ದಸರಾ ಕಂಬಳ: ಕುಶಾಲನಗರದಲ್ಲಿ ವಿಶ್ರಾಂತಿ ವ್ಯವಸ್ಥೆ

KannadaprabhaNewsNetwork |  
Published : Oct 05, 2026, 02:30 AM IST
ಚಿತ್ರ :  4ಎಂಡಿಕೆ6 : ಕಂಬಳ ಕಾರ್ಯಕ್ರಮ ಬಗ್ಗೆ ನಡೆದ ಸಭೆ | Kannada Prabha

ಸಾರಾಂಶ

ಮೈಸೂರು ದಸರಾದ ಕಂಬಳಕ್ಕೆ ಪುತ್ತೂರಿನಿಂದ ತೆರಳುವ ಕಂಬಳ ಕೋಣಗಳು ಮಾರ್ಗಮಧ್ಯೆ ಕುಶಾಲನಗರದಲ್ಲಿ ವಿಶ್ರಾಂತಿಗಾಗಿ ನಿಲುಗಡೆಗೊಳಿಸುವ ಸಂಬಂಧ ಪುತ್ತೂರು ಶಾಸಕ ಅಶೋಕ್ ರೈ ಮತ್ತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರಿಂದ ಜಂಟಿ ಸಭೆ ನಡೆಯಿತು.

ಕುಶಾಲನಗರ: ಮೈಸೂರು ದಸರಾದ ಕಂಬಳಕ್ಕೆ ಪುತ್ತೂರಿನಿಂದ ತೆರಳುವ ಕಂಬಳ ಕೋಣಗಳು ಮಾರ್ಗಮಧ್ಯೆ ಕುಶಾಲನಗರದಲ್ಲಿ ವಿಶ್ರಾಂತಿಗಾಗಿ ನಿಲುಗಡೆಗೊಳಿಸುವ ಸಂಬಂಧ ಪುತ್ತೂರು ಶಾಸಕ ಅಶೋಕ್ ರೈ ಮತ್ತು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರಿಂದ ಜಂಟಿ ಸಭೆ ನಡೆಯಿತು.ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನ‌ ಪರಿಶೀಲನೆ‌ ಬಳಿಕ ಕುಶಾಲನಗರ ಪುರಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಮುಖರೊಂದಿಗೆ ಚರ್ಚೆ ನಡೆಸಲಾಯಿತು. ಕಂಬಳಕ್ಕೆ ತೆರಳುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ಒದಗಿಸಿದರು.17 ರಂದು 150 ಜೋಡಿ ಕಂಬಳದ ಕೋಣಗಳ ಆಗಮಿಸಲಿದ್ದು ಒಂದು‌ ಜೋಡಿಯ ಜೊತೆ 15 ಮಂದಿಯಂತೆ ಜೊತೆಯಲ್ಲಿ 2200ಕ್ಕೂ ಅಧಿಕ ಮಂದಿ ಪುತ್ತೂರಿನಿಂದ ಮೈಸೂರಿಗೆ ತೆರಳಲಿದ್ದಾರೆ. ಈ ಸಂದರ್ಭ ಮಾರ್ಗಮಧ್ಯೆ ವಿಶ್ರಾಂತಿ, ಊಟೋಪಚಾರಕ್ಕೆ ಕುಶಾಲನಗರದಲ್ಲಿ ನಿಲುಗಡೆಗೊಳಿಸಲಿದ್ದು ಸೂಕ್ತ ಸ್ಥಳ, ಸೌಲಭ್ಯಗಳ ಅಗತ್ಯತೆ ಬಗ್ಗೆ ವಿವರಿಸಿದರು.

ಅಂದಾಜು 200 ಕಿ.ಮೀ.: ಟ್ರಕ್ ಗಳಲ್ಲಿ ಕ್ರಮಿಸುವ ಕೋಣಗಳಿಗೆ ನೆರಳು, ಮೇವು ಮತ್ತು ಕೋಣಗಳ ಜೊತೆಯಲ್ಲಿ ಬರುವ ಕೋಣಗಳ‌ ಮಾಲೀಕರು, ಕಂಬಳ ಸಮಿತಿಯವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳೊಂದಿಗೆ ಚರ್ಚೆ ನಡೆಯಿತು. ಸ್ಥಳೀಯ ರೈತರು, ಸಾರ್ವಜನಿಕರು ಕೂಡ ಕಂಬಳದ ಕೋಣಗಳ ವೀಕ್ಷಣೆಗೆ ಆಗಮಿಸುವವರಿದ್ದು ಅಂದು ಒಟ್ಟಾರೆ 3 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ, ಈ‌ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ತಿಳಿಸಿದರು.ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ, ಕಾರ್ಯದರ್ಶಿ ರವೀಂದ್ರ ರೈ, ವಿಶ್ವ ತುಳು‌ ಒಕ್ಕೂಟದ ಜಿಲ್ಲಾಧ್ಯಕ್ಷ ಐತಪ್ಪ ರೈ, ಪ್ರಧಾನ ಕಾರ್ಯದರ್ಶಿ ರಾಜೀವಲೋಚನ, ಜಿಲ್ಲಾ ಸಂಚಾ ಎಂ.ಆರ್.ರವಿ, ಪ್ರಮುಖರಾದ ಸದಾಶಿವ ರೈ, ಅಪ್ಪು ರವೀಂದ್ರ, ತುಳುವೆರ ಕೂಟದ ಪ್ರಕಾಶ್ ಆಚಾರ್ಯ, ವಿರಾಜಪೇಟೆ ತಾಲೂಕು ಅಧ್ಯಕ್ಷ ಶಬರೀಶ್ ಶೆಟ್ಟಿ‌, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಜೀವನ ಸಹಕಾರ ಸಂಘ ವಾರ್ಷಿಕ ಮಹಾಸಭೆ
ಸಮಸ್ಯೆಗಳಿಗೆ ಕಾಲಮಿತಿಯ ಪರಿಹಾರ: ಮಂತರ್‌ ಗೌಡ