ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ಒಕ್ಕೂಟ, ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬಾಲ್ಯವಿವಾಹ ಹಾಗೂ ಪೋಕ್ಸೊ ಪ್ರಕರಣಗಳ ಕುರಿತು ಜನ ಜಾಗೃತಿ ಮೂಡಿಸುವ ಕಿರು ನಾಟಕಗಳನ್ನು ಇಲಾಖೆ ಸಿಬ್ಬಂದಿ ಪ್ರಸ್ತುತ ಪಡಿಸಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ನಡೆದ ರಂಗೋಲಿ, ಮೆಹಂದಿ ಹಾಗೂ ಕೇಶ ವಿನ್ಯಾಶ ಸ್ಪರ್ಧೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಸ್ಪರ್ಧೆಗಳು ಭಾಗವಹಿಸುವ ಮೂಲಕ ತಮ್ಮಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಯನ್ನ ಹೊರ ಹಾಕಿದರು.ಶಾಸಕ ರಮೇಶ್ ಬಂಡಿಸಿದ್ದೇಗೌಡ, ತಹಸೀಲ್ದಾರ್ ಚೇತನಾ ಯಾದವ್, ಸಿಡಿಪಿಒ ಸಕಲೇಶ್ವರ್ ಹಾಗೂ ತಾಪಂ ಇಒ ಚಂದ್ರು, ಮುಖ್ಯಾಧಿಕಾರಿ ರಾಜಣ್ಣ, ಅವರು ಅಂಗನವಾಡಿ ಕಾರ್ಯಕರ್ತೆಯರು ಬಿಡಿಸಿದ್ದ ರಂಗೋಲಿಗಳನ್ನ ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸುವ ಜೊತೆಗೆ ಉತ್ತಮ ರಂಗೋಲಿ ಬಿಡಿಸಿದ ವಿಜೇತೆಯನ್ನ ಆಯ್ಕೆ ಮಾಡಿ ಬಹುಮಾತ ನೀಡಿದರು.ಇಂದು ಭಕ್ತಿ ಸಂಕೀರ್ತನೆ ಕಾರ್ಯಕ್ರಮಮೇಲುಕೋಟೆ: ನವರಾತ್ರಿ ಅಂಗವಾಗಿ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅ.19ರ ಸಂಜೆ ಖ್ಯಾತ ಕೀರ್ತನಕಾರ ಶಿವಾರ ಉಮೇಶ್ ತಂಡದ ಭಕ್ತಿ ಸಂಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಮಹಾವಿಷ್ಣುವಿನ ಕುರಿತ ಹತ್ತು ಹಲವು ಕೀರ್ತನೆಗಳು ಹಾಗೂ ಹಾಸ್ಯ ಲೇಪಿತವಾಗಿ ಹತ್ತಾರು ವೈಚಾರಿಕ ಸಂಗತಿಗಳನ್ನು ಪ್ರೇಕ್ಷಕರ ಮುಂದೆ ಶಿವಾರ ಉಮೇಶ್ ಪ್ರಸ್ತುತ ಪಡಿಸಲಿದ್ದು, ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ದೊರೆತಿರುವುದು ನನಗೆ ನವರಾತ್ರಿಯಲ್ಲಿ ದೊರೆತ ಭಾಗ್ಯವಾಗಿದ್ದು ಸಂತೋಷದಿಂದ ಕಾರ್ಯಕ್ರಮ ನೀಡುತ್ತಿದ್ದೇನೆ ಎಂದು ಉಮೇಶ್ ತಿಳಿಸಿದ್ದಾರೆ.ನಾಳೆ ಗವಿಮಠದಲ್ಲಿ ತೆಪ್ಪೋತ್ಸವ, ಶಮಿಪೂಜೆ
ಬಾಣಸಮುದ್ರ ಗೇಟ್ನಿಂದ ಮೂರು ಕಿಲೋ ಮೀಟರ್ ದೂರದ ಗವಿಮಠದ ಹಿಂಭಾಗದಲ್ಲಿರುವ ಐತಿಹಾಸಿಕ ಬನ್ನಿ ಮರಕ್ಕೆ ಬೆಳಗಿನ ಜಾವ ವಿಶೇಷ ಪೂಜೆ ನಡೆಸಲಾಗುತ್ತದೆ. ಬೆಳಗ್ಗೆ ೧೦ ಗಂಟೆಗೆ ಮಠದ ಆವರಣದಲ್ಲಿರುವ ಕಟ್ಟೆಯಲ್ಲಿ ಮಳವಳ್ಳಿ ಅಂಬಿಗರ ಚೌಡಯ್ಯನ ಕೇರಿಯ ಯಜಮಾನರು ಮತ್ತು ಭಕ್ತಾದಿಗಳು ತೆಪ್ಪೋತ್ಸವ ನಡೆಸಿಕೊಡಲಿದ್ದಾರೆ.ಡಿ.ಹಲಸಹಳ್ಳಿ ಗ್ರಾಮದ ಶ್ರೀಬಸವೇಶ್ವರ ಪ್ರೌಢಶಾಲೆಯಲ್ಲಿ ೨೦೨೫ -೨೬ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ ದೇಗುಲ ಮಠದ ಶ್ರೀಚನ್ನಬಸವ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದು, ತೋಟದಹಳ್ಳಿ ಮಠದ ಶ್ರೀಬಸವ ಪ್ರಭು ಸ್ವಾಮೀಜಿ, ಗವಿಮಠದ ಶ್ರೀಷಡಕ್ಷರದೇವ ಸ್ವಾಮೀಜಿರವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದ್ದು, ಅಂತರವಳ್ಳಿ ಶ್ರೀಸಿದ್ದೇಶ್ವರಸ್ವಾಮಿ ದೇವಸ್ಥಾನದ ಅಧ್ಯಕ್ಷ ರಾಜೇಗೌಡರು ಅಧ್ಯಕ್ಷತೆ ವಹಿಸುವರು.