ಕನ್ನಡಪ್ರಭವಾರ್ತೆ ಮಧುಗಿರಿ
ಸೋಮವಾರ ಮಧುಗಿರಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
3 ಸಲ ಚೆಕ್ ಲಿಸ್ಟ್ ತೆಗೆಸಿದರೂ ಒಟಿಪಿ ಬಂದರೂ ಬರುತ್ತಿಲ್ಲವೆಂದು ಅಧಿಕಾರಿಗಳು ನೆಪವೊಡ್ಡಿ ಪೌತಿ ಖಾತೆ ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕತೆ ಹೇಳುತ್ತಿದ್ದಾರೆ. ಎಂದು ರೈತ ಹನುಮಂತರಾಜು ದೂರಿದಾಗಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಅರ್ಜಿ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.ಈ ಸಭೆಯಲ್ಲಿ 280ಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಕಂದಾಯ ಇಲಾಖೆಗೆ ಸಂಬಂಧಪಟ್ಟವು. ಅಂದರೆ ವಿಲೇಜ್ ಅಕೌಂಟೆಂಟ್, ರೆವಿನ್ಯೂ ಇನ್ಸ್ ಪೆಕ್ಟರಗಳು ದಿನೇ ದಿನೇ ರೈತರ ಪೌತಿ ಖಾತೆಗಳು, ಆರ್‌ಆರ್‌ಟಿ, ದರ್ಕಾಸ್ತ್ ,ಇನ್ನಿತರೆ ರೈತರ ಸಮಸ್ಯೆಗಳನ್ನು ವಿಲೇವಾರಿ ಮಾಡದೆ ಮೀನಮೇಷ ಏಣಿಸಿದ್ದರಿಂದ ರೈತರು ಅರ್ಜಿ ಕೈಯಲ್ಲಿಡಿದು ಬರುತ್ತಾರೆ. ಕಂದಾಯ ಮತ್ತು ಭೂಮಿ ಕೇಂದ್ರದ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಿದ್ದರೆ ಇಷ್ಟು ಅರ್ಜಿಗಳು ಬರುತ್ತಿರಲಿಲ್ಲ. ಇದನ್ನು ಪ್ರಸ್ತುತ ಗಂಭೀರವಾಗಿ ಪರಿಗಣಿಸಿದ್ದು ಅತಿ ಶೀಘ್ರವಾಗಿ ಅಧಿಕಾರಿಗಳು ಆರ್ ಆರ್ ಟಿ ,ಪೌತಿ ಖಾತೆ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಇನ್ನೂ ಮುಂದಾದರು ಕಂದಾಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.
ಸಾಗುವಳಿ ಇದ್ದವರಿಗೆ ತ್ವರಿತವಾಗಿ ಖಾತೆ ಮಾಡಿಕೊಡಲು ಕ್ರಮ ವಹಿಸಿ, ದರ್ಕಾಸ್ತ್,ಪೋಡಿ,ಪೌತಿಖಾತೆ,ಆರ್.ಆರ್.ಟಿ.ಮಾಡಲು ಕನಿಷ್ಠ 3 ದಿನ ಆ ಯಾ ಸರ್ಕ್‌ಲ್ಲಿನಲ್ಲಿ ಪೌತಿ ಖಾತೆ ಮಾಡಿ ಕೊಟ್ಟು ರೈತರ ಸಮಸ್ಯೆ ಬಗೆಹರಿಸಿ ಒಳ್ಳೆಯ ಹೆಸರು ಪಡೆಯರಿ ಎಂದು ವಿಎ,ಆರ್ ಐಗಳಿಗೆ ಸಲಹೆ ನೀಡಿದರು. ರೈತರ ಬೇಡಿಕೆಗಳನ್ನು ಆಲಿಸಿ ಶೀಘ್ರದಲ್ಲೇ ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರೈತರಿಗೆ ಭರವಸೆ ನೀಡಿದರು.
ಈ ವೇಳೆ ಎಡಿಸಿ ತಿಪ್ಪೇಸ್ವಾಮಿ ,ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್ ಶ್ರೀನಿವಾಸ್ ಕಂದಾಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.