ನಾಳೆಯಿಂದ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮ

KannadaprabhaNewsNetwork |  
Published : Aug 21, 2025, 02:00 AM IST
ದಾಸರಹಳ್ಳಿ ಸಂಭ್ರಮ | Kannada Prabha

ಸಾರಾಂಶ

ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸುತ್ತಿರುವ ಬೆಂಗಳೂರಿನ ಅತಿದೊಡ್ಡ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮ ಮೂರು ದಿನ ಕಾಲ ನಡೆಯಲಿದ್ದು, ಆ.22 ರಂದು ಶುಕ್ರವಾರ ಅದ್ಧೂರಿಯಾಗಿ ಪ್ರಾರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ‌

ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಆಯೋಜಿಸುತ್ತಿರುವ ಬೆಂಗಳೂರಿನ ಅತಿದೊಡ್ಡ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮ ಮೂರು ದಿನ ಕಾಲ ನಡೆಯಲಿದ್ದು, ಆ.22 ರಂದು ಶುಕ್ರವಾರ ಅದ್ಧೂರಿಯಾಗಿ ಪ್ರಾರಂಭವಾಗಲಿದೆ.ದಾಸರಹಳ್ಳಿ‌ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿಯಲ್ಲಿರುವ ಶಾಸಕರ ನಿವಾಸದಲ್ಲಿ ದಾಸರಹಳ್ಳಿ ಸಂಭ್ರಮದ ಪೋಸ್ಟರ್‌ ಅನ್ನು ಶಾಸಕ ಎಸ್ ಮುನಿರಾಜು ಬಿಡುಗಡೆ ಮಾಡಿದರು.

ಆ.22ರಿಂದ 24ರವರೆಗೆ ಬಾಗಲಗುಂಟೆಯ ಎಮ್ ಈ ಐ ಲೇಔಟ್ ಮೈದಾನದಲ್ಲಿ ನಡೆಯಲಿರುವ ದಾಸರಹಳ್ಳಿ ಸಂಭ್ರಮಕ್ಕೆ ಶಾಸಕ ಮುನಿರಾಜು ಅವರು ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಈ ಸಂಭ್ರಮದಲ್ಲಿ, ರುಚಿಯಾದ ತಿಂಡಿ, ತಿನಿಸುಗಳನ್ನು ಸವಿಯಬಹುದು, ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್ ಲ್ಯೆಫ್ ಸ್ಟ್ಯೆಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದೊಂದು ಸುವರ್ಣ ಅವಕಾಶವಾಗಿದೆ. ದಾಸರಹಳ್ಳಿ ಸುತ್ತಮುತ್ತಲಿನ ಜನತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗೆ ಫ್ಯಾನ್ಸಿ ಡ್ರೆಸ್, ಕ್ಯೂಟ್ ಬೇಬ್ಸ್ ಹಾಗೂ ಬೊಂಬಾಟ್ ಜೋಡಿ ಫ್ಯಾಷನ್ ಶೋ ಕುಕ್ಕರಿ ಕಾಂಪಿಟೇಷನ್ ಜೊತೆಗೆ ಹಲವಾರು ಸ್ಪರ್ಧೆಗಳು ಇವೆ. ಪ್ರವೇಶ ಉಚಿತ.

ಹಲವಾರು ಚಿತ್ರ ನಟ, ನಟಿಯರು ಕಾಮಿಡಿ ಕಿಲಾಡಿಗಳ ತಂಡ, ರಾಜಕೀಯ ಗಣ್ಯರು ಪಾಲ್ಗೊಂಡು ಉತ್ಸವದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವರು.

ಶಾಸಕ ಎಸ್ ಮುನಿರಾಜು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಪ್ರಭ ಹಾಗೂ ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಯೋಜನೆಯಲ್ಲಿ ದಾಸರಹಳ್ಳಿ ಸಂಭ್ರಮ ಕಾರ್ಯಕ್ರಮವನ್ನು ಮೂರು ದಿನಗಳ ಕಾಲ ನಡೆಯಲಿದ್ದು ನಮ್ಮ ಕ್ಷೇತ್ರದ ಎಲ್ಲಾ ಜನರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕ್ಷೇತ್ರದ ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ನಾಗಣ್ಣ, ವಿಜಯ್ ಕುಮಾರ್ ,ಮೋಹನ್ ಕುಮಾರ್ ಜಿ, ಬೈರೇಗೌಡರು, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ