ಡಿಸಿಸಿ ಬ್ಯಾಂಕ್‌ ಆಡಳಿತ ಕಾಂಗ್ರೆಸ್‌ ತೆಕ್ಕೆಗೆ: ವಿಶ್ವಾಸ

KannadaprabhaNewsNetwork |  
Published : May 30, 2025, 12:04 AM IST
೨೯ಕೆಎಲ್‌ಆರ್-೩ಕೋಲಾರದಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣೆ ನಂತರ ಸುದ್ದಿಗಾರರೊಂದಿಗೆ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕಾಂಗ್ರೇಸ್ ನಲ್ಲಿ ಯಾವುದೇ ಗುಂಪುಗಳಿಲ್ಲ. ಬ್ಯಾಲಹಳ್ಳಿ ಗೌವಿಂದಗೌಡರು ಯಾವ ಪಕ್ಷ ಎನ್ನುವುದು ನಮಗೆ ಗೊತ್ತಿಲ್ಲ. ಡಿಸಿಸಿ ಬ್ಯಾಂಕ್‌ನ ನಾಲ್ಕು ನಿರ್ದೇಶಕರ ಫಲಿತಾಂಶ ನ್ಯಾಯಾಲಯದಲ್ಲಿದೆ. ಕಾಂಗ್ರೆಸ್‌ನ ೧೦ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗುವುದಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಸಾಸಕ ಕೊತ್ತೂರು ಮಂಜುನಾಥ್‌.

ಕನ್ನಡಪ್ರಭ ವಾರ್ತೆ ಕೋಲಾರಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದಿದೆ. ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ನಡೆಸಿ ಸರಿಪಡಿಸಲು ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.ನಗರದಲ್ಲಿ ಬುಧವಾರ ಡಿಸಿಸಿ ಬ್ಯಾಂಕಿನ ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ೧೮ ನಿರ್ದೇಶಕರುಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಬಹುಮತವಿದೆ

ಉಳಿದ ೧೨ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಳಬಾಗಿಲು ಜೆಡಿಎಸ್ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದೆ. ಮೈತ್ರಿ ಪಕ್ಷ ಮಂಜೇನಹಳ್ಳಿ ಗುಡಿಬಂಡೆಯಲ್ಲಿ ಗೆದ್ದಿದೆ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದರು.

ಕಾಂಗ್ರೇಸ್ ನಲ್ಲಿ ಯಾವುದೇ ಗುಂಪುಗಳಿಲ್ಲ. ಬ್ಯಾಲಹಳ್ಳಿ ಗೌವಿಂದಗೌಡರು ಯಾವ ಪಕ್ಷ ಎನ್ನುವುದು ನಮಗೆ ಗೊತ್ತಿಲ್ಲ. ಡಿಸಿಸಿ ಬ್ಯಾಂಕ್‌ನ ನಾಲ್ಕು ನಿರ್ದೇಶಕರ ಫಲಿತಾಂಶ ನ್ಯಾಯಾಲಯದಲ್ಲಿದೆ. ಕಾಂಗ್ರೆಸ್‌ನ ೧೦ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗುವುದಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ ಎಂದರು.

ಬೆದರಿಕೆ ಹಾಕಿದರೆ ದೂರು ನೀಡಲಿರಮೇಶ್ ಕುಮಾರ್ ಯಾರನ್ನು ಬೆದರಿಸುವ ಮಟ್ಟಕ್ಕೆ ಹೋಗುವ ವ್ಯಕ್ತಿಯಲ್ಲ ಅವರ ಆ ರೀತಿ ಮಾಡಿದ್ದರೆ ದೂರು ನೀಡಲಿ. ಅದನ್ನು ಪೋಲೀಸರು ತನಿಖೆ ಮಾಡುತ್ತಾರೆ. ಯಾರನ್ನು ಯಾರೇ ಬೆದರಿಕೆ ಹಾಕಿದರೆ ಸಹಿಸುವ ಮಾತೇ ಇಲ್ಲ, ಯಾರದೇ ಮಾತು ಕೇಳಿ ಲೋಕಾಯುಕ್ತರು ದಾಳಿ ನಡೆಸುವುದಿಲ್ಲ. ರಮೇಶ್‌ಕುಮಾರ್‌ ವಿರುದ್ಧ ದೂರುವ ಬದಲು ದೂರು ನೀಡಲಿ ಎಂದು ಬ್ಯಾಲಹಳ್ಳಿ ಗೋವಿಂದಗೌಡರಿಗೆ ತಿರುಗೇಟು ನೀಡಿದರು.

ಎರಡು ಜಿಲ್ಲೆಯ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕಾಂಗ್ರೇಸದ ಹೈಕಮಾಂಡ್ ಚರ್ಚೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ ಎಂದು ಹೇಳಿದರು.

ಶಾಸಕರು ಸ್ಪರ್ಧಿಸಬಾರದೆ?

ಎಂಎಲ್‌ಸಿ ಅನಿಲ್‌ಕುಮಾರ್‌ ಮಾತನಾಡಿ, ತಾವು ಡಿಸಿಸಿ ಬ್ಯಾಂಕ್‌ಗೆ ನಾಮಿನಿ ನಿರ್ದೆಶಕನಾಗಿ ಬರುತ್ತೇನೆ. ಕಳೆದ ಎರಡು ಅವಧಿಗೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಕ್ಷೇತ್ರದಿಂದ ಚುನಾಯಿತರಾಗಿ ಡಿಸಿಸಿ ಬ್ಯಾಂನ ನಿರ್ದೇಶಕರಾಗಿದ್ದಾರೆ, ಶಾಸಕರು ಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವುದು ಹೊಸ ವಿಚಾರವಲ್ಲ. ಆದರೆ ಶಾಸಕ ಕೊತ್ತೂರು ಮಂಜನಾಥ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸ್ಪರ್ಧೆ ಮಾಡಿದಾಗ ವಿರೋಧ ಏಕೆ ಬಂತು ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಮೋಹನ್ ರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಮಾಜಿ ನಿರ್ದೇಶಕ ಊಲವಾಡಿ ಬಾಬು, ವೆಂಕಟೇಶ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ನಂದಿನಿ ಪ್ರವೀಣ್, ಮೈಲಾಂಡಹಳ್ಳಿ ಮುರಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ