ದಾಸಿಮಯ್ಯರ ಕಾಯಕ ನಿಷ್ಠೆ ಮಾದರಿ: ತಡವಲ

KannadaprabhaNewsNetwork |  
Published : Apr 03, 2025, 12:31 AM IST
ದಾಸಿಮಯ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಬಟ್ಟೆ ನೇಯುವ ಕಾಯಕ ಮಾಡುತ್ತಾ ಅದರಲ್ಲೇ ಭಗವಂತನನ್ನು ಕಾಣುತ್ತಿದ್ದ ದೇವರ ದಾಸಿಮಯ್ಯರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ ಎಂದು ಬಸವಶರಣ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ ತಡವಲ ಹೇಳಿದರು

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಟ್ಟೆ ನೇಯುವ ಕಾಯಕ ಮಾಡುತ್ತಾ ಅದರಲ್ಲೇ ಭಗವಂತನನ್ನು ಕಾಣುತ್ತಿದ್ದ ದೇವರ ದಾಸಿಮಯ್ಯರ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ ಎಂದು ಬಸವಶರಣ ಸಂಸ್ಥೆ ತಾಲೂಕು ಘಟಕದ ಅಧ್ಯಕ್ಷ ಸಂಗಪ್ಪ ತಡವಲ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಷ್ಕಳಂಕ ಬದುಕು ರೂಪಿಸಿಕೊಂಡಿದ್ದ ದಾಸಿಮಯ್ಯನವರು ಕಾಯಕ ನಿಷ್ಠೆ ಮಾತ್ರವಲ್ಲ, ಸಮಾಜದಲ್ಲಿ ಸಮಾನತೆ ತರುವುದಕ್ಕಾಗಿ ಹೋರಾಡಿದರು. ಶರಣರಲ್ಲಿ ಪ್ರಥಮವಾಗಿ ವಚನಗಳನ್ನು ರಚಿಸಿದವರು ದೇವರ ದಾಸಿಮಯ್ಯ. ಅನಂತರ ಬಂದ ಶರಣರ ವಚನಗಳಲ್ಲೂ ಅವರ ವಚನಗಳ ಗಾಢ ಪ್ರಭಾವವನ್ನು ಕಾಣಬಹುದು ಎಂದು ಹೇಳಿದರು.ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಚನಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಸಿಂದಗಿ, ಅದ್ಯ ವಚನಕಾರ ದೇವರ ದಾಸಿಮಯ್ಯ 12ನೇ ಶತಮಾನದಲ್ಲಿಯೇ ನೂರಾರು ವಚನಗಳನ್ನು ಬರೆದಿದ್ದಾರೆ. ಅವುಗಳ ತಿರುಳನ್ನು ಅರ್ಥ ಮಾಡಿಕೊಂಡು ನಾವು ಜೀವನ ಸಾಗಿಸಿದರೆ ಅವರ ಜಯಂತಿ ಅಚರಣೆ ಅರ್ಥಪೂರ್ಣವಾಗುತ್ತದೆ ಎಂದರು.

ಕಂದಾಯ ಇಲಾಖೆ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು,ಸಮುದಾಯದ ಮುಖಂಡರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''