ. ಗುರುಗಳು ಡಿಕೆಶಿ ಸಿಎಂ ಆಗುತ್ತಾರೆ ಅಂತ ಹೇಳಿದ್ದರು. ದೈವ ಗುರುಹಿರಿಯರ ವಿಚಾರದಲ್ಲಿ ಡಿಕೆಶಿಗೆ ಭಕ್ತಿ ಜಾಸ್ತಿಯಿದೆ.
ಮಳೆ ಬಂದು ರೈತರ ಬದುಕು ಹಸನಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ. ನಾನು ಈ ಹಿಂದೆ ಡಿಕೆಶಿ ಡಿಸಿಎಂ ಆಗಿದ್ದಾಗ ಹೇಳಿದ್ದೆ. ಮೈಸೂರಿನ ಅಳಿಯನಾದ ಡಿಕೆಶಿ, ಸಚಿವ ಯತೀಂದ್ರ ಅವರೇ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀರು ಕೊಡಿ, ರಸ್ತೆ ಕೊಡಿ, ಚರಂಡಿ ಕೊಡಿ. ನಮ್ಮ ಜನರಿಗೆ ಸಂಕಷ್ಟ ಎದುರಾಗಿದೆ. ಕ್ಷೇತ್ರದ ಸಮಸ್ಯೆಗಳತ್ತ ಗಮನ ಹರಿಸಿ ಎಂದು ಅವರು ಆಗ್ರಹಿಸಿದರು.