ಹುಬ್ಬಳ್ಳಿ:
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ರೇಷನ್ ಕಾರ್ಡ್ಗಳಿಗೆ ಇ-ಕೆವೈಸಿ (e-KYC) ಮಾಡಿಸಲು ಅ. 20 ಅಂತಿಮ ದಿನವಾಗಿ ನಿಗದಿಪಡಿಸಲಾಗಿದೆ. ಆದರೆ, ಅಗತ್ಯ ಸೌಲಭ್ಯಗಳ ಕೊರತೆ ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ಪರದಾಡುವಂತಾಗಿದೆ. ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಮುಗಿಯದೆ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ನಿರಂತರ ಸರ್ವರ್ ಡೌನ್:ಬೆಳಗ್ಗೆಯಿಂದ ರಾತ್ರಿ ವರೆಗೆ ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಹಕ ಸೇವಾ ಕೇಂದ್ರಗಳ (ಬೆಂಗಳೂರು ಒನ್ / ಕರ್ನಾಟಕ ಒನ್) ಮುಂದೆ ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಆದರೆ, ಸರ್ವರ್ ಸದಾಕಾಲ ಕೈಕೊಡುತ್ತಿರುವುದರಿಂದ ಗಂಟೆಗಳಾದರೂ ಒಪನ್ ಆಗದೆ, ದಿನವಿಡೀ ಕಾಯ್ದು ವಾಪಸ್ ಹೋಗುವಂತಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಜತೆಗೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಆಧಾರ್ ಅಪ್ಡೇಟ್ ಸಮಸ್ಯೆ:ಹಲವು ಫಲಾನುಭವಿಗಳ ಆಧಾರ್ ಕಾರ್ಡ್ನಲ್ಲಿ ಬಯೋಮೆಟ್ರಿಕ್ ಕೈಕೊಡುವುದು, ಮೊಬೈಲ್ ನಂಬರ್ ಲಿಂಕ್ ಆಗದಿರುವುದು ಅಥವಾ ವಿಳಾಸ ಹಾಗೂ ಹೆಸರುಗಳಲ್ಲಿ ವ್ಯತ್ಯಾಸವಿರುವುದು ತೊಂದರೆಗೆ ಕಾರಣವಾಗಿದೆ. ಆಧಾರ್ ಕೇಂದ್ರಗಳಿಗೆ ಅಲೆದಾಡಿದರೂ ಅಲ್ಲಿಯೂ ಕೂಡ ತೀವ್ರ ನೂಕುನುಗ್ಗಲು ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಆಧಾರ್ ಅಪ್ಡೇಟ್ ಮಾಡಿಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಅಶಕ್ತರ ಗೋಳು:ನಡೆದಾಡಲಾಗದ ಹಿರಿಯ ನಾಗರಿಕರು, ಅಶಕ್ತರು ಹಾಗೂ ವಿಕಲಚೇತನರು ಬಯೋಮೆಟ್ರಿಕ್ ನೀಡಲು ಬೆರಳುಗಳ ರೇಖೆಗಳು ಮಸುಕಾಗಿರುವ ಕಾರಣದಿಂದಾಗಿ ಹಾಗೂ ಕೇಂದ್ರಗಳಿಗೆ ಅಲೆದಾಡಲಾರದೆ ನರಕಯಾತನೆ ಅನುಭವಿಸುತ್ತಿದ್ದಾರೆ. ದೂರದ ಹಳ್ಳಿಗಳಿಂದ ಬರುವ ಜನರಿಗೆ ಬಸ್ ಖರ್ಚು ಹಾಗೂ ಅಲೆದಾಟದ ದಣಿವು ಮಾತ್ರ ಉಳಿಯುತ್ತಿದೆ.ಮಾಹಿತಿ ಕೊರತೆ ಮತ್ತು ಆತಂಕ: