ದಾಸಿಮಯ್ಯ ಕಾಯಕನಿಷ್ಠೆ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ

KannadaprabhaNewsNetwork | Published : Apr 13, 2025 2:13 AM

ಸಾರಾಂಶ

೧೦ನೇ ಶತಮಾನದಲ್ಲಿ ಪ್ರಥಮ ವಚನಕಾರರಾಗಿದ್ದ ದೇವರ ದಾಸಿಮಯ್ಯನವರು ಮಹಾನ್ ದೈವ ಭಕ್ತರಾಗಿದ್ದರು. ಜತೆಗೆ ಅವರ ಕಾಯಕ ನಿಷ್ಠೆ, ದಾಸೋಹ ನಿಷ್ಠೆ, ಕರ್ತವ್ಯದಲ್ಲಿ ಅವರು ತೋರುತ್ತಿದ್ದ ಶ್ರದ್ಧೆ ಹಾಗೂ ಆಸಕ್ತಿಯು ಎಲ್ಲರಿಗೂ ಆದರ್ಶವಾಗಿದೆ. ಮಹನೀಯರ ಆದರ್ಶಗಳ ಪಾಲನೆ ನಮ್ಮಗಳ ಕರ್ತವ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

೧೦ನೇ ಶತಮಾನದಲ್ಲಿ ಪ್ರಥಮ ವಚನಕಾರರಾಗಿದ್ದ ದೇವರ ದಾಸಿಮಯ್ಯನವರು ಮಹಾನ್ ದೈವ ಭಕ್ತರಾಗಿದ್ದರು. ಜತೆಗೆ ಅವರ ಕಾಯಕ ನಿಷ್ಠೆ, ದಾಸೋಹ ನಿಷ್ಠೆ, ಕರ್ತವ್ಯದಲ್ಲಿ ಅವರು ತೋರುತ್ತಿದ್ದ ಶ್ರದ್ಧೆ ಹಾಗೂ ಆಸಕ್ತಿಯು ಎಲ್ಲರಿಗೂ ಆದರ್ಶವಾಗಿದೆ. ಮಹನೀಯರ ಆದರ್ಶಗಳ ಪಾಲನೆ ನಮ್ಮಗಳ ಕರ್ತವ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರಭುಶಂಕರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ, ಕೈವಾರ ತಾತಯ್ಯ ಹಾಗೂ ಮಹವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇಗೆ ವೃತ್ತಿ ಮಾಡುತ್ತಿದ್ದ ಶ್ರೀಯುತರು ಮಹಾನ್ ದೈವಭಕ್ತರಾಗಿದ್ದರು. ಮೋಸ ವಂಚನೆಯಿಂದ ಮಾಡಿದ್ದು, ಸಂಪಾದನೆಯಲ್ಲ ಎಂದು ವಚನಗಳ ಸಾರವನ್ನು ತಿಳಿಸುತ್ತ ಭಕ್ತಿಯಿಂದ ಕೆಲಸ ಕಾರ್ಯ ನಿರ್ವಹಿಸುವ ವಿಷಯ ಕುರಿತು ಸುದೀರ್ಘವಾಗಿ ಮಾಹಿತಿ ನೀಡಿದರು.

ಪ್ರಪಂಚದಲ್ಲಿ ನಾಲ್ಕು ಯುಗಗಳ ಶ್ರೇಷ್ಟತೆ ಹೊಂದಿರುವ ಕೈವಾರದಲ್ಲಿ ಕಾಲಜ್ಞಾನಿ ತತ್ವಜ್ಞಾನಿಯಾದ ಯೋಗಿ ನಾರಾಯಣ ಅವರು ಪವಾಡ ಪುರುಷರಾಗಿದ್ದರು. ಕೈವಾರದ ಕ್ಷೇತ್ರದಲ್ಲಿ ನರಸಿಂಹ ಗುಹೆಯಲ್ಲಿ ಓಂ ನಾರಾಯಣಣಾಯ ಎಂಬ ಮಂತ್ರವನ್ನು ಬಾಯಿಯಲ್ಲಿ ಬೆಣಚುಕಲ್ಲು ಇಟ್ಟುಕೊಂಡು ದೀರ್ಘಕಾಲ ತಪ್ಪಸ್ಸನ್ನು ಮಾಡಿದಾಗ ಬಾಯಿಯಲ್ಲಿದ್ದ ಬೆಣಚುಕಲ್ಲು ಕಲ್ಲು ಸಕ್ಕರೆಯಾಗುತ್ತೆ ಎಂದು ತಿಳಿಸಿದರು.

ಜೈನ ಸಮುದಾಯಲ್ಲಿ ೨೪ನೇ ತೀರ್ಥಂಕರರಾದ ಮಹವೀರರ ಮೂಲ ಉದ್ದೇಶ ಅಹಿಂಸೆ, ಸತ್ಯ ಇವರ ತತ್ವವಾಗಿರುತ್ತೆ. ರಾಜವಂಶಸ್ಥರಾಗಿದ್ದರೂ ಸಹ ೩೦ನೇ ವರ್ಷಕ್ಕೆ ಪರಿ ನಿರ್ವಾಹಣಕ್ಕೆ ತೆರಳಿ, ೧೨ ವರ್ಷ ಜ್ಞಾನ ಮಾಡಿ, ೭೨ನೇ ವರ್ಷದ ತನಕ ರಾಷ್ಟ್ರದಲ್ಲಿ ಸಂಚರಿಸಿ, ಜೈನಧರ್ಮವನ್ನು ಪುನರ್ ರಚನೆಗೊಳಿಸಿ, ಅಹಿಂಸೆ, ಸತ್ಯ, ಶಾಂತಿಯನ್ನು ಬೋಧಿಸಿ, ಪ್ರಪಂಚದಲ್ಲಿ ಭಾರತಕ್ಕೆ ಸ್ಥಾನ ದೊರೆತಿದೆ ಎನ್ನುವುದಾರೇ ಅದು ಜೈನ ಧರ್ಮದಿಂದ ಲಭಿಸಿದೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್,

ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾ.ಪಂ. ಇಒ ಮುನಿರಾಜು, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಸುದರ್ಶನ್, ದೇವಾಂಗ ಸಂಘದ ಅಧ್ಯಕ್ಷ ಹಾಗೂ ಟಿಎಚ್‌ಒ ಡಾ. ರಾಜೇಶ್, ಪುರಸಭೆ ಮಾಜಿ ಅಧ್ಯಕ್ಷೆ ವೀಣಾ ರಾಜೇಶ್, ಪುರಸಭೆ ಸದಸ್ಯರಾದ ಎ. ಜಗನ್ನಾಥ್ ಹಾಗೂ ಬೈರಶೆಟ್ಟಿ, ತಾ. ಬಲಿಜ ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಮುಖಂಡರಾದ ರಮೇಶ್, ಶಂಕರ್, ನರಸಿಂಹ, ರೂಪ ಹರೀಶ್, ಜಯಶ್ರೀ, ಮಂಜುನಾಥ್, ವಿಜಯ್ ಕುಮಾರ್ ಇದ್ದರು.

Share this article