)
- ಲೈಫ್‌ಸ್ಟೈಲ್, ಫ್ಯಾಷನ್, ಫುಡ್ ಫೆಸ್ಟಿವೆಲ್, ಮಕ್ಕಳು, ಮಹಿಳೆಯರು, ಪ್ರತಿಭೆಗಳಿಗೆ ವೇದಿಕೆ - ಏಷ್ಯಾನೆಟ್ ಸುವರ್ಣ ನ್ಯೂಸ್- ಕನ್ನಡಪ್ರಭದಿಂದ ಹೈಸ್ಕೂಲ್ ಮೈದಾನದಲ್ಲಿ ಆಯೋಜನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಜೂ.26, 27 ಹಾಗೂ 28ರಂದು ದಾವಣಗೆರೆ ಸುವರ್ಣ ಸಂಭ್ರಮ-2026 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನ ಲೈಫ್ ಸ್ಟೈಲ್, ಫ್ಯಾಷನ್, ಫುಡ್ ಫೆಸ್ಟಿವೆಲ್ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮೂರು ದಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹಾಲಿ-ಮಾಜಿ ಜನಪ್ರತಿನಿಧಿಗಳು, ಮಹಿಳಾ, ಪುರುಷ, ಯುವ ಮುಖಂಡರು, ವಿವಿಧ ಸಂಘ- ಸಂಸ್ಥೆ, ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
27ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಮುದ್ದುಮಗು ಮತ್ತು ವೇಷಭೂಷಣ ಪ್ರದರ್ಶನ, ಮಧ್ಯಾಹ್ನ 12ರಿಂದ ಅಡುಗೆ ಮಹಾರಾಣಿ (ಮಹಿಳೆಯರಿಗೆ) 1ನೇ ಸುತ್ತು, ಮಧ್ಯಾಹ್ನ 2ರಿಂದ 6 ಗಂಟೆವರೆಗೆ ಓಪನ್ ಸ್ಟೇಜ್ ಮತ್ತು ಗಾಯನ, ಸಂಜೆ 6.30ರಿಂದ 7 ಗಂಟೆವರೆಗೆ ಕಿಡ್ಸ್ ಅಂಡ್ ಫ್ಯಾಮಿಲಿ ಫ್ಯಾಷನ್ ಶೋ, ಮಿನಿಟ್ ಟು ಮಿನಿಟ್, ಬೆಳಗ್ಗೆ 7ರಿಂದ 8 ಗಂಟೆವರೆಗೆ ಹಾಸ್ಯ ಸಂಜೆ-ಮಿಮಿಕ್ರಿ ಗೋಪಿ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಡ್ಯುಯಲ್ ವಾಯ್ಸ್ ಸಿಂಗರ್ ಮಂಜು ಹಾಸನ್‌ರಿಂದ ನಡೆಯಲಿದೆ. ರಾತ್ರಿ 8ರಿಂದ 9 ಗಂಟೆವರೆಗೆ ವೇದಿಕೆ ಕಾರ್ಯಕ್ರಮವಿದೆ. ರಾತ್ರಿ 9ರಿಂದ ನೃತ್ಯ ಕಾರ್ಯಕ್ರಮ ನಡೆಯಲಿವೆ.
ಮುದ್ದುಮಗು ವಿಭಾಗದಲ್ಲಿ 6 ತಿಂಗಳಿನಿಂದ 2 ವರ್ಷದ ಮಕ್ಕಳು, ವೇಷಭೂಷಣದಲ್ಲಿ 2ರಿಂದ 7 ವರ್ಷದ ಮಕ್ಕಳು, ಬೆಂಕಿರಹಿತ ಅಡುಗೆಯಲ್ಲಿ 8ರಿಂದ 14 ವರ್ಷದ ಮಕ್ಕಳು, ಚಿತ್ರಕಲಾ ಸ್ಪರ್ಧೆಗೆ 1ರಿಂದ 10ನೇ ತರಗತಿವರೆಗಿನ ಮಕ್ಕಳು ಪಾಲ್ಗೊಳ್ಳಬಹುದು. ನೃತ್ಯಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಸೋಲೋ, ಗ್ರೂಪ್‌ಗೆ ಅವಕಾಶವಿದ್ದು, 3 ನಿಮಿಷಗಳ ಅವಕಾಶ ಇರುತ್ತದೆ. ಮೂರು ದಿನ ಚಿತ್ರಕಲಾ ಸ್ಪರ್ಧೆ, ನೃತ್ಯ ಸ್ಪರ್ಧೆ, ಅಡುಗೆ ಮಹಾರಾಣಿ, ವೇಷಭೂಷಣ ಸ್ಪರ್ಧೆ, ಬೆಂಕಿರಹಿತ ಅಡುಗೆ, ಬೊಂಬಾಟ್ ಜೋಡಿ, ನಮ್ಮೂರ ಮುದ್ದುಮಗು ಹೀಗೆ ನಾನಾ ಚಟುವಟಿಕೆಗಳು ಇರುತ್ತವೆ. ಪ್ರವೇಶ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಉಚಿತ ಮತ್ತು ಮುಕ್ತ ಅವಕಾಶ ಆಯಾ ವಯೋಮಾನದ ವಿಭಾಗದಲ್ಲಿ ಇರುತ್ತದೆ.
- - -
25ಕೆಡಿವಿಜಿ45, 46, 47, 48ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಇಂದಿನಿಂದ 3 ದಿನಗಳ ಕಾಲ ಏಷ್ಯಾ ನೆಟ್ ಸುವರ್ಣ ನ್ಯೂಸ್-ಕನ್ನಡಪ್ರಭದಿಂದ ನಡೆಯುವ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ವೇದಿಕೆ, ಪೆಂಡಾಲ್ ಸಿದ್ದಗೊಳ್ಳುತ್ತಿರುವುದು.