ಮತಯಂತ್ರಗಳ ಸಂಗ್ರಹಿಸುವ ಭದ್ರತಾ ಕೊಠಡಿ ವ್ಯವಸ್ಥೆ ಪರಿಶೀಲಿಸಿದ ಡಿಸಿ

KannadaprabhaNewsNetwork |  
Published : Mar 29, 2024, 12:48 AM IST
ಕ್ಯಾಪ್ಷನಃ28ಕೆಡಿವಿಜಿ33ಃ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾಯಕೊಂಡ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ಸ್ಥಾಪಿಸಲಾದ ವಾರ್ ರೂಂ ಪರಿಶೀಲನೆ ನಡೆಸಿದರು. ಮಾಯಕೊಂಡ ಸಹಾಯಕ ಚುನಾವಣಾಧಿಕಾರಿ ದುರ್ಗಶ್ರೀ, ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಅಭಿಷೇಕ್ ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು. ........ಕ್ಯಾಪ್ಷನಃ28ಕೆಡಿವಿಜಿ34ಃದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗೆ ನೀಡಿ ಅಲ್ಲಿ ಮತಯಂತ್ರಗಳನ್ನು ಸಂಗ್ರಹಿಸಲು ಸ್ಥಾಪಿಸಲಾದ ಸ್ಟ್ರಾಂಗ್‌ ರೂಂ ಪರಿಶೀಲಿಸಿದರು........ಕ್ಯಾಪ್ಷನಃ28ಕೆಡಿವಿಜಿ35ಃ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೊನ್ನಾಳಿ ತಾ. ಹೊಳೆಹರಳಹಳ್ಳಿ ಹಾಗೂ ಹರಿಹರ ತಾ. ನಂದಿಗುಡಿ ಚೆಕ್‌ಪೋಸ್ಟ್ ಪರಿಶೀಲನೆ ನಡೆಸಿ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಏಪ್ರಿಲ್ 12ರಿಂದ ಆರಂಭವಾಗಲಿದ್ದು, ವಿಧಾನಸಭಾ ಕ್ಷೇತ್ರದಲ್ಲಿನ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್ ರೂಂ ಅನ್ನು ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಪರಿಶೀಲನೆ ಮಾಡಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಏಪ್ರಿಲ್ 12ರಿಂದ ಆರಂಭವಾಗಲಿದ್ದು, ವಿಧಾನಸಭಾ ಕ್ಷೇತ್ರದಲ್ಲಿನ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್ ರೂಂ ಅನ್ನು ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಪರಿಶೀಲನೆ ಮಾಡಿದರು.

ಮಾಯಕೊಂಡ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿನ ಸ್ಥಾಪಿಸಲಾದ ವಾರ್ ರೂಂ ಪರಿಶೀಲನೆ ನಡೆಸಲಾಯಿತು. ವಾರ್ ರೂಂನಲ್ಲಿ ಸಾರ್ವಜನಿಕರಿಗೆ ಸಹಾಯಕ್ಕಾಗಿ ಸ್ಥಾಪಿಸಲಾಗಿರುವ ಸಂಪರ್ಕ ವಿಧಾನ, ದೂರು ಸ್ವೀಕರಿಸಿ ನಿರ್ವಹಣೆ ಮಾಡುವ ವ್ಯವಸ್ಥೆ, ಮತಯಂತ್ರಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಿಕೊಳ್ಳಲಾದ ಭದ್ರತಾ ಕೊಠಡಿ, ಗೈರು ಮತದಾರರ ಪಟ್ಟಿ ಸಿದ್ಧಪಡಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ಹೊನ್ನಾಳಿಗೆ ಭೇಟಿ ನೀಡಿ, ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಭೇಟಿ ನೀಡಿ, ಮತಯಂತ್ರಗಳನ್ನು ಸಂಗ್ರಹಿಸಲು ಸ್ಥಾಪಿಸಲಾದ ಸ್ಟ್ರಾಂಗ್‌ ರೂಂ ಪರಿಶೀಲಿಸಿದರು. ಚೆಕ್‌ ಪೋಸ್ಟ್ ಪರಿಶೀಲನೆ: ಹೊನ್ನಾಳಿ ತಾಲೂಕು ಹೊಳೆಹರಳಹಳ್ಳಿ ಹಾಗೂ ಹರಿಹರ ತಾಲೂಕು ನಂದಿಗುಡಿ ಚೆಕ್‌ ಪೋಸ್ಟ್‌ಗಳಿಗೂ ಡಿಸಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಮಾರ್ಗದಲ್ಲಿ ಹೋಗುವ ಎಲ್ಲ ಮಾದರಿಯ ವಾಹನಗಳನ್ನು ಪರಿಶೀಲನೆ ಮಾಡಬೇಕು. ವಾಹನದಲ್ಲಿ ಸರಕು ಸಾಗಣೆ ಮಾಡುತ್ತಿದ್ದಲ್ಲಿ ನಿಯಮಾನುಸಾರ ಇನ್‌ವಾಯ್ಸ್ ಬಿಲ್, ಡೆಲಿವರಿ ನೋಟ್, ಎಲ್ಲಿಂದ ಎಲ್ಲಿಗೆ, ಯಾವ ಮಾದರಿ ವಸ್ತು ಎಂದು ತಿಳಿದುಕೊಂಡು ದಾಖಲು ಮಾಡಬೇಕೆಂದು ಸೂಚನೆ ನೀಡಿದರು.

ಈ ವೇಳೆ ಮಾಯಕೊಂಡ ಸಹಾಯಕ ಚುನಾವಣಾಧಿಕಾರಿ ದುರ್ಗಶ್ರೀ, ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಅಭಿಷೇಕ್ ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು.

- - - -28ಕೆಡಿವಿಜಿ33ಃ:

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಯಕೊಂಡ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ವಾರ್ ರೂಂ ಪರಿಶೀಲನೆ ನಡೆಸಿದರು. ಮಾಯಕೊಂಡ ಸಹಾಯಕ ಚುನಾವಣಾಧಿಕಾರಿ ದುರ್ಗಶ್ರೀ, ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಅಭಿಷೇಕ್ ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು.

- - - -28ಕೆಡಿವಿಜಿ34ಃ:

ದಾವಣಗೆರೆ ಜಿಲ್ಲಾಧಿಕಾರಿ. ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೊನ್ನಾಳಿ ಸಹಾಯಕ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಮತಯಂತ್ರಗಳನ್ನು ಸಂಗ್ರಹಿಸಲು ಸ್ಥಾಪಿಸಲಾದ ಸ್ಟ್ರಾಂಗ್‌ ರೂಂ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ