ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಮತ್ತು ತಾಲೂಕು ಘಟಕ, ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಶಾಖೆ ಜಾನಪದ ಜನ್ನೆಯರು (ರಿ.), ಮಂಡ್ಯ ಜಿಲ್ಲೆ ವತಿಯಿಂದ ನಡೆದ ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅವರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಜಯಲಕ್ಷ್ಮಿ ಸೀತಾಪುರ ಅವರು ಸದ್ದಿಲ್ಲದೆ ಆಯ್ಕೆಗಳನ್ನು ಸ್ವೀಕರಿಸಿ ಮುನ್ನಡೆದವರು. ಸ್ವಭಾವಗಳನ್ನು ಮೀರಿದ ಸ್ನೇಹ ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಗರಡಿ ರೋಚಕವಾದ ದೃಶ್ಯ, ಒಂದು ಸಂಸ್ಕೃತಿ ಇದ್ದ ಹಾಗೆ. ಅಂತಹ ಗರಡಿಯಲ್ಲಿ ತೊಡಗಿಸಿಕೊಂಡು ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದರು.ಜಾನಪದ ಕ್ಷೇತ್ರಕ್ಕೆ ಒಂದು ದೊಡ್ಡ ಪರಂಪರೆ ಇದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಯಲಕ್ಷ್ಮಿ ಅವರ ನಿಧನ ಜಾನಪದ ಕ್ಷೇತ್ರಕ್ಕೆ ತುಂಬ ಲಾರದ ನಷ್ಟವಾಗಿದೆ ಎಂದರು.
ರೈತ ಹೋರಾಟಗಾರ್ತಿ ಸುನಂದಾ ಜಯರಾಮ್ ಮಾತನಾಡಿ, ಕುಟುಂಬ ನಿರ್ವಹಣೆ ಹಾಗೂ ಜಾನಪದ ಕ್ಷೇತ್ರದಲ್ಲಿ ಜಯಲಕ್ಷ್ಮಿ ಸೀತಾಪುರ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಅದ್ಭುತವಾದ ಕಲೆ, ಪ್ರತಿಭೆ, ಅಧ್ಯಯನ, ಜ್ಞಾನ ಸಂಪಾದನೆ ಇತ್ತು. ಇವರ ಸಾಧನೆಯನ್ನು ಸರ್ಕಾರ ಗುರುತಿಸಬೇಕಿತ್ತು ಎಂದರು.
ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ.ವ.ನಂ.ಶಿವರಾಮು, ಡಾ.ಎಚ್.ಪಿ.ಗೀತಾ, ಡಾ.ಎನ್.ಎಸ್.ದೇವಿಕಾ, ಎಚ್.ಆರ್.
ಮಂಗಳಾ, ಪ್ರೊ.ಜಿ.ಉಷಾರಾಣಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ಜಾನಪದ ಸಂಘಟಕ ಕೆ.ಎಂ. ಕೃಷ್ಣೇಗೌಡ ಕೀಲಾರ ಉಪಸ್ಥಿತರಿದ್ದರು.