ಕನ್ನಡಪ್ರಭ ವಾರ್ತೆ ಮುಳಬಾಗಿಲುಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ಮುಳಬಾಗಿಲು ಟಿಎಪಿಸಿಎಂಎಸ್ ಅಧ್ಯಕ್ಷ ನಾಗಿರುವುದರಿಂದ ನನ್ನ ಸ್ಪರ್ಧೆ ಖಚಿತ ಎಂದು ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ತಾಲೂಕಿನ ಬೈರಕೂರು ಹೋಬಳಿ ಘಟ್ಟು ವೆಂಕಟರವಣಸ್ವಾಮಿ ದೇವಾಲಯದ ಬಳಿ ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಅವರು ಹೆಬ್ಬಣಿ ಮತ್ತು ಮುಷ್ಟೂರು ಗ್ರಾ.ಪಂ ಮಹಿಳೆಯರಿಗೆ ಹಮ್ಮಿಕೊಂಡಿದ್ದ ದೀರ್ಘ ಸುಮಂಗಲೀಭವ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಷದ ವಿಚಾರ ಬಂದಾಗ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ತಾವು ಒಂದೇ. ನಮಗೆ ವೈಯಕ್ತಿಕವಾಗಿ ಮನಸ್ತಾಪ ಇರಬಹುದು, ಆದರೆ ನಾವೆಲ್ಲ ಕಾಂಗ್ರೆಸ್ ಕಾರ್ಯಕರ್ತರು ಎಂದರು.ಮಹಿಳೆಯರ ಬೆಂಬಲಕ್ಕೆ ಮನವಿ
ಎಂ.ಎಲ್.ಸಿ ಅನಿಲ್‌ಕುಮಾರ್ ಮಾತನಾಡಿ, ೨೦೧೩ರಿಂದ ೧೮ರವರೆಗೂ ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್ ಅವರು ೨೦೨೩ರಲ್ಲಿ ಕೋಲಾರದಲ್ಲಿ ಗೆಲುವು ಪಡೆಯಬೇಕಾದರೆ ಇಲ್ಲಿನ ಜನರ ಹಾಗೂ ಮಹಿಳೆಯರ ಪಾತ್ರ ಅಪಾರವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿಯೂ ಆದಿ ನಾರಾಯಣರಿಗೆ ಎಲ್ಲ ಮಹಿಳೆಯರು ಸಹಕಾರ ಮತ್ತು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.ಕಾಂಗ್ರೆಸ್ ಮುಖಂಡ ವಿ.ಆದಿನಾರಾಯಣ ಮಾತನಾಡಿ, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.೫೦ರಷ್ಟು ಮೀಸಲಾತಿ ಬರಲಿದ್ದು, ಈಗಿನಿಂದಲೆ ಮಹಿಳೆಯರು ಚುನಾವಣೆ ಎದುರಿಸುವ ತಂತ್ರಗಾರಿಕೆ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ತಾಲೂಕಿನಾದ್ಯಂತ ಕಾರ್ಯಕ್ರಮ
ಮುಳಬಾಗಿಲು ಕ್ಷೇತ್ರದಲ್ಲಿ ತಾವು ಯಾವುದೇ ರೀತಿಯ ಚುನಾವಣಾ ಪ್ರಚಾರಕ್ಕಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಕೇವಲ ಸಮಾಜ ಸೇವೆ ಮತ್ತು ಕಾಂಗ್ರೆಸ್ ಸಂಘಟಿಸಲು ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೀರ್ಘ ಸುಮಂಗಲೀಭವ ಕಾರ್ಯಕ್ರಮ ತಾಲೂಕಿನ ೩೦ ಗ್ರಾಪಂಗಳಲ್ಲಿ ಸೇರಿದಂತೆ ನಗರದ ಪ್ರತಿ ವಾರ್ಡ್‌ನಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.ಸುನೀತಾ ಆದಿನಾರಾಯಣ, ಮುಖಂಡರಾದ ರಾಮಲಿಂಗರೆಡ್ಡಿ, ಆಲಂಗೂರು ಶಿವಣ್ಣ, ರಾಜೇಂದ್ರಗೌಡ, ಉತ್ತನೂರು ಶ್ರೀನಿವಾಸ್, ತ್ರಿವೇಣಮ್ಮ, ಅಮಾನುಲ್ಲಾ, ಮುನಿಆಂಜಿನಪ್ಪ, ಉಮಾ ಶಂಕರ್, ವಿವೇಕಾನಂದ ಗೌಡ, ಮಂಡಿಕಲ್ ಮಂಜುನಾಥ್, ನಾಗೇಶ್ವರಿ, ಶಶಿಕಲಾ, ಪೆದ್ದಪ್ಪಯ್ಯ, ಶಂಕರ್ರೆಡ್ಡಿ, ಲೀಲಾವತಿ, ಶತೃಜ್ಞಗೌಡ, ಎಂ.ಜೆ.ರಾಮಚಂದ್ರಪ್ಪ, ಕಾರ್ಗಿಲ್ ವೆಂಕಟೇಶ್ ಇದ್ದರು.