ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನ ಆದಿಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿದೇವಿ ದೇವಾಲಯ ಆವರಣದಲ್ಲಿ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಸಂಸಾರದ ಸಾಗರದಲ್ಲಿ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಹಿರಿಯರಲ್ಲಿ ಗೌರವ, ಗುರುಗಳಲ್ಲಿ ಭಕ್ತಿ ಭಾವಗಳನ್ನು ಬೆಳೆಸಿಕೊಂಡು ಇಳಿವಯಸ್ಸಿನ ತಂದೆ-ತಾಯಿಗಳಿಗೆ ಆಸರೆಯಾಗಿರುತ್ತಿದ್ದರು. ನಾಗರೀಕತೆ ಬೆಳೆದಂತೆ ಜನಶೈಲಿಗಳು ಬದಲಾಗಿ ಕುಟುಂಬಗಳು ಒಡೆದು ನೆಮ್ಮದಿಯನ್ನು ಕಳೆದುಕೊಂಡು ನರಳಾಡುತ್ತಿದ್ದಾರೆ. ಮಾನವೀಯತೆ ಮತ್ತು ಜೀವನ ಮೌಲ್ಯಗಳು ಮಾಯವಾಗುತ್ತಿವೆ. ಆದುದರಿಂದ ನಾವೆಲ್ಲರೂ ದೇವರು, ಧರ್ಮ, ಆಚಾರ, ನೈತಿಕತೆಗಳಲ್ಲಿ ನಂಬಿಕೆಯಿರಿಸಿ, ಪೂಜೆ, ಪ್ರಾರ್ಥನೆಗಳಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಚ್ಛಾರಿತ್ರ್ಯವುಳ್ಳವರಾಗಬೇಕು ಎಂದರು.ರಥೋತ್ಸವಕ್ಕೂ ಮುಂಚಿತವಾಗಿ ಚೌಡೇಶ್ವರಿ ದೇವಿಯವರನ್ನು ಹೂವಿನ ಮಂಟಪದಲ್ಲಿ ಗ್ರಾಮದ ರಾಜಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮಾಡಿದರು. ಈ ಸಂದರ್ಭದಲ್ಲಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಕಾಶಿ ಶಾಖಾಮಠದ ವಿಜಯಯೇಂದ್ರನಾಥ ಸ್ವಾಮೀಜಿ, ದೆಹಲಿ ಶಾಖಾಮಠದ ಆನಂದ ಚೈತನ್ಯನಾಥ ಸ್ವಾಮೀಜಿ, ಬೆಳ್ಳೂರು ಕ್ರಾಸ್ ವಿಜ್ಞಾತಮಂ ಮಠದ ಸತ್ ಕೀರ್ತಿನಾಥ ಸ್ವಾಮೀಜಿ ಸೇರಿದಂತೆ ದಸರಿಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.