ಚಿಂದೋಡಿ ಮನೆತನದ ದಾಸೋಹ ಕಾರ್ಯ ಶ್ಲಾಘನೀಯ

KannadaprabhaNewsNetwork |  
Published : Aug 30, 2024, 01:00 AM IST
ಕ್ಯಾಪ್ಷನಃ29ಕೆಡಿವಿಜಿ35ಃದಾವಣಗೆರೆಯಲ್ಲಿ ಚಿಂದೋಡಿ ಮನೆತನದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಚಿಂದೋಡಿ ಮನೆತನದ ಹಿರಿಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.......ಕ್ಯಾಪ್ಷನಃ29ಕೆಡಿವಿಜಿ36ಃದಾವಣಗೆರೆಯಲ್ಲಿ ಚಿಂದೋಡಿ ಮನೆತನದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಚಿಂದೋಡಿ ಮನೆತನದವರು ಸ್ವಾಮೀಜಿಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಚಿಂದೋಡಿ ಮನೆತನದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಚಿಂದೋಡಿ ಮನೆತನದವರು ಸ್ವಾಮೀಜಿಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾಸೋಹ ನಡೆಸುವ ಕಾರ್ಯ ಸಾಹಸಮಯ. ಮಠಗಳೇ ದಾಸೋಹ ಕಾರ್ಯ ಮಾಡಲು ಕಷ್ಟ ಪಡುವ ಇಂದಿನ ಕಾಲದಲ್ಲಿ ಶತಮಾನಗಳಿಂದ ಚಿಂದೋಡಿ ಕುಟುಂಬದವರು ಶ್ರಾವಣ ಮಾಸದಲ್ಲಿ 1 ತಿಂಗಳು ಜಂಗಮ ದಾಸೋಹ ಮಾಡುತ್ತಿರುವ ಸೇವಾ ಕಾರ್ಯ ಶ್ಲಾಘನೀಯ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಹಳೇ ಪೇಟೆಯಲ್ಲಿರುವ ಚಿಂದೋಡಿ ಮನೆತನದ ಚಿಂದೋಡಿ ಎಸ್.ವೀರಣ್ಣ ಮತ್ತು ಕುಟುಂಬದವರ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಚಿಂದೋಡಿ ಮನೆತನದ ಹಿರಿಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಆಶೀರ್ವಚನ ನೀಡಿದ ಅವರು, ಹಸಿದವರ ದಾಹ ತಣಿಸುವ ವ್ಯಕ್ತಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ನೀಡಿರುವಂತಹ ಕಾಯಕ ಮತ್ತು ದಾಸೋಹ ಎಂಬ ಅಂಶ ಅಮೂಲ್ಯ ತತ್ವಗಳಾಗಿವೆ. ಇಂತಹ ಆದರ್ಶ ತತ್ವವನ್ನು 1924ರಲ್ಲಿ ಶಾಂತ ವೀರಪ್ಪ ಮತ್ತು ಶಾಂತ ವೀರಮ್ಮ ಪ್ರಾರಂಭಿಸಿದರು. ರಂಗಭೂಮಿ ಉಳಿಸುವ ಹಾಗೂ ಕಲಾವಿದರನ್ನು ಬೆಳೆಸುವ ಕಾರ್ಯದಿಂದ ದೇಶಕ್ಕೆ ಚಿಂದೋಡಿ ಮನೆತನ ಪರಿಚಿತವಾಗಿದೆ. ಇಂದಿಗೂ ಕೂಡಾ ಅವರ ಕುಟುಂಬ ವರ್ಗದವರು ಈ ದಾಸೋಹ ಕಾರ್ಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಶಿಕ್ಷಣ ನಗರಿ, ದಾನದ ನಗರಿ ದಾವಣಗೆರೆಗೆ ಹೆಸರು, ಕೀರ್ತಿ ತರುವಂತಹ ಕೆಲಸವನ್ನು ಚಿಂದೋಡಿ ಮನೆತನ ಮಾಡಿದೆ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಮೂಲತಃ ಅಣ್ಣಿಗೆರೆ ಮನೆತನದ ಶಾಂತವೀರಪ್ಪ ಹಾಗೂ ಶಾಂತ ವೀರಮ್ಮ ಅವರು ಹಸಿವಿನ ನಿಜವಾದ ಬೆಲೆ ತಿಳಿದು ಪ್ರತಿ ಶ್ರಾವಣದಲ್ಲಿ ಜಂಗಮರ ಹಸಿವು ನಿಗಿಸುವ ಕಾರ್ಯ ಪ್ರಾರಂಭಿಸಿದರು. ಒಬ್ಬ ಶಿವಯೋಗಿ ತೃಪ್ತಿಯಾದರೇ ಸಾಕ್ಷಾತ್ ಶಿವನೇ ತೃಪ್ತಿಯಾಗುತ್ತಾನೆ. ಜಂಗಮರಿಗೆ ದಾಸೋಹ ಮಾಡಿದ ಪುಣ್ಯದ ಫಲ ಈ ಮನೆತನವನ್ನು ಕಾಪಾಡಲಿದೆ ಎಂದು ಹೇಳಿದರು.

ಉಕ್ಕಡಗಾತ್ರಿ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್ ಮಾತನಾಡಿ, ಮನೆತನಗಳು ದಾಸೋಹ ಕಾರ್ಯ ನಡೆಸುವುದು ವಿರಳ. ಆದರೆ ಈ ಚಿಂದೋಡಿ ಮನೆತನವು ದಾಸೋಹ ಕಾರ್ಯಕ್ರಮದ ಜತೆಗೆ ವೃತ್ತಿರಂಗ ಹಾಗೂ ಧರ್ಮರಂಗಕ್ಕೆ ಕೊಡುಗೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ಕುಟುಂಬದ ಹಿರಿಯ ಸದಸ್ಯ ಬಂಗಾರೇಶ್ ಅವರು ಅಂದಿನಿಂದ ಆರಂಭಗೊಂಡಿದ್ದ ಈ ದಾಸೋಹ ಸೇವೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಆಂಧ್ರ ಪ್ರದೇಶದ ಉರುಗಾದ್ರಿ ಸಂಸ್ಥಾನ ಮಠದ ಕರಿಬಸವ ರಾಜೇಂದ್ರ ಶ್ರೀಗಳು, ಕುಟುಂಬದ ಹಿರಿಯ ಸದಸ್ಯೆ ಪಾರ್ವತಮ್ಮ, ಶಂಭುಲಿಂಗಪ್ಪ, ರಾಜಶೇಖರ, ತ್ರಿವೇಣಿ, ವೀರಶಂಕರ, ವೀರೇಶ್, ರಾಜಣ್ಣ, ಮಧುಕೇಶ್, ಸೇರಿದಂತೆ ಕುಟುಂಬದ ಸದಸ್ಯರು ಇದ್ದರು.

ಈ ಸಂದರ್ಭದಲ್ಲಿ ಚಿಂದೋಡಿ ಮನೆತನವರು ಮೂವರೂ ಶ್ರೀಗಳಿಗೆ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಎಐ ಆಧರಿತ ಕ್ಯಾಮೆರಾ ಅಳವಡಿಕೆ
ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌