ಕನ್ನಡಪ್ರಭ ವಾರ್ತೆ ಖಾನಾಪುರ
ಹಿರೇ ಅಂಗ್ರೊಳ್ಳಿ ಬಳಿ ಪತ್ತೆಯಾಗಿರುವುದು ಗಂಡು ಚಿರತೆಯಾಗಿದ್ದು, ವಯಸ್ಸು ಸುಮಾರು 12 ವರ್ಷ ಇರಬಹುದು. ಚಿರತೆಯ ಉಗುರು, ಹಲ್ಲುಗಳು, ಚರ್ಮ, ಮೂಳೆಗಳು ಹಾಗೂ ಇತರೆ ಎಲ್ಲ ಅಂಗಾಂಗಳು ಸ್ವಾಭಾವಿಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೇಲ್ನೋಟಕ್ಕೆ ವಯೋಸಹಜವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸಿಎಫ್ ಮರಿಯಾ ಕ್ರಿಸ್ತು ರಾಜಾ, ಗಂದಿಗವಾಡ ಪಿಡಿಒ ಬಾಲರಾಜ ಭಜಂತ್ರಿ, ವಿಧಿ ವಿಜ್ಞಾನ ವನ್ಯಜೀವಿ ಸಂಶೋಧನಾ ತಜ್ಞ ಎಸ್.ಮಧುಸೂಧನ ಸೇರಿದಂತೆ ಅರಣ್ಯಾಧಿಕಾರಿಗಳು, ಅರಣ್ಯ ಪಾಲಕರು ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಚಿರತೆಯ ಮರಣೋತ್ತರ ಪರಿಕ್ಷೆ ನಡೆಸಿ ಮೃತ ದೇಹವನ್ನು ದಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.